Annamalai: ‘ಸಿಂಗಂ’ ಅಣ್ಣಾಮಲೈ ರಾಜೀನಾಮೆ; ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Pawan Kalyan on Annamalai: ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ ಬಿರುಗಾಳಿಯೇ ಎದ್ದಿದೆ. ಒಂದೆಡೆ ಅಣ್ಣಾಮಲೈರನ್ನು ಬೆಂಬಲಿಸಿ ತಮಿಳುನಾಡು ಬಿಜೆಪಿಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…

News18
News18

Pawan Kalyan on Annamalai: ತಮಿಳುನಾಡು (Tamil Nadu) ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ ಬಿರುಗಾಳಿಯೇ ಎದ್ದಿದೆ. ಒಂದೆಡೆ ಅಣ್ಣಾಮಲೈರನ್ನು (Annamalai) ಬೆಂಬಲಿಸಿ ತಮಿಳುನಾಡು ಬಿಜೆಪಿಯಲ್ಲಿ (BJP) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಪವರ್‌ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…

ಅಣ್ಣಾಮಲೈ ಬಗ್ಗೆ ಪವರ್‌ಸ್ಟಾರ್ ಹೇಳಿದ್ದೇನು?

ಜೂನ್ 2 ರಂದು ಅಣ್ಣಾಮಲೈ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅದೇ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೂ ಐದು ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅದು ಅಂಗೀಕಾರ ಕೂಡ ಆಗಿದೆ. ಇದರ ನಡುವೆ, ನಿನ್ನೆ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಅಣ್ಣಾಮಲೈ ಅವರ ಜನ್ಮದಿನವಾಗಿದೆ. ಈ ವೇಳೆ ಅಣ್ಣಾಮಲೈಗೆ ಶುಭಾಶಯ ತಿಳಿಸಿರುವ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರು, “ಯಾವುದೇ ಮಾರ್ಗವನ್ನು ಆರಿಸಿಕೊಂಡರೂ” ಎಂದು ಹೇಳಿದ್ದಾರೆ.

ಯಾವುದೇ ಮಾರ್ಗವನ್ನು ಆರಿಸಿಕೊಂಡರೂ…

ಹೌದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್ ಅವರು, “ಸಹೋದರ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ವಿವಿಧ ವಿಷಯಗಳ ಬಗ್ಗೆ ನಿಮ್ಮ ಸ್ಪಷ್ಟತೆ, ದೃಢನಿಶ್ಚಯ ಮತ್ತು ಸಾರ್ವಜನಿಕ ಸೇವೆಗೆ ನಿಮ್ಮ ಅಚಲ ಬದ್ಧತೆ ಅನೇಕರಿಂದ ಪ್ರಶಂಸೆ ಗಳಿಸಿದೆ, ಧೈರ್ಯ ಮತ್ತು ಸಮರ್ಪಣೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಿ, ಮುರುಗನ್ ದೇವರು ಉತ್ತಮ ಆರೋಗ್ಯ ನೀಡಲಿ” ಎಂದು ಬರೆದಿದ್ದಾರೆ.

ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಕೊಡೋಕೆ ಇದೇ ಕಾರಣನಾ? ಹೈಕಮಾಂಡ್‌ ಎದುರು ‘ರಿಯಲ್ ಸಿಂಗಂ’ ಹೇಳಿದ್ದೇನು?

ನ್ಯೂಸ್ 18 ತಮಿಳು ವರದಿ ಮಾಡಿರುವಂತೆ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿಯ ಪ್ರಭಾವಿ ಮುಖಂಡ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತವಾಗಿ ವಿದಾಯ ಹೇಳಿ ಹೊಸ ರಾಜಕೀಯ ಹಾದಿ ಹಿಡಿಯುವುದಾಗಿ ಘೋಷಿಸಿದ್ದಾರೆ. ಇಂದು ಮಧ್ಯಾಹ್ನ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಮಾತನಾಡಿದ ಅವರು, “ತಮಿಳರ ಸಂಪ್ರದಾಯದಂತೆ ಪಕ್ಷದಿಂದ ಗೌರವದಿಂದ ಹೊರಬರುತ್ತಿದ್ದೇನೆ, ಕಳೆದ ಐದು ವರ್ಷಗಳಿಂದ ಹೊಸ ದಾರಿ ನಿರ್ಮಿಸಲು ಶ್ರಮಿಸಿದ್ದೇನೆ, ಇಂದಿನಿಂದ ಆ ಪ್ರಯಾಣ ಆರಂಭ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಬಿಜೆಪಿ-ಎಐಎಡಿಎಂಕೆಯೊಂದಿಗಿನ ಮೈತ್ರಿಯ ನಂತರ, “ಡಿಸೆಂಬರ್ 2025 ರಲ್ಲಿ ಪಕ್ಷ ತೊರೆಯುವ ಇಂಗಿತವನ್ನು ಬಿಜೆಪಿ ನಾಯಕತ್ವಕ್ಕೆ ತಿಳಿಸಿದ್ದೆ” ಎಂದು ಹೇಳಿದ್ದರು. ಆದ್ರೆ, ಪಕ್ಷದ ಹಿರಿಯ ನಾಯಕರು ಔಪಚಾರಿಕವಾಗಿ ರಾಜೀನಾಮೆ ನೀಡುವ ಮೊದಲು ತಮಿಳುನಾಡು ಚುನಾವಣೆಯ ನಂತರ ಪಕ್ಷದಲ್ಲಿಯೇ ಇರಬೇಕೆಂದು ವಿನಂತಿಸಿಕೊಂಡರು ಎಂದು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed