Keralam Shocker: 16ರ ಬಾಲಕಿ ಮೇಲೆ 25ರ ಯುವತಿಯಿಂದ ಬೆಚ್ಚಿ ಬೀಳಿಸೋ ಕೃತ್ಯ, ಸ್ನೇಹಾ ವಿರುದ್ಧ 4ನೇ ಪೋಕ್ಸೋ ಕೇಸ್, ಶಾಕಿಂಗ್ ಘಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸ್ನೇಹಾ ಮರ್ಲಿನ್


Last Updated:

ದೇವರ ಸವಂತಹ ನಾಡು ಎಂದು ಕರೆಯಲ್ಪಡುವ ಕೇರಳಂನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. 16 ಬಾಲಕಿಯ ಮೇಲೆ 25ರ ಯುವತಿಯ ಕೃತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಸ್ನೇಹಾ ಮರ್ಲಿನ್
ಸ್ನೇಹಾ ಮರ್ಲಿನ್

ಕಾಸರಗೋಡಿನಲ್ಲಿ 16 ವರ್ಷದ ಬಾಲಕಿ ಮೇಲೆ ಮನೆಯಲ್ಲಿ ಮಲಗಿದ್ದಾಗ ಅತ್ಯಾಚಾರ ನಡೆಸಿದ ಪ್ರಕರಣದ ಆಘಾತಕಾರಿ ವಿವರಗಳು ಈಗ ದೇವರಸ್ವಂತ ನಾಡು ಕೇರಳಂ ಅನ್ನು ಬೆಚ್ಚಿ ಬೀಳಿಸಿದೆ. 25 ವರ್ಷದ ಸ್ನೇಹಾ ಮರ್ಲಿನ್ (Sneha Merlin) ಬಾಲಕಿಯ (Girl) ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

16 ವರ್ಷದ ಬಾಲಕಿಯ ತಾಯಿಯ ಸ್ನೇಹಿತೆಯಾಗಿರುವ ಸ್ನೇಹಾ ಮರ್ಲಿನ್ ಒಂದು ವರ್ಷದಿಂದ ಬಾಲಕಿಯ ಮನೆಯಲ್ಲಿ ವಾಸಿಸುತ್ತಿದ್ದರು. ಬಾಲಕಿಯ ಹೇಳಿಕೆಯ ಪ್ರಕಾರ, ಆಕೆಯ ತಾಯಿ ಮನೆಯಲ್ಲಿದ್ದಾಗಲೂ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.

ಮಾದಕವಸ್ತು ಕಳ್ಳಸಾಗಣೆ ಪ್ರಕರಣದ ಆರೋಪಿಯಾಗಿರುವ ಸ್ನೇಹಾ ಮತ್ತು ಹುಡುಗಿಯ ತಾಯಿ ಕಣ್ಣೂರು ಜೈಲಿನಲ್ಲಿ ಭೇಟಿಯಾಗಿದ್ದಾರೆ.

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಂದೆ ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಸ್ನೇಹಾಳನ್ನು ಆಶ್ರಯ ಗೃಹಕ್ಕೆ ಸ್ಥಳಾಂತರಿಸಿದ ನಂತರ ಬಾಲಕಿ ತನ್ನ ಮೇಲಿನ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾಳೆ.

ಮನೆಯಲ್ಲಿ ಮಲಗಿದ್ದಾಗ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೂರಿನ ಮೇರೆಗೆ 25 ವರ್ಷದ ಯುವತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸರು ಸ್ನೇಹಾ ಮೆರ್ಲಿನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಸ್ನೇಹಾ ಮೆರ್ಲಿನ್ ವಿರುದ್ಧದ ಪೋಕ್ಸೋ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.

ಘಟನೆಯ ಸಮಯದಲ್ಲಿ, ಹುಡುಗಿ ಭಯದಿಂದಾಗಿ ಯಾರಿಗೂ ಈ ಸಂಗತಿಯನ್ನು ಬಹಿರಂಗಪಡಿಸಲಿಲ್ಲ ಎನ್ನಲಾಗಿದೆ. ಕೌನ್ಸೆಲಿಂಗ್‌ಗೆ ಒಳಪಡುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

12ರ ಬಾಲಕಿಯ ಬ್ಯಾಗ್​​ನಲ್ಲಿತ್ತು ಅಶ್ಲೀಲ ಚಿತ್ರಗಳಿದ್ದ ಮೊಬೈಲ್

12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸ್ನೇಹಾ ಮೆರ್ಲಿನ್ ಅವರನ್ನು ಮಾರ್ಚ್ 14, 2025 ರಂದು ಬಂಧಿಸಲಾಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed