Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews

rapper chandan shetty special stars two tattoos on both hands


ಚಂದನ್ ಸ್ಪೆಷಲ್ ಟ್ಯಾಟೂ

ಚಂದನ್ ಶೆಟ್ಟಿ ಎರಡೂ ಕೈಯಲ್ಲಿ ಟ್ಯಾಟೂಗಳಿವೆ. ಎಡಗೈಯಲ್ಲಿ ಚಾರ್ಲಿ ಚಾಪ್ಲೆನ್ ಟ್ಯೂಟು ಇದೆ. ಇನ್ನೂ ಒಂದು ಕೈಯಲ್ಲಿ ಮೈಕಲ್ ಜಾಕ್ಸನ್ ಟ್ಯಾಟೂ ಇದೆ.
ಡಯಾನಾ ಗರ್ಲ್‌ ಫ್ರೆಂಡ್‌ ಅಲ್ಲ

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಎರಡು ಹಾಕಿಸಿರೋದಕ್ಕೆ ಕಾರಣೂ ಇದೆ. ಮೈಕಲ್ ಜಾಕ್ಸನ್ ಅಂದ್ರೆ ಚಂದನ್ ಶೆಟ್ರಿಗೆ ತುಂಬಾನೆ ಇಷ್ಟ ಆಗುತ್ತದೆ. ಅವರಂತೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡ್ತಾನೇ ಇರ್ತಾರೆ.

ಹಾಡುಗಳನ್ನ ಹಾಡ್ತಾನೇ ಈ ಕೆಲಸ ಮಾಡ್ತಾನೇ ಇರ್ತಾರೆ. ಆದರೆ, ಮೈಕಲ್ ಜಾಕ್ಸನ್ ರೀತಿ ಡ್ಯಾನ್ಸ್ ಬರೋದಿಲ್ಲ ಅಂತಲೂ ಹೇಳಿಕೊಳ್ತಾರೆ.

ಚಾರ್ಲಿ ಚಾಪ್ಲಿನ್ ಟ್ಯಾಟೂ ಯಾಕೆ

ಚಾರ್ಲಿ ಚಾಪ್ಲಿನ್ ಟ್ಯಾಟೂ ಯಾಕೆ ಅನ್ನುವ ಪ್ರಶ್ನೆನೂ ಬರುತ್ತದೆ. ಅದಕ್ಕೆ ಚಂದನ್ ಉತ್ತರ ಕೊಡುತ್ತಾರೆ. ಚಾರ್ಲಿ ಚಾಪ್ಲಿನ್ ಸುಮ್ನೆ ಅಲ್ಲ. ಅವರು ತುಂಬಾನೆ ಕಷ್ಟದಲ್ಲಿದ್ದರು.

ಆದರೂ, ನಗಿಸುವ ಕೆಲಸ ಮಾಡಿದರು. ಅಷ್ಟು ಕಷ್ಟದಲ್ಲಿ ಇದ್ದು ನಗಿಸೋದು ತುಂಬಾನೆ ಕಷ್ಟ. ಅಂತಹ ಮಹಾನ್ ಕಲಾವಿದನನ್ನ ನಾನು ಆರಾಧಿಸುತ್ತೇನೆ ಅಂತಲೇ ಚಂದನ್ ಶೆಟ್ಟಿ ಹೇಳ್ತಾರೆ.

ಪ್ರತಿ ದಿನ ಕೈ ಮುಗಿಯುವೆ

ಚಂದನ್ ಶೆಟ್ಟಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಷಯ ಹೇಳಿದ್ದಾರೆ. ಎರಡೂ ಟ್ಯಾಟೂಗಳ ಮುಂಗೈಯ ಹೆಬ್ಬೆರಳಿನ ಹಿಂಬದಿಯ ಕೆಳಗಡೆ ಇವೆ.

rapper chandan shetty special stars two tattoos on both hands

ಚಂದನ್ ಸ್ಪೆಷಲ್ ಟ್ಯಾಟೂ

(ಚಿತ್ರ ಕೃಪೆ: ರಾಪಿಡ್ ರಶ್ಮಿ ಪಾಡ್ ಕಾಸ್ಟ್)

ಈ ರೀತಿ ಟ್ಯಾಟೂ ಹಾಕಿಸಿರೋದ್ರಿಂದ ದೇವರಿಗೆ ಕೈ ಮುಗಿದಾಗ ಇವರಿಗೂ ನಮಿಸಿದಂತೆ ಆಗುತ್ತದೆ. ಅದಕ್ಕೇನೆ ಈ ಟ್ಯಾಟೂಗಳನ್ನ ಇಲ್ಲಿ ಹಾಕಿಸಿದ್ದೇನೆ ಅಂತಲೂ ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಡಯಾನಾಮೈಟ್ ಸಾಂಗ್

ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ಮೂಲಕ ಚಂದನ್ ಶೆಟ್ಟಿ ಅಂತರಾಷ್ಟ್ರಿಯ ರಾಪ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲ ಹಾಡಿನಲ್ಲಿಯೇ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.

ಕನ್ನಡ ಸಂಗೀತ ಪ್ರೇಮಿಗಳು ಇದನ್ನ ಇಷ್ಟಪಟ್ಟಿದ್ದಾರೆ. ಆದರೆ, ಇದು ಅರ್ಥ ಆಗುತ್ತಿಲ್ಲ. ಮ್ಯೂಸಿಕ್ ಚೆನ್ನಾಗಿದೆ. ವಿಡಿಯೋ ಕೂಡ ಅಷ್ಟೆ ಚೆನ್ನಾಗಿದೆ. ಆದರೆ, ಇಂಗ್ಲಿಷ್ ಇರೋದರಿಂದ ಅರ್ಥ ಆಗ್ತಿಲ್ಲ ಅಂತ ಹೇಳಿದ್ದಾರೆ.

ಕನ್ನಡದಲ್ಲೂ ಬರ್ತದೆ

ಡಯಾನಾಮೈಟ್ ಕನ್ನಡದಲ್ಲೂ ಬರುತ್ತದೆ. ಚಂದನ್ ಶೆಟ್ಟಿ ಅವರು ಈ ವಿಷಯವನ್ನು ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟ್ ಅಲ್ಲಿಯೇ ಹೇಳಿದ್ದಾರೆ.

ಬಹು ಬೇಡಿಕೆ ಮೇರೆಗೆ ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ಕನ್ನಡದಲ್ಲೂ ಬರುತ್ತದೆ ಅಂತಲೇ ಹೇಳಿದ್ದಾರೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಡಯಾನಾ ಅನ್ನುವ ನಟಿ ಅಭಿನಯಿಸಿದ್ದಾರೆ. ಇವರನ್ನ ಪರಿಚಯಿಸೋ ಹಾಡು ಇದಾಗಿದೆ.

ಡಯಾನಾ ಗರ್ಲ್‌ ಫ್ರೆಂಡ್‌ ಅಲ್ಲ

ಚಂದನ್ ಶೆಟ್ಟಿ ಲೈಫ್ ಅಲ್ಲಿ ಡಯಾನಾ ಎಂಟ್ರಿ ಆಗಿದೆ. ಈ ನಟಿ ಚಂದನ್ ಗರ್ಲ್‌ಫ್ರೆಂಡ್ ಅನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಚಂದನ್ ಶೆಟ್ಟಿ ಇದಕ್ಕೆ ತೆರೆ ಎಳೆದಿದ್ದಾರೆ.

ಡಯಾನಾ ನನ್ನ ಗರ್ಲ್‌ಫ್ರೆಂಡ್ ಅಲ್ಲವೇ ಅಲ್ಲ. ನಮ್ಮದು ಪ್ರೊಫೆಷನಲ್ ಸಂಬಂಧವೇ ಆಗಿದೆ. ಡಯಾನಾ ನನ್ನ ಸಹ ಕಲಾವಿದೆ ಆಗಿದ್ದಾರೆ. ನಾನು ಗುರುವಾಗಿ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಮಾರ್ಗದರ್ಶನ ನೀಡ್ತಾ ಇದ್ದೇನೆ ಅಂತಲೇ ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed