Last Updated:
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರು ಫುಕೆಟ್ ನೇರ ವಿಮಾನ ಆರಂಭ, ವಾರಕ್ಕೆ ನಾಲ್ಕು ಸರ್ವಿಸ್, 3 ಗಂಟೆ 45 ನಿಮಿಷ ಪ್ರಯಾಣ, ಪುಣೆ ವಿಮಾನ I 9806 ರದ್ದು, ಪ್ರಯಾಣಿಕರಿಗೆ ತೊಂದರೆ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಥೈಲ್ಯಾಂಡ್‍ನ ಫುಕೆಟ್‍ಗೆ ಹೋಗಲು ಕಾಯುತ್ತಿದ್ದ ಪ್ರವಾಸಿಗರಿಗೆ (Tourist) ಇದೀಗ ಬಂಪರ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸಂಸ್ಥೆಯು ತನ್ನ ನೇರ ವಿಮಾನ ಸೇವೆಯನ್ನು ಫುಕೆಟ್‍ಗೆ (Phuket) ಆರಂಭಿಸಿದೆ.
ಫುಕೆಟ್‍ಗೆ ಹೋಗಲು ಇನ್ನು ಸುಲಭ
ಈ ಹೊಸ ಸೇವೆಯು ವೀಕೆಂಡ್ ಪ್ರಯಾಣಿಕರ ಮೇಲೆ ಹೆಚ್ಚಿನ ಗಮನ ಹರಿಸಿದೆ. ಸೋಮವಾರ ಮತ್ತು ಶನಿವಾರದಂದು ಬೆಳಿಗ್ಗೆ 10:35ಕ್ಕೆ ಬೆಂಗಳೂರಿನಿಂದ ಹೊರಡುವ ಬೋಯಿಂಗ್ 737-8 ಮ್ಯಾಕ್ಸ್ ವಿಮಾನವು ಮಧ್ಯಾಹ್ನ 3:50ಕ್ಕೆ ಫುಕೆಟ್ ತಲುಪಲಿದೆ. ಶುಕ್ರವಾರ ಮತ್ತು ಭಾನುವಾರದಂದು ವಿಮಾನಗಳು ಕ್ರಮವಾಗಿ ಬೇರೆ ಸಮಯಗಳಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವೆಬ್‍ಸೈಟ್ ವರದಿ ಮಾಡಿದೆ.
3 ಗಂಟೆ 45 ನಿಮಿಷಗಳ ಪ್ರಯಾಣ
ಈ ವಿಮಾನವು ಸರಿಸುಮಾರು 3 ಗಂಟೆ 45 ನಿಮಿಷಗಳ ಪ್ರಯಾಣದ ಅವಧಿಯನ್ನು ಹೊಂದಿರುತ್ತದೆ. ಇದು ಕಳೆದ ಅಕ್ಟೋಬರ್ ನಲ್ಲಿ ಪ್ರಾರಂಭವಾದ ಬೆಂಗಳೂರು-ಬ್ಯಾಂಕಾಕ್ ಸೇವೆಯ ನಂತರ ಥೈಲ್ಯಾಂಡ್‍ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡನೇ ತಾಣವಾಗಿದೆ. 13,745 ರೂಪಾಯಿಯಿಂದ ಟಿಕೆಟ್ ಬೆಲೆ ಇರಲಿದೆ.
ಮತ್ತೊಂದೆಡೆ ಪುಣೆ ಪ್ರಯಾಣಿಕರಿಗೆ ಸಂಕಷ್ಟ
ಒಂದೆಡೆ ಹೊಸ ಫ್ಲೈಟ್ ಸೇವೆಯ ಸಂಭ್ರಮವಿದ್ದರೆ, ಮತ್ತೊಂದೆಡೆ ಪುಣೆಗೆ ಹೋಗಬೇಕಿದ್ದ ಪ್ರಯಾಣಿಕರಿಗೆ ತೀವ್ರ ನಿರಾಸೆಯಾಗಿದೆ. ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಪುಣೆಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನ ಸಂಖ್ಯೆ AI 9806 ರದ್ದುಗೊಂಡಿದೆ. ಕಾರ್ಯಾಚರಣೆಯ ಕಾರಣಗಳಿಂದಾಗಿ ಈ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಲೈನ್ ತಿಳಿಸಿದೆ.
Location :
Bangalore [Bangalore],Bangalore,Karnataka
First Published :
Jun 03, 2026 10:24 AM IST














