Last Updated:
ಕರ್ನಾಟಕಕ್ಕೆ ಅಧಿಕೃತ ಮುಂಗಾರು ಪ್ರವೇಶ, ಕರಾವಳಿ ಮಲೆನಾಡಿನಲ್ಲಿ ತಂಪು ಹವಾಮಾನ, ಬೆಳಗಾವಿ ಹಾವೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ 30-40 ಕಿಮೀ ವೇಗದ ಬಿರುಗಾಳಿ ಮಳೆ ಎಚ್ಚರಿಕೆ, IMD ಕಡಿಮೆ ಮಳೆ ಅಂದಾಜು
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಂಗಾರು ಮಳೆ (Monsoon) ಕೊನೆಗೂ ಕರ್ನಾಟಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಮಾನ್ಸೂನ್ ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗಾಗಲೇ ವಾತಾವರಣ (Weather) ಸಂಪೂರ್ಣವಾಗಿ ಬದಲಾಗಿದ್ದು, ಮುಂಗಾರು ಗಾಳಿಯ ಆರ್ಭಟ ಜೋರಾಗಿದೆ. ಈ ವರ್ಷ ಮುಂಗಾರು ಮಾರುತಗಳು ಸಕಾಲದಲ್ಲಿ ಧಾವಿಸಿರುವುದರಿಂದ ಕೃಷಿ ಚಟುವಟಿಕೆಗಳಿಗೆ (Agriculture Activity) ಭಾರಿ ಚುರುಕು ಮುಟ್ಟಿದಂತಾಗಿದ್ದು, ಇಡೀ ರಾಜ್ಯಾದ್ಯಂತ ವಾತಾವರಣ ತಂಪಾಗಿದೆ. ಆದರೆ, ಇದೇ ಮುಂಗಾರಿನ ಆರ್ಭಟ ಈಗ ಒಳನಾಡು ಮತ್ತು ಉತ್ತರ ಕರ್ನಾಟಕದ (North karnataka) ಜಿಲ್ಲೆಗಳಿಗೂ ವಿಸ್ತರಿಸುತ್ತಿದ್ದು, ಹವಾಮಾನದಲ್ಲಿ ದಿಢೀರ್ ಏರುಪೇರು ಉಂಟಾಗಲು ಪ್ರಮುಖ ಕಾರಣವಾಗಿದೆ.
ಆದರೆ ಅಸಲಿ ಶಾಕ್ ಇಲ್ಲಿದೆ! ಕೇವಲ ಈ ಎರಡು ಜಿಲ್ಲೆಗಳು ಮಾತ್ರವಲ್ಲ, ಇನ್ನೂ ಕೆಲವೇ ಕ್ಷಣಗಳಲ್ಲಿ ಎಂದರೆ 4 ಗಂಟೆಯಿಂದ 4.30ರ ಆಸುಪಾಸಿನಲ್ಲಿ ರಾಜ್ಯದ ಇನ್ನು 5 ಪ್ರಮುಖ ಜಿಲ್ಲೆಗಳಾದ ಬೀದರ್, ಕಲಬುರಗಿ, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲೂ ಸಹ ಭೀಕರ ಬಿರುಗಾಳಿ (30-40 ಕಿಮೀ/ಗಂ) ಹಾಗೂ ಗುಡುಗು ಮಿಂಚಿನೊಂದಿಗೆ ಸಾಧಾರಣದಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ಆಂತರಿಕ ಮೂಲಗಳು ಮುನ್ಸೂಚನೆ ನೀಡಿವೆ. ಮಳೆಗಿಂತ ಗಾಳಿಯ ಆರ್ಭಟವೇ ಜೋರಾಗಿರಲಿದೆ ಎಂಬುದೇ ಆತಂಕದಾಯಕ ವಿಷಯ.
ಕರ್ನಾಟಕದಲ್ಲಿ ಮುಂಗಾರು ಪ್ರವೇಶ ಸಾಮಾನ್ಯವಾಗಿ ಕೇರಳ ಪ್ರವೇಶದ 2-4 ದಿನಗಳ ನಂತರ ಆಗುತ್ತದೆ. ಜೂನ್ 4ರ ಸ್ಥಿತಿಯಂತೆ, ಮುಂಗಾರು ಜೂನ್ 6 ಅಥವಾ 7ರ ವಾರಾಂತ್ಯದ ವೇಳೆಗೆ ಕರ್ನಾಟಕದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಾಮಾನ್ಯವಾಗಿ ಜೂನ್ 5-8ರ ನಡುವೆ ಮುಂಗಾರು ಎಂಟ್ರಿ ಆಗುತ್ತದೆ. ಮಲೆನಾಡು (ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ) ಮತ್ತು ದಕ್ಷಿಣ ಒಳನಾಡಿನ ಭಾಗಗಳಿಗೆ ಇದರ ನಂತರದ ದಿನಗಳಲ್ಲಿ ವಿಸ್ತರಣೆಯಾಗುತ್ತದೆ.
ಕೃಷಿಕರಿಗೆ ಪ್ರಮುಖ ಸಲಹೆ
Bangalore [Bangalore],Bangalore,Karnataka













