ಟ್ರೋಲ್ ಮಾಡಿದವರಿಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ನಟಿ ತ್ರಿಶಾ! ನಾಯಿ ಫೋಟೋ ಹಾಕಿ ಹೇಳಿದ್ದೇನು ಗೊತ್ತಾ? | | ACTPnews

ವಿಜಯ್


Last Updated:

Trisha: ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ.

ವಿಜಯ್
ವಿಜಯ್

ನಟಿ ತ್ರಿಶಾ (Trisha) ಹಾಗೂ ನಟ, ಸಿಎಂ ವಿಜಯ್ (CM Vijay) ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೊತೆಗೆ ಈ ವರ್ಷದ ಆರಂಭದಲ್ಲಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವೆ ಯಾವುದೂ ಸರಿಯಿಲ್ಲ ಎಂದು ತಿಳಿದಾಗ, ಜೊತೆಗೆ ಇಬ್ಬರು ಪರಸ್ಪರ ದೂರವಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಂದ ಕೂಡಲೇ ಈ ಊಹಾಪೋಹಗಳು ವೇಗವನ್ನು ಪಡೆದುಕೊಂಡವು. ಜೊತೆಗೆ ಡಿವೋರ್ಸ್‌ಗೆ ಕಾರಣ ಒಬ್ಬ ನಟಿ ಎಂದು ಆರೋಪಿಸಲಾಗಿತ್ತು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆ ನಟಿ ಬೇರೆ ಯಾರು ಅಲ್ಲ ತ್ರಿಶಾ ಎಂದು ಹೇಳಲು ಶುರು ಮಾಡಿದ್ದರು.

ಈ ಎಲ್ಲಾ ವದಂತಿಗಳ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಎಲ್ಲವುದರ ಮಧ್ಯೆ ಇಬ್ಬರ ನಡುವಿನ ಪ್ರತಿಯೊಂದು ಸಾರ್ವಜನಿಕ ಭೇಟಿ ಎಲ್ಲರ ಗಮನ ಸೆಳೆಯುತ್ತಲೇ ಇದೆ. ಇದೀಗ ತನ್ನ ವಿರುದ್ಧ ಕೇಳಿಬರುತ್ತಿರುವ ಎಲ್ಲಾ ವದಂತಿಗಳಿಗೆ ನಟಿ ತ್ರಿಶಾ ಖಡಕ್ ತಿರುಗೇಟು ನೀಡಿದ್ದಾರೆ. ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ.

ಜೊತೆಗೆ ವಿಜಯ್ ಪ್ರಮಾಣವಚನ ದಿನದಂದು ನಟಿ ತ್ರಿಶಾ ಮಲ್ಲಿಗೆ ಮುಡಿದು ನೀಲಿ ಬಣ್ಣದ ರೇಷ್ಮೆ ಸೀರೆ ಧರಿಸಿ ಹಾಗೂ ತಲೆಗೆ ಮಲ್ಲಿಗೆ ಹೂವು ಮುಡಿದು ಸಾಂಪ್ರದಾಯಿಕ ಉಡುಪಿನಲ್ಲಿ ಹಾಜರಾಗಿದ್ದರು. ಹೀಗಾಗಿ ನಟಿ ತ್ರಿಶಾ ಅವರನ್ನು ಕಂಡ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದರು. ಕ್ರೀಡಾಂಗಣಕ್ಕೆ ಎಂಟ್ರಿ ಕೊಡುತಿದ್ದಂತೆ ನಟಿ ತ್ರಿಶಾ ಅವರು ಅಭಿಮಾನಿಗಳತ್ತ ಕೈಬೀಸಿ ನಗುತ್ತಾ ಸಾಗಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹಾಗೆಯೇ ಇತ್ತೀಚಿಗೆ ವಿಜಯ್ ಹಾಗೂ ನಟಿ ತ್ರಿಷಾ ಇಬ್ಬರೂ ಜೊತೆಯಾಗಿ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಇಬ್ಬರೂ ಒಂದೇ ಕಾರಿನಲ್ಲಿ ಹೋಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಇಬ್ಬರೂ ಒಂದೇ ಬಣ್ಣದ ರೇಷ್ಮೆ ಬಟ್ಟೆಗಳನ್ನು ಕೂಡಾ ಧರಿಸಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed