Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews

ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು?


Last Updated:

ಕನ್ನಡದ ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಈ ಪ್ರಶ್ನೆಗೆ ರಾಮ್ ಚರಣ್ ಹೇಳಿದ್ದೇನು? ಶಿವಣ್ಣನ ರಿಯಾಕ್ಷನ್ ಹೇಗಿತ್ತು? ಈ ಎಲ್ಲ ಇಂಟ್ರಸ್ಟಿಂಗ್ ವಿಚಾರದ ವಿವರ ಇಲ್ಲಿದೆ ಓದಿ.

ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು?
ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು?

ರಾಮ್ ಚರಣ್ (Ram Charan) ಬಗ್ಗೆ ಶಿವಣ್ಣ (Shivanna) ವಿಶೇಷ ಗೌರವ ಹೊಂದಿದ್ದಾರೆ. ಅಷ್ಟೆ ಪ್ರೀತಿಯಿಂದಲೂ ಮಾತನಾಡಿಸೋದು ಇದೆ. ಪುನೀತ್ ರಾಜ್‌ (Puneeth Rajkumar) ಅವರಿಗೆ ಯಾವ ರೀತಿ ಪ್ರೀತಿ ತೋರಿಸುತ್ತಿದ್ದರೋ ರಾಮ್ ಚರಣ್‌ ಅವರಿಗೂ ಶಿವಣ್ಣ ಅದೇ ಪ್ರೀತಿಯನ್ನ ತೋರಿಸುತ್ತಾರೆ. ಇವರ ಈ ಬಾಂಡಿಂಗ್ ಸ್ಟ್ರಾಂಗ್ ಆಗಿಯೇ ಇದೆ. ಪೆದ್ದಿ ಚಿತ್ರದಲ್ಲಿ ಗುರು ಮತ್ತು ಶಿಷ್ಯರಾಗಿಯೇ ಇವರು ಕೆಲಸ ಮಾಡಿದ್ದಾರೆ. ಶಿವಣ್ಣನ ಪಾತ್ರ ಈ ಚಿತ್ರದಲ್ಲಿ ದೊಡ್ಡದೇನು ಇಲ್ಲ. ಆದರೆ, ಇದು ಅಷ್ಟೆ ಪವರ್ ಫುಲ್ ಪಾತ್ರವೇ ಆಗಿದೆ. ಆದರೂ, ಸಿನಿಮಾ ತಂಡ ಶಿವಣ್ಣನಿಗೆ ಅಷ್ಟೆ ಗೌರವ ಕೊಟ್ಟಿದೆ. ಜೊತೆಗೆ ಜೊತೆಯಾಗಿಯೆ ಶಿವಣ್ಣ (Shivanna) ಕೂಡ ಚಿತ್ರ ತಂಡದ ಜೊತೆಗೆ ಪ್ರಮೋಷನ್‌ಗೂ ಹೋಗಿದ್ದಾರೆ. ಈ ಸಮಯದ ಸಂದರ್ಶನ ಒಂದರಲ್ಲಿಯೇ ಶಿವಣ್ಣ ಇನ್ನೂ ಒಂದು ವಿಷಯ ಹೇಳಿಕೊಂಡಿದ್ದಾರೆ. ಈ ವಿಷಯದ ವಿವರ ಮುಂದೆ ಇದೆ ಓದಿ.

ಭಜರಂಗಿ ಸಿನಿಮಾ

ಶಿವರಾಜ್ ಕುಮಾರ್ ಅವರ ಅಭಿನಯದ ಭಜರಂಗಿ ಚಿತ್ರದಲ್ಲಿ ಶಿವಣ್ಣ ಸಿಕ್ಸ್‌ಪ್ಯಾಕ್ ಮಾಡಿದ್ದರು. ಆಗ ಇವರಿಗೆ 51 ಇಲ್ಲವೇ 52 ವರ್ಷ ಇತ್ತು. ಆಗಲೇ ಶಿವಣ್ಣ ಈ ಒಂದು ಚಿತ್ರಕ್ಕಾಗಿಯೇ ವರ್ಕೌಟ್ ಮಾಡಿದ್ದರು.
Will Ram Charan remake the movie Bhajarangi What did Shivanna say

ಭಜರಂಗಿ ರೀಮೇಕ್ ಮಾಡಲಿ…

ಭಜರಂಗಿ ಪಾತ್ರಕ್ಕಾಗಿಯೇ ಲಾಂಗ್ ಹೇರ್ ಸ್ಟೈಲ್ ವಿಗ್ ಧರಿಸಿದ್ದರು. ಕಣ್ಣಿಗೆ ಲೆನ್ಸ್ ಕೂಡ ಹಾಕಿದ್ದರು. ಕಾಸ್ಟೂಮ್ ಕೂಡ ಸೂಪರ್ ಆಗಿಯೇ ಇದ್ದವು. ಡೈರೆಕ್ಟರ್ ಎ.ಹರ್ಷ ಕಲ್ಪನೆಯ ಈ ಚಿತ್ರದಲ್ಲಿ ಶಿವಣ್ಣ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದರು.

ಶಿವಣ್ಣನ ಸೂಪರ್ ಸಿನಿಮಾ

ಶಿವಣ್ಣನ ಚಿತ್ರ ಜೀವನದಲ್ಲಿ ಇದು ಸೂಪರ್ ಸಿನಿಮಾ ಆಗಿದೆ. ಹಾಗೆ ಇನ್ನು ಸಾಕಷ್ಟು ಒಳ್ಳೆ ಒಳ್ಳೆ ಸಿನಿಮಾಗಳೂ ಇವೆ. ಆದರೆ, ಶಿವಣ್ಣನ ಸಿನಿಮಾಗಳಲ್ಲಿ ಯಾವುದು ರೀಮೇಕ್ ಆಗ್ಬೇಕು ಅನ್ನುವ ಕುತೂಹಲವೂ ಇದೆ.

ಹಾಗೆ ರಾಮ್ ಚರಣ್ ಯಾವ ಚಿತ್ರವನ್ನ ರೀಮೇಕ್ ಮಾಡ್ಬೇಕು.? ಹೀಗೊಂದು ಪ್ರಶ್ನೆಯನ್ನ ಶಿವರಾಜ್ ಕುಮಾರ್ ಅವರಿಗೆ ಸಂದರ್ಶನದಲ್ಲಿ ಆ್ಯಂಕರ್ ಅನುಶ್ರೀ ಕೇಳಿದರು. ಇದಕ್ಕೆ ಶಿವಣ್ಣನ ಉತ್ತರ ಏನಿತ್ತು ಗೊತ್ತಾ?

ಭಜರಂಗಿ ರೀಮೇಕ್ ಮಾಡಲಿ…

ಶಿವಣ್ಣ ಈ ಒಂದು ಮಾತನ್ನೆ ಹೇಳಿದ್ದಾರೆ. ರಾಮ್ ಚರಣ್ ಅವರು ನನ್ನ ಸಿನಿಮಾಗಳಲ್ಲಿ ಭಜರಂಗಿ ಚಿತ್ರ ರೀಮೇಕ್ ಮಾಡಿದರೆ ಚೆನ್ನಾಗಿ ಇರುತ್ತದೆ. ಅವರು ಈ ಚಿತ್ರದ ಕತೆ ಮತ್ತು ಪಾತ್ರಕ್ಕೆ ಸೂಕ್ತವಾಗಿಯೇ ಇದ್ದಾರೆ.

ಲಾಂಗ್ ಹೇರ್ ಹಾಗೂ ಒಳ್ಳೆ ಫಿಜಿಕ್ ಈ ಪಾತ್ರಕ್ಕೆ ಬೇಕು. ಅದು ರಾಮ್ ಚರಣ್‌ ಅವರಿಗೆ ಇದೆ ಅಂತಲೂ ಶಿವಣ್ಣ ಹೇಳಿದ್ದಾರೆ. ಇದರೊಟ್ಟಿಗೆ ತಮ್ಮ ಸಿಕ್ಸ್‌ಪ್ಯಾಕ್ ಬಗ್ಗೆನೂ ಹೇಳಿಕೊಂಡಿದ್ದಾರೆ.

Will Ram Charan remake the movie Bhajarangi What did Shivanna say

ರಾಮ್ ಚರಣ್ ಏನಂದ್ರು
ನಾನು ಸಿಕ್ಸ್ ಪ್ಯಾಕ್ ಮಾಡಿದ್ದೆ

ಈ ಭಜರಂಗಿ ಚಿತ್ರಕ್ಕಾಗಿಯೇ ನಾನು ಸಿಕ್ಸ್‌ಪ್ಯಾಕ್ ಮಾಡಿಕೊಂಡಿದ್ದೇನು ಅಂತಲೇ ಶಿವಣ್ಣ ಹೇಳಿದ್ದಾರೆ. ಆಗ ರಾಮ್ ಚರಣ್ ಅಷ್ಟೆ ಆಶ್ಚರ್ಯದಿಂದಲೂ ನೋಡಿದರು. ಶಿವಣ್ಣನ ಮಾತನ್ನು ಅಷ್ಟೆ ಕುತೂಹಲದಿಂದಲೂ ಕೇಳಿಸಿಕೊಳ್ಳುತ್ತಿದ್ದರು.

ರಾಮ್ ಚರಣ್ ಏನಂದ್ರು

ಶಿವಣ್ಣನ ಈ ಚಿತ್ರವನ್ನ ರೀಮೇಕ್ ಮಾಡೋಕೆ ರಾಮ್ ಚರಣ್ ಓಕೆ ಅಂತ ಹೇಳಿದರು. ಪೆದ್ದಿ ಚಿತ್ರದ ಕೆಲಸ ಮುಗೀತಾ ಇದ್ದಂತೇನೆ ಈ ಚಿತ್ರ ರೀಮೇಕ್ ಮಾಡ್ತೀವಿ ಅಂತಲೂ ಹೇಳಿದರು.

Will Ram Charan remake the movie Bhajarangi What did Shivanna say

ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು?

ಆದರೆ, ಈ ಚಿತ್ರವನ್ನ ಅದ್ಯಾವಾಗ ರೀಮೇಕ್ ಮಾಡ್ತಾರೋ ಗೊತ್ತಿಲ್ಲ. ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ರಾಮ್ ಚರಣ್ ಪಾಸಿಟಿವ್ ಉತ್ತರವನ್ನೆ ಕೊಟ್ಟಿದ್ದಾರೆ.

ಪೆದ್ದಿ ಜೂನ್-4 ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಸಿನಿಮಾ ತೆರೆ ಕಾಣುತ್ತಿದೆ. ವಿದೇಶದಲ್ಲೂ ಈ ಸಿನಿಮಾದ ಪ್ರೀಮಿಯರ್ ಶೋ ಪ್ಲಾನ್ ಆಗಿವೆ.

ಜೂನ್-3 ರಂದು ಈ ಚಿತ್ರದ ಪ್ರೀಮಿಯಶ್ ಶೋ ಇರುತ್ತವೆ. ಮರು ದಿನವೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದ ನಿರೀಕ್ಷೆ ಕೂಡ ಈ ಚಿತ್ರದ ಬಗ್ಗೆ ಇದೆ.

ಬುಚಿ ಬಾಬು ಸನಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed