Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews

ರಾಮಾಯಣ


Last Updated:

Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ.

ರಾಮಾಯಣ
ರಾಮಾಯಣ
ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ.

ಇದು ಭಾರತೀಯ ಸಿನಿಮಾಗಳ ಕಥಾ ನಿರೂಪಣಾ ಶೈಲಿಯಲ್ಲಿಯೇ ಇದ್ದರೂ ಕೂಡಾ ವರ್ಲ್ಡ್ ಕ್ಲಾಸ್ ಟೆಕ್ನಾಲಜಿ, ಮೇಕಿಂಗ್ ಮತ್ತು ವಿಶುವಲ್ ಟ್ರೀಟ್ ಇರಲಿದ್ದು ಪ್ರೇಕ್ಷಕರ ಸೆಳೆಯಲಿದೆ.

ತಯಾರಕರ ಪ್ರಕಾರ, ಈ ಚಿತ್ರವು ಪ್ರಪಂಚದಾದ್ಯಂತದ 10,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಟ್ಟುಗೂಡಿಸಿದೆ. ಇದು ಭಾರತೀಯ ಸಿನಿಮಾಗಾಗಿ ಇದುವರೆಗೆ ಒಟ್ಟುಗೂಡಿದ ಅತಿದೊಡ್ಡ ಸಿನಿಮಾ ತಂಡ ಎನ್ನುವುದು ವಿಶೇಷ. ಇದು ದಾಖಲೆಯೂ ಹೌದು.

ಬೃಹತ್ ಚಿತ್ರತಂಡ ಸಿನಿಮಾದ ನಿರ್ಮಾಣ ವಿನ್ಯಾಸ, ವಿಶುವಲ್ ಎಫೆಕ್ಟ್ಸ್, ಆಕ್ಷನ್ ನೃತ್ಯ ಸಂಯೋಜನೆ, ಕಾಸ್ಟ್ಯೂಮ್ ಮತ್ತು ರಾಮಾಯಣದ ಸುಂದರವಾದ, ಬೃಹತ್ ಸೆಟ್ ನಿರ್ಮಿಸುವಲ್ಲಿ ಒಳಗೊಂಡಿರುವ ಹಲವಾರು ತಾಂತ್ರಿಕ ವಿಭಾಗಗಳ ತಜ್ಞರನ್ನು ಒಳಗೊಂಡಿದೆ.

ಸಿನಿಮಾ ಜಾಗತಿಕ ಸಿನಿಮೀಯ ಮಾನದಂಡಗಳಿಗೆ ಹೊಂದಿಕೆಯಾಗುವಂತೆಯೇ ನಿರ್ಮಿಸಲಾಗುತ್ತಿದೆ. ಅದೇ ಕಾರಣದಿಂದ ಈ ಸಿನಿಮಾಗಾಗಿ ಉನ್ನತ ಅಂತರರಾಷ್ಟ್ರೀಯ ತಂತ್ರಜ್ಞರು ಮತ್ತು ತಜ್ಞರನ್ನು ಸಹ ನೇಮಿಸಲಾಗಿದೆ. ದೊಡ್ಡ ಪ್ರಮಾಣದ ಸೆಟ್ ನಿರ್ಮಾಣದಿಂದ ತೊಡಗಿ ಅತ್ಯಾಧುನಿಕ ವಿಶುವಲ್ ಎಫೆಕ್ಟ್ಸ್ ಮತ್ತು ದೊಡ್ಡಮಟ್ಟದ ಮೇಕಿಂಗ್ ಇರಲಿದೆ. ಇನ್ನು ರಾಮಾಯಣ ಸಿನಿಮಾವನ್ನು ಯಾವುದೇ ಇತರ ಸಿನಿಮಾಗಳಿಗಿಂತ ತುಂಬಾ ಭಿನ್ನವಾಗಿ ವರ್ಲ್ಡ್ ಆಡಿಯನ್ಸ್​ಗೂ ಸರಿಯಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ.

ಈಗಾಗಲೇ ಭಾರತದಲ್ಲಿ ಪುರಾಣ ಕಥೆಗಳನ್ನು ಆಧರಿಸಿ, ಮಹಾಕಾವ್ಯಗಳನ್ನು ಆಧರಿಸಿ ಹಲವಾರು ಸಿನಿಮಾಗಳು ಬಂದಿವೆ. ಆದರೆ ರಾಮಾಯಣವನ್ನು ಆಧುನಿಕ ಪ್ರೇಕ್ಷಕರಿಗೆ ಹೊಂದಿಕೆಯಾಗುವಂತೆ ವಿಶೇಷವಾದ ಸ್ಟೋರಿ ಟೆಲ್ಲಿಂಗ್ ಹಾಗೂ ಆಧುನಿಕ ಶೈಲಿಯ ಮೇಕಿಂಗ್ ಮೂಲಕ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: Upendra: ‘ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಉಪ್ಪಿ ಲವ್ ಮ್ಯಾರೇಜ್ ಆಗಿದ್ಯಾಕೆ?

ಈ ಚಿತ್ರದ ಅತ್ಯಂತ ದೊಡ್ಡ ಮುಖ್ಯಾಂಶವೆಂದರೆ ಆಸ್ಕರ್ ಪ್ರಶಸ್ತಿ ವಿಜೇತ VFX ಕಂಪನಿ DNEG ಜೊತೆಗಿನ ಸಹಯೋಗ. ಇದು ಈ ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ರಾಮಾಯಣ ಸಿನಿಮಾದ ದೃಶ್ಯ ಅನುಭವವನ್ನು ಹೆಚ್ಚಿಸೋಕೆ ಮತ್ತು ನಮ್ಮ ಮಣ್ಣಿನ ಮಹಾಕಾವ್ಯವವನ್ನು ಜಾಗತಿಕ ನಿರ್ಮಾಣ ಗುಣಮಟ್ಟದೊಂದಿಗೆ ವರ್ಲ್ಡ್ ಆಡಿಯನ್ಸ್ ಮುಂದೆ ತರುವಲ್ಲಿ ಈ ಸಿನಿಮಾ ಪ್ರಮುಖ ಪಾತ್ರ ವಹಿಸಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports