Last Updated:
Doddanna: ನಟ ದೊಡ್ಡಣ್ಣ ಅವರು ತಮ್ಮ ಸಾವಿನ ಸಂಬಂಧ ಹರಿದಾಡುತ್ತಿರುವ ಸುದ್ದಿ ಬಗ್ಗೆ ಈಗ ಕ್ಲಾರಿಟಿ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ, ಕನ್ನಡಿಗರ ನೆಚ್ಚಿನ ಕಲಾವಿದ ದೊಡ್ಡಣ್ಣ (Doddanna) ಅವರ ಸಾವಿನ ಸಂಬಂಧ ಆಗಾಗ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅವರ ಕುರಿತು ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡಿದ್ದು, ನಾನು ಬದುಕಿದ್ದೀನಿ ನಾನು ನಿಧನವಾಗಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ನಿಧನ ಸುದ್ದಿ ಬಗ್ಗೆ ಕ್ಲಾರಿಟಿ ಕೊಟ್ಟ ದೊಡ್ಡಣ್ಣ ಅವರು ನಾನು ಮಲಗಿ ಎದ್ದೇಳೋಕೂ ಮುನ್ನ ಅವಿವೇಕಿಗಳು ನಾನು ನಿಧನ ಅಗಿದ್ದೀನಿ ಅಂತ ಫೇಕ್ ನ್ಯೂಸ್ ನಲ್ಲಿ ಹಾಕಿದ್ದಾರೆ. ನಾನು ನಿಧನವಾಗಿದ್ದೀನಿ ಅನ್ನೋದು ಶುದ್ದ ಸುಳ್ಳು ಎಂದಿದ್ದಾರೆ.
ನಾನು ಅರೋಗ್ಯವಾಗಿದ್ದೀನಿ. ನೆಮ್ಮದಿಯಾಗಿದ್ದೀನಿ. ಬೆಳಗ್ಗೆಯಿಂದ ನನಗೆ ಮುಖ ತೊಳೆಯೋಕೆ ಆಗ್ತಿಲ್ಲ, ಅಷ್ಟು ಕರೆಗಳು ಬರ್ತಿವೆ. ಈ ವಿವರ ನಿಮ್ಮಜೊತೆ ಹೇಳಬೇಕು ಅಂತ ವಿಡಿಯೋ ಮಾಡಿದ್ದೀನಿ ಎಂದು ನಟ ಹೇಳಿದ್ದಾರೆ.
ವರದಿ: ಸತೀಶ್ ಕನಕಪುರ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka
Jun 12, 2026 11:35 AM IST













