Actor: ಡಿವೋರ್ಸ್ ಪಡೆದು 11 ವರ್ಷಗಳ ಬಳಿಕ ಮಾಜಿ ಪತ್ನಿಯೊಂದಿಗೆ ಖ್ಯಾತ ನಟನ ಮರುಮದುವೆ? | | ACTPnews

ಶಲೀನ್ ಭಾನೋಟ್


Last Updated:

ಇತ್ತೀಚಿಗೆ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ನಟ ,ತಮ್ಮ ಮಾಜಿ ಪತ್ನಿ ದಲ್ಜೀತ್ ಕೌರ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ನಟ ಶಲೀನ್ ಭಾನೋಟ್ ಇದೀಗ ಕೋಪಗೊಂಡಿದ್ದು, ಸುಳ್ಳು ಮಾಹಿತಿ ಹಂಚಿದ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಲೀನ್ ಭಾನೋಟ್
ಶಲೀನ್ ಭಾನೋಟ್

ಹಿಂದಿ ಕಿರುತೆರೆಯ ಜನಪ್ರಿಯ ನಟ ಶಲೀನ್ ಭಾನೋಟ್ (Actor Shaleen Bhanot) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆ ಒಂದು ಪೋಸ್ಟ್ ನಿಂದಾಗಿ ನಟನ ಜೀವನಕ್ಕೆ ಸಂಬಂಧಿಸಿದ ಹೊಸ ಚರ್ಚೆಗೆ ಮುನ್ನೆಲೆಗೆ ಬಂದಿದ್ದು, ಇದೀಗ ಎಲ್ಲಾ ಚರ್ಚೆಗಳಿಗೂ ನಟ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ.

ಏನಪ್ಪಾ ವಿಚಾರ ಅಂದ್ರೆ, ಇತ್ತೀಚಿಗೆ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ನಟ ,ತಮ್ಮ ಮಾಜಿ ಪತ್ನಿ ದಲ್ಜೀತ್ ಕೌರ್ ಜೊತೆ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ನಟ ಶಲೀನ್ ಭಾನೋಟ್ ಇದೀಗ ಕೋಪಗೊಂಡಿದ್ದು, ಸುಳ್ಳು ಮಾಹಿತಿ ಹಂಚಿದ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಲೀನ್ ಭಾನೋಟ್ ತಮ್ಮ ವೃತ್ತಿಜೀವನವನ್ನು ಜನಪ್ರಿಯ ರಿಯಾಲಿಟಿ ಶೋ MTV ರೋಡೀಸ್ ಮೂಲಕ ಆರಂಭಿಸಿದರು. ಈ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ ಅವರು ನಂತರ ಹಿಂದಿ ಕಿರುತೆರೆಯ ಹಲವು ಪ್ರಮುಖ ಧಾರಾವಾಹಿಗಳಲ್ಲಿ ಅಭಿನಯಿಸಿ ಗಮನ ಸೆಳೆದರು. ಸಾತ್ ಫೇರೆ, ಕುಲವಧು, ದೋ ಹಂಸೋ ಕಾ ಜೋಡಾ ಹಾಗೂ ಸೂರ್ಯಪುತ್ರ ಕರ್ಣ ಸೇರಿದಂತೆ ಅನೇಕ ಧಾರಾವಾಹಿಗಳ ಮೂಲಕ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಇದನ್ನೂ ಓದಿ: Raghava Lawrence: ರಾಜಕೀಯಕ್ಕೆ ಎಂಟ್ರಿ ಕೊಟ್ಟ ‘ಕಾಂಚನಾ’ ಖ್ಯಾತಿಯ ರಾಘವ ಲಾರೆನ್ಸ್! ವಿಜಯ್ ಪಕ್ಷ ಅಲ್ವಾ?

ಶಲೀನ್ ಭಾನೋಟ್ ಮತ್ತು ದಲ್ಜೀತ್ ಕೌರ್ ಅವರ ಪರಿಚಯ ಕುಲವಧು ಧಾರಾವಾಹಿಯ ಚಿತ್ರೀಕರಣದ ವೇಳೆ ಆರಂಭವಾಯಿತು. ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಅದು ಪ್ರೀತಿಗೆ ತಿರುಗಿತು. ಪರಸ್ಪರ ಒಪ್ಪಿಗೆಯೊಂದಿಗೆ 2009ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈ ಜೋಡಿ ಆ ಸಮಯದಲ್ಲಿ ಕಿರುತೆರೆ ಲೋಕದ ಜನಪ್ರಿಯ ದಂಪತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು.

ವೈವಾಹಿಕ ಜೀವನದ ಕೆಲವು ವರ್ಷಗಳ ನಂತರ ದಂಪತಿಗೆ ಮಗ ಜನಿಸಿದನು. 2014ರಲ್ಲಿ ಜನಿಸಿದ ಮಗನಿಗೆ ಜೇಡೆನ್ ಎಂದು ಹೆಸರಿಡಲಾಯಿತು. ಆದರೆ ಸಂತೋಷದಿಂದ ಸಾಗುತ್ತಿದ್ದ ದಾಂಪತ್ಯ ಜೀವನದಲ್ಲಿ ನಂತರ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಮಗ ಹುಟ್ಟಿದ ಕೆಲವೇ ಸಮಯದಲ್ಲಿ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು, ಕೊನೆಗೆ 2015ರಲ್ಲಿ ಅವರು ಅಧಿಕೃತವಾಗಿ ವಿಚ್ಛೇದನ ಪಡೆದು ಬೇರ್ಪಟ್ಟರು.

ವಿಚ್ಛೇದನದ ಬಳಿಕ ಇಬ್ಬರೂ ತಮ್ಮ ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನತ್ತ ಗಮನ ಹರಿಸಿದರು. ದಲ್ಜೀತ್ ಕೌರ್ ನಂತರ ಮತ್ತೊಮ್ಮೆ ವಿವಾಹವಾಗಿದ್ದು, ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದರು. ಮತ್ತೊಂದೆಡೆ ಶಲೀನ್ ಭಾನೋಟ್ ತಮ್ಮ ಅಭಿನಯ ವೃತ್ತಿಯಲ್ಲಿ ಸಕ್ರಿಯರಾಗಿಯೇ ಮುಂದುವರಿದರು.

ಇದನ್ನೂ ಓದಿ: Vijay Kollur Visit: ವಿಜಯ್ ಸಿಎಂ ಆದ್ರೂ ಆ ರೂಲ್ಸ್ ಫಾಲೋ ಮಾಡದಿದ್ರೆ ಕೊಲ್ಲೂರಿನಲ್ಲಿ ನೋ ಎಂಟ್ರಿ

ಇತ್ತೀಚೆಗೆ ಶಲೀನ್ ಭಾನೋಟ್ ಅಭಿನಯಿಸಿರುವ ‘ಮೈ ವಾಪಸ್ ಆವುಂಗಾ’ ಚಿತ್ರದ ವಿಶೇಷ ಪ್ರದರ್ಶನ ನಡೆಯಿತು. ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶಿಸಿರುವ ಈ ಚಿತ್ರದ ಕಾರ್ಯಕ್ರಮದಲ್ಲಿ ಶಲೀನ್ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ಅವರು ಪಾಪರಾಜಿಗಳ ಕ್ಯಾಮೆರಾಗಳಿಗೆ ನಗುನಗುತ್ತಲೇ ಪೋಸ್ ನೀಡಿದ್ದು, ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.

ಆದರೆ ಕಾರ್ಯಕ್ರಮದ ನಂತರ ಅನಿರೀಕ್ಷಿತ ಬೆಳವಣಿಗೆ ಸಂಭವಿಸಿತು. ಬಾಲಿವುಡ್‌ಗೆ ಸಂಬಂಧಿಸಿದ ಜನಪ್ರಿಯ ಡಿಜಿಟಲ್ ಪೇಜ್‌ ಅವರ ವಿಡಿಯೊವನ್ನು ಬಳಸಿಕೊಂಡು, ಅವರು ತಮ್ಮ ಮೊದಲ ಪತ್ನಿ ದಲ್ಜೀತ್ ಕೌರ್ ಅವರನ್ನು ಮರುಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಪ್ರಕಟಿಸಿತು. ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣವಿಲ್ಲದೆ ಪ್ರಕಟವಾದ ಈ ಸುದ್ದಿ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಈ ಪೋಸ್ಟ್ ಗಮನಕ್ಕೆ ಬಂದ ಬಳಿಕ ಶಲೀನ್ ಭಾನೋಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಡಿಯೋದ ಕಾಮೆಂಟ್ ವಿಭಾಗದಲ್ಲೇ ಪ್ರತಿಕ್ರಿಯಿಸಿದ ಅವರು, ತಮ್ಮ ವೈಯಕ್ತಿಕ ಜೀವನದ ಕುರಿತು ಆಧಾರರಹಿತ ಮಾಹಿತಿಯನ್ನು ಹಂಚಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕೇವಲ ಲೈಕ್ಸ್, ವ್ಯೂಸ್ ಮತ್ತು ಸಾಮಾಜಿಕ ಜಾಲತಾಣದ ಜನಪ್ರಿಯತೆಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ತಪ್ಪು ಎಂದು ಅವರು ಕಿಡಿಕಾರಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed