Anurag Kashyap: ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ, ‘8’ ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! | | ACTPnews

ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ; 8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್!


Last Updated:

ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಅಭಿನಯದ ಮೊದಲ ಕನ್ನಡ ಸಿನಿಮಾದ ಗ್ಲಿಂಪ್ಸ್ ಹೊರ ಬಂದಿದೆ. ಇದರಲ್ಲಿ ಇವರ ಪಾತ್ರ ಹೇಗಿದೆ ಅನ್ನೋದು ರಿವೀಲ್ ಆಗಿದೆ. ಈ ಪಾತ್ರದ ಹೆಸರು ಏನು ಅನ್ನೋದು ಗೊತ್ತಾಗಿದೆ. ಈ ಎಲ್ಲವನ್ನು ವಿವರವಾಗಿ ಹೇಳುವ ಒಂದು ಸ್ಟೋರಿ ಇಲ್ಲಿದೆ ಓದಿ.

ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ; 8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್!
ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ; 8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್!

ಡೇವಿಡ್ ಪಿಂಟೋ…ಈ ಹೆಸರು ಕೊನೆಯಲ್ಲಿ ಬರುತ್ತದೆ. ಆದರೆ, ಆರಂಭದಲ್ಲಿ ಇಲ್ಲಿ ಪಡೆದ ಪ್ರಶಸ್ತಿಗಳು, ನಂಬಿದ ದೇವರು, ಕೊರಳಿಗೆ ಹಾಕಿಕೊಳ್ಳುವ ಚಿನ್ಹೆ, ಊದು ವಿಸಿಲ್, ಹಿನ್ನೆಯಲ್ಲಿ ಮೂರು ಭಾಷೆಯ ನಿರೂಪಣೆ, ಮೊದಲು ಕನ್ನಡ, ತೆಲುಗು ಹಿಂದಿ ಮತ್ತು ಕೊನೆಗೆ ಮತ್ತೆ ಕನ್ನಡ (Kannada) ಹೀಗೆ ಮೂರು ಭಾಷೆಯಲ್ಲಿ ಈ ಡೇವಿಡ್ ಪಿಂಟೋ (David Pinto) ಕತೆ ಹೇಳಾಗಿದೆ. ಈ ಡೇವಿಡ್ ಬೇರೆ ಯಾರೋ ಅಲ್ಲ. ಅದು ಬಾಲಿವುಡ್‌ನ (Bollywood) ನಟ-ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರೇ ಆಗಿದ್ದಾರೆ. ಇವರ ಕನ್ನಡದ ಮೊದಲ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ‘8’ ಅನ್ನುವ ಟೈಟಲ್ ಇದೆ. ಇದರ ಸಂಪೂರ್ಣ ವಿವರ ಮುಂದೆ ಇದೆ ಓದಿ.

ಡೇವಿಡ್ ಪಿಂಟೋ..

ಅನುರಾಗ್ ಕಶ್ಯಪ್ ಪಾತ್ರದ ಹೆಸರು. 8 ಚಿತ್ರದಲ್ಲಿ ಅನುರಾಗ್ ಈ ಡೇವಿಡ್ ಪಿಂಟೋ ಅನ್ನುವ ರೋಲ್ ಮಾಡಿದ್ದಾರೆ. ಇವರು ಇಲ್ಲಿ ಫುಟ್‌ಬಾಲ್ ಕೋಚ್ ಆಗಿದ್ದಾರೆ.
Anurag Kashyap Sujay Shastry 8 Movie glimpse released

8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್

(ಚಿತ್ರ ಕೃಪೆ: ಅನುರಾಗ್ ಕಶ್ಯಪ್ ಇನ್‌ಸ್ಟಾಗ್ರಾಮ್)

ಆದರೆ, ಮೊದಲು ಒಬ್ಬ ಪ್ರಸಿದ್ದ ಆಟಗಾರ ಅನ್ನೋದು ಇಲ್ಲಿ ತಿಳಿಯುತ್ತದೆ. ಚಿತ್ರದ ಡೈರೆಕ್ಟರ್ ಸುಜಯ್ ಶಾಸ್ತ್ರಿ ಈ ಒಂದು ಪಾತ್ರವನ್ನ ನಿರೂಪಣೆ ಮೂಲಕ ಪರಿಚಯ ಮಾಡಿದ್ದಾರೆ.

ಇಲ್ಲೊಂದು ವಿಶೇಷ

ಚಿತ್ರದ ಈ ಒಂದು ಗ್ಲಿಂಪ್ಸ್ ಅಲ್ಲಿ ಒಂದು ವಿಶೇಷ ಇದೆ. ಬಹು ಭಾಷೆಯ ಒಂದು ಗ್ಲಿಂಪ್ಸ್ ವಿಡಿಯೋ ಇದಾಗಿದೆ. ಮೊದಲು ಕನ್ನಡ ಲೈನ್ ಬರುತ್ತವೆ. ಅದಾದ್ಮೇಲೆ ತೆಲುಗು ಬರುತ್ತವೆ. ನಡುವೆ ಹಿಂದಿ ಬಂದು ಹೋಗುತ್ತವೆ.

ಕೊನೆಯಲ್ಲಿ ಮತ್ತೆ ಕನ್ನಡ ಬರುತ್ತದೆ. ಈ ರೀತಿ ಮೂರು ಭಾಷೆಯ ಒಂದು ಗ್ಲಿಂಪ್ಸ್ ವಿಡಿಯೋ ಇದಾಗಿದೆ. ವಿಶೇಷ ಅಂದ್ರೆ ಇಲ್ಲಿ ಬೇರೆ ಯಾವುದೇ ಪಾತ್ರಗಳಿಲ್ಲ. ಬದಲಾಗಿ ಅನುರಾಗ್ ಕಶ್ಯಪ್ ಪಾತ್ರದ ಪರಿಚಯ ಮಾತ್ರ ಇದೆ.

ಅದ್ಭುತ ನಿರೂಪಣೆ

ಡೈರೆಕ್ಟರ್ ಸುಜಯ್ ಶಾಸ್ತ್ರಿ ಇಲ್ಲಿ ತುಂಬಾನೆ ಚೆನ್ನಾಗಿಯೇ ಈ ಸ್ಕ್ರಿಪ್ಟ್ ಮಾಡಿದ್ದಾರೆ. ಅದನ್ನ ಅಷ್ಟೆ ಎಫೆಕ್ಟಿವ್ ಆಗಿಯೇ ಹೇಳಿದ್ದಾರೆ. ಅದು ಕೇಳುಗರಿಗೂ ಇಂಟ್ರಸ್ಟಿಂಗ್ ಆಗಿದೆ ಅನಿಸುತ್ತದೆ.

Anurag Kashyap Sujay Shastry 8 Movie glimpse released

ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ

(ಚಿತ್ರ ಕೃಪೆ: ಅನುರಾಗ್ ಕಶ್ಯಪ್ ಇನ್‌ಸ್ಟಾಗ್ರಾಮ್)

ಇಲ್ಲಿ ಮೂರು ಭಾಷೆಯನ್ನು ಅಷ್ಟೆ ಚೆನ್ನಾಗಿಯೇ ಹೇಳಿದ್ದಾರೆ. ಅದಕ್ಕೇನೆ ಇದು ಎಲ್ಲ ಭಾಷೆಯ ಪ್ರೇಕ್ಷಕರನ್ನ ಸೆಳೆಯುವಂತೆ ಇದೆ. ಈ ಒಂದು ಚಿತ್ರದಲ್ಲಿ ಜೀವನದ ಎರಡನೇ ಅವಕಾಶ ವಿಚಾರ ಇದೆ.

ಕ್ರೀಡಾಧರಿಸಿದ ಸಿನಿಮಾ

8 ಚಿತ್ರ ಫುಟ್‌ಬಾಲ್ ಆಧರಿಸಿದ ಚಿತ್ರವೇ ಆಗಿದೆ. ಆದರೆ, ಇಲ್ಲೊಂದು ಎಮೋಷನಲ್ ಕತೆ ಇದೆ. ಅನುರಾಗ್ ಕಶ್ಯಪ್ ಇಲ್ಲಿ ಆ ಒಂದು ಪಾತ್ರ ಮಾಡಿದ್ದಾರೆ. ಇಲ್ಲಿವರೆಗೂ ಇವರು ಈ ರೀತಿಯ ಎಮೋಷನಲ್ ರೋಲ್ ಮಾಡಿರಲಿಲ್ಲ.

ಚಿತ್ರದ ಇತರ ಮಾಹಿತಿ

ಈ ಚಿತ್ರವನ್ನ ಸುಜಯ್ ಶಾಸ್ತ್ರಿ ಡೈರೆಕ್ಷನ್ ಮಾಡಿದ್ದಾರೆ. ಹೇಮಂತ್ ಜೋಯಿಸ್ ಸಂಗೀತ ಕೊಟ್ಟಿದ್ದಾರೆ. ಗುರು ಪ್ರಸಾದ್ ನಾರ್ನಾಡ್ ಕ್ಯಾಮರಾವರ್ಕ್ ಮಾಡಿದ್ದಾರೆ.

ಬೆಂಗಳೂರಿನ ಸುತ್ತಮುತ್ತಲಿನ ಪ್ರಮುಖ ಸ್ಥಳದಲ್ಲಿ ಈ ಚಿತ್ರದ ಶೂಟಿಂಗ್ ಆಗಿದೆ. ಇನ್ನುಳಿದಂತೆ ಡೈರೆಕ್ಟರ್ ಸುಜಯ್ ಶಾಸ್ತ್ರ ಅವರ ಮೊದಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಮಾಡಿದರು.

ಅದಾದ್ಮೇಲೆ ಎಲ್ರ ಕಾಲೆಳಿಯುತ್ತೆ ಕಾಲ ಚಿತ್ರ ಮಾಡಿದ್ದರು. ಇದು ಇತ್ತೀಚಿಗೆ ರಿಲೀಸ್ ಆಗಿದೆ. ಚಂದನ್ ಶೆಟ್ಟಿ ಈ ಚಿತ್ರದ ನಾಯಕರಾಗಿದ್ದರು. ಇದರ ಪ್ರಚಾರವೂ ಜೋರಾಗಿಯೇ ಆಗಿತ್ತು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports