Last Updated:
ಶಿವರಾಜ್ ಕುಮಾರ್ ಅಭಿನಯದ 4 ನೇ ತಮಿಳು ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಚಿತ್ರದ ಮೊದಲ ಶಾಟ್ನ ಒಂದು ಫೋಟೋ ಹೊರ ಬಂದಿದೆ. ಇದು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತದೆ. ಇದರ ವಿವರ ಮುಂದೆ ಇದೆ ಓದಿ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ 4 ನೇ ತಮಿಳು ಸಿನಿಮಾದ ಕೆಲಸ ಶುರು ಆಗಿದೆ. ಮೇ-1 ರಂದು ಈ ಚಿತ್ರದ ನಾಯಕ ಅಬಿಶಾನ್ ಜೀವಿಂತ್ (Abishan Jeevinth) ಜನ್ಮ ಇತ್ತು. ಈ ದಿನವೇ ಚಿತ್ರದ ಲಾಂಚ್ ಆಗಿದೆ. ಶಿವಣ್ಣ ಕೂಡ ಇದರಲ್ಲಿ ಭಾಗಿ ಆಗಿದ್ದರು. ಮೊದಲ ದೃಶ್ಯವು ಅದ್ಭುತವಾಗಿತ್ತು. ಇದೀಗ ಈ ಚಿತ್ರದ ಒಂದು ದೃಶ್ಯದ ಫೋಟೋ ರಿವೀಲ್ ಆಗಿದೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದರಲ್ಲಿ ಶಿವಣ್ಣ (Shivanna) ಇದ್ದಾರೆ. ನಾಯಕ ಅಬಿಶಾನ್ ಜೀವಿಂತ್ (Abishan Jeevinth) ಇದ್ದಾರೆ. ಒಂದು ಪುಟ್ಟ ನಾಯಿ ಮರಿನೂ ಇದೆ. ಈ ಸಿನಿಮಾ ಮತ್ತು ಈ ಫೋಟೋದ ಇನ್ನಷ್ಟು ವಿವರ ಇಲ್ಲಿದೆ ಓದಿ.
ತಮಿಳು ಚಿತ್ರದ ಫಸ್ಟ್ ಶಾಟ್
(ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್ಸ್ಟಾಗ್ರಾಮ್)
ಮನೆ ಬಾಗಿಲಿಗೆ ಶಿವಣ್ಣ ನಿಂತಿದ್ದಾರೆ. ಹಿಂದೆ ಕೆಂಪು ಶರ್ಟ್ ಮತ್ತು ನೀಲಿ ಪ್ಯಾಂಟ್, ಬಿಳಿ ಬೂಟ್ ಧರಿಸಿದ ಮಗನ ಪಾತ್ರಧಾರಿ ಅಬಿಶಾನ್ ಜೀವಿಂತ್ ಇದ್ದಾರೆ.
ಈ ಒಂದು ಫೋಟೋದಲ್ಲಿ ಒಂದು ಇಂಡಿ ಡಾಗ್ ಕೂಡ ಇದೆ. ಇದು ಇನ್ನು ಪುಟ್ಟ ನಾಯಿನೇ ಬಿಡಿ. ಇಷ್ಟೆಲ್ಲ ಚಿತ್ರಣವನ್ನ ಈ ಫೋಟೋ ಕಟ್ಟಿಕೊಡುತ್ತದೆ.
ಈ ಮೂಲಕ ಮಧ್ಯಮ ವರ್ಗದ ಕತೆ ಇರೋ ಚಿತ್ರ ಇದು ಅನ್ನೋದು ತಿಳಿಯುತ್ತದೆ. ಆ ರೀತಿನೇ ಈ ಪಾತ್ರಧಾರಿಗಳ ಲುಕ್ ಮತ್ತು ನಿಂತಿರೋ ಮನೆನೂ ಈ ಒಂದು ಫೀಲ್ ಕೊಡುತ್ತದೆ.
ಮೇ-1 ರಂದು ಚಿತ್ರದ ನಾಯಕ ಅಬಿಶಾನ್ ಜೀವಿಂತ್ ಜನ್ಮ ದಿನ ಇತ್ತು. ಈ ದಿನವೇ ಚಿತ್ರ ಶುರು ಆಗಿದೆ. ಈ ಸಮಯದಲ್ಲಿ ಒಂದು ದೃಶ್ಯವನ್ನು ತೆಗೆಯಲಾಗಿದೆ.
ನಾಯಕನಿಗೆ ಶುಭಾಶಯ
(ಚಿತ್ರ ಕೃಪೆ: ಅಬಿಶಾನ್ ಜೀವಿಂತ್ ಇನ್ಸ್ಟಾಗ್ರಾಮ್)
ಅಪ್ಪ ಮತ್ತು ಮಗನ ಆತ್ಮೀಯತೆ, ಚೇಷ್ಠೆ, ಹಾಸ್ಯ, ಆಟಿಟ್ಯೂಡ್ ಎಲ್ಲವೂ ಇಲ್ಲಿ ಕಾಣಿಸುತ್ತದೆ. ಆ ರೀತಿನೇ ಈ ಒಂದು ದೃಶ್ಯ ಇದೆ. ಈ ಚಿತ್ರವನ್ನ ಟೂರಿಸ್ಟ್ ಫ್ಯಾಮಿಲಿಯ ಕೋ ಡೈರೆಕ್ಟರ್ ಗೌತಮ್ ಶಿವರಾಮನ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇದು ಇವರಿಗೆ ಮೊದಲ ಚಿತ್ರವೇ ಆಗಿದೆ.
ಈ ಚಿತ್ರಕ್ಕೆ ಪ್ರಗದೀಶ್ ಪ್ರಭು ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಲಿಯೋ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಇದೊಂದು ಅಪ್ಪ ಮತ್ತು ಮಗನ ಎಮೋಷನಲ್ ಸ್ಟೋರಿ ಇರೋ ಚಿತ್ರವಾಗಿದೆ.
ಈ ಚಿತ್ರದಲ್ಲಿ ಯೋಗಲಕ್ಷ್ಮಿ ಮತ್ತು ಶಿವಾನಿ ನಗರಂ ನಾಯಕಿಯರಾಗಿದ್ದಾರೆ. ಇವರ ಈ ಚಿತ್ರದ ಮುಹೂರ್ತ ಚೆನ್ನೈ ಅಲ್ಲಿ ನಡೆದಿದೆ. ರಜನಿಕಾಂತ್ ಪುತ್ರಿನೂ ಈ ಒಂದು ಮುಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದರು. ಇಡೀ ತಂಡಕ್ಕೆ ಶುಭ ಕೋರಿದ್ದರು.
ಶಿವರಾಜ್ ಕುಮಾರ್ ಅವರು ಇನ್ನೂ ಒಂದು ಕೆಲಸ ಮಾಡಿದರು. ನಾಯಕ ನಟ ಅಬಿಶಾನ್ ಜೀವಿಂತ್ ಜನ್ಮ ದಿನದ ಹಿನ್ನೆಲೆಯಲ್ಲಿ ವಿಶ್ ಮಾಡಿದರು.
ಈ ವಿಷಯ ತಿಳಿದ ಅಬಿಶಾನ್ ಜೀವಿಂತ್ ಧನ್ಯವಾದ ಹೇಳಿದರು. ಇನ್ಸ್ಟಾಗ್ರಾಮ್ನ ತಮ್ಮ ಸ್ಟೇಟಸ್ ಅಲ್ಲಿಯೇ ಇದನ್ನ ಹೇಳಿದರು. ಚಿತ್ರದಲ್ಲಿ ನಾನು ನಟಿಸುತ್ತೇನೆ ಅಂತ ನಂಬಿಕೇನೆ ಇರಲಿಲ್ಲ.
ಆ ರೀತಿ ಕಲ್ಪನೆ ಕೂಡ ಮಾಡಿರಲಿಲ್ಲ. ಆದರೆ, ನೀವು ತೋರಿದ ಪ್ರೀತಿ, ಗೌರವಕ್ಕೆ ನಾನು ಸದಾ ಧನ್ಯ ಅಂತ ಅಬಿಶಾನ್ ಜೀವಿಂತ್ ಇಂಗ್ಲಿಷ್ ಅಲ್ಲಿ ಬರೆದುಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













