Tragic Choking Death: ಸ್ನ್ಯಾಕ್ಸ್‌ ಪ್ರಿಯರೇ ಎಚ್ಚರ! ಕುರ್‌ಕುರೆ ತಿನ್ನುತ್ತಿದ್ದಾಗ ಗಂಟಲಲ್ಲಿ ಸಿಲುಕಿ 28 ವರ್ಷದ ವ್ಯಕ್ತಿ ದಾರುಣ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Tragic Choking Death: ಕುರ್ಕುರೆ ತಿನ್ನುತ್ತಿದ್ದ ವೇಳೆ ಅದರ ತುಂಡೊಂದು ಗಂಟಲಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

News18
News18

Tragic Choking Death: ಸಾವು ಯಾರನ್ನು, ಯಾವ ಸಂದರ್ಭದಲ್ಲಿಯೂ, ಹೇಗೆ ಬೇಕಾದರೂ ಕಾಡಬಹುದು. ಇಂದು ಇದ್ದೋರು ನಾಳೆ ಇರ್ತಾರೆ ಅಂತಾ ಹೇಳೋಕ್ಕಾಗಲ್ಲ. ಅಷ್ಟೇ ಯಾಕೆ ಈ ಕ್ಷಣ ಇದ್ದರೋ ಒಂದು ಗಂಟೆಯ ನಂತರ ಇರ್ತಾರೆ ಅಂತಾನೂ ಹೇಳೋಕಾಗಲ್ಲ. ಈ ಕಟು ಸತ್ಯ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಗೆ ಅರ್ಥ ಆಗಿರುತ್ತೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಸಾವು ಹೇಗೆ ಬೇಕಾದರೂ ಬರಹುದು. ಆದರೆ ತಿನ್ನೋ ತಿಂಡಿಯಲ್ಲಿ, ಅದರಲ್ಲೂ ಕುರುಕುರೆ ತಿಂದು ಸಾವನ್ನಪ್ತಾರೆ ಅಂತಾ ನಂಬೋಕಾಗುತ್ತಾ? ಸಾಧ್ಯವೇ ಇಲ್ಲ ಅಂತಂದ್ರೂ ಕೂಡ ಇದೊಂದು ಘಟನೆಯನ್ನು ಮಾತ್ರ ನೀವು ನಂಬಲೇಬೇಕು. ಕುರ್ಕುರೆ ತಿನ್ನುತ್ತಿದ್ದ ವೇಳೆ ಅದರ ತುಂಡೊಂದು ಗಂಟಲಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ವರದಿಯಾಗಿದೆ.

ಘಟನೆ ನಡೆದ ದಿನ, ಹೇಮಂತ್ ಮನೆಯಲ್ಲಿ ಕುರ್ಕುರೆ ತಿನ್ನುತ್ತಿದ್ದರು. ಈ ವೇಳೆ ಅದರ ಒಂದು ತುಂಡು ಅವರ ಶ್ವಾಸನಾಳದಲ್ಲಿ ಸಿಲುಕಿಕೊಂಡಿದೆ ಎಂದು ವರದಿಯಾಗಿದೆ. ಆಗ ತಕ್ಷಣವೇ ಅವರಿಗೆ ಉಸಿರಾಟದ ತೊಂದರೆ ಉಂಟಾಗಲು ಪ್ರಾರಂಭಿಸಿದೆ, ತೀವ್ರ ಉಸಿರಾಟದ ತೊಂದರೆ ಉಂಟಾದ ಕಾರಣ ಅವರ ಕುಟುಂಬ ಸದಸ್ಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು.

ಆರಂಭಿಕ ಚಿಕಿತ್ಸೆ ನೀಡಿದ ನಂತರ, ಅವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆಸ್ಪತ್ರೆಯ ವೈದ್ಯರು ಅವರನ್ನು ಚಂಡೀಗಢದ ಪಿಜಿಐಗೆ ದಾಖಲಿಸಿದರು. ಪಿಜಿಐನ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆಯನ್ನು ಪ್ರಾರಂಭಿಸಿದರು, ಆದರೆ ಅವರ ಆರೋಗ್ಯವು ಹದಗೆಡುತ್ತಲೇ ಇತ್ತು. ವೈದ್ಯರ ಕಠಿಣ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಹೇಮಂತ್ ನಿಧನರಾದರು ಎಂದು ತಿಳಿದು ಬಂದಿದೆ.

ಘಟನೆಯ ನಂತರ, ವೈದ್ಯರು ಜನರು ತಿಂಡಿಗಳನ್ನು ತಿನ್ನುವಾಗ ಜಾಗರೂಕರಾಗಿರಬೇಕೆಂದು ಮತ್ತು ಉಸಿರುಗಟ್ಟುವಿಕೆ ಅಥವಾ ಉಸಿರಾಟದ ತೊಂದರೆಗಳು ಉಂಟಾದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed