ಹಿಂದೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ಮಾಡಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಅವರು ಗರಂ ಆಗಿದ್ದರು. ಆ ನಂತರ ನಟಿ ರಮ್ಯಾ ಅವರ ವಿರುದ್ಧ ಅಶ್ಲೀಲ ಮಾತುಗಳ ದಾಳಿಯಾಯಿತು. ನಟಿಯರಿಗಂತೂ ಈ ಕಾಟ ತಪ್ಪೋದೇ ಇಲ್ಲ ಎನ್ನುವಾಗಲೇ ರುಕ್ಮಿಣಿ ವಸಂತ್ (Rukmini Vasanth) ಅವರು ಸ್ವಿಮ್ ಸೂಟ್ ಲುಕ್ ಹಾಗೂ ವಿಡಿಯೋ ದಿಢೀರ್ ವೈರಲ್ ಆಯಿತು.
ಆ ನಂತರ ನಟಿ ಇದಕ್ಕೆ ಸಂಬಂಧಿಸಿ ಪೋಸ್ಟ್ ಕೂಡಾ ಹಾಕಿದರು. ಪೋಸ್ಟ್ ಹಾಕಿ ಈ ರೀತಿ ಫೋಟೋ ಶೇರ್ ಮಾಡದಂತೆ, ಕ್ರಿಯೇಟ್ ಮಾಡದಂತೆ ಎಚ್ಚರಿಕೆ ಕೂಡಾ ಕೊಟ್ಟಿದ್ದರು.
ಕಾಂತಾರ ನಟಿ ರುಕ್ಮಿಣಿ ವಸಂತ್ ಅಶ್ಲೀಲ ಪೋಟೋ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿ ಈಗ ನಟಿ ರುಕ್ಮಿಣಿ ವಸಂತ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
AI ತಂತ್ರಜ್ಞಾನ ಬಳಸಿ ಅಶ್ಲೀಲ ಪೋಟೊ ಸೃಷ್ಟಿ ಮಾಡಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖ ಅಳವಡಿಕೆ ಮಾಡಲಾಗಿದೆ. ವಿಡಿಯೋ ಮತ್ತು ಪೋಟೊ ಕ್ರಿಯೆಟ್ ಮಾಡಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಪೋಟೊ, ವಿಡಿಯೋ ಹಂಚಿಕೆಯಾಗಿದ್ದ ಸಾಮಾಜಿಕ ಜಾಲತಾಣಗಳ ವಿರುದ್ಧ ದೂರು ನೀಡಿದ್ದು ಸದ್ಯ 29 ಸಾಮಾಜಿಕ ಜಾಲತಾಣ ಅಕೌಂಟ್ ಗಳ ವಿರುದ್ದ ದೂರು ದಾಖಲಾಗಿದೆ. 9 ಇನ್ಸ್ಟ್ರಾಗ್ರಾಂ, 14 ಎಕ್ಸ್ ಖಾತೆ, 6 ಫೇಸ್ ಬುಕ್ ಖಾತೆಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್ಎಸ್ 75(3), 79, 336, 356, 351, 352 294 ಅಡಿ ಪ್ರಕರಣ ದಾಖಲಿಸಲಾಗಿದ್ದು ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಫೋಟೋ, ವೀಡಿಯೋಸ್ ಗಳು ವೈರಲ್ ಆಗಿತ್ತು. ಸಿನಿಮಾ ಶೂಟಿಂಗ್ ಗಾಗಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿಕೊಂಡು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವಂತೆ ಫೇಕ್ ಫೋಟೊ, ವಿಡಿಯೋ ಎಲ್ಲೆಡೆ ವೈರಲ್ ಆಗಲು ಶುರುವಾಗಿತ್ತು.
ವರದಿ: ಮುನಿರಾಜು ಕೆ.ಜಿ. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು












