Last Updated:
ಐಪಿಎಲ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಸತತ ಎರಡನೇ ಪ್ರಶಸ್ತಿಯ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ (Teams) ನಡುವೆ ಅಹಮದಾಬಾದ್ (Ahmedabad) ನಲ್ಲಿ ನಡೆಯಲಿದೆ. ಆರ್ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ (Champion) ಆಗುವ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಗುಜರಾತ್ ತಮ್ಮ ಮೂರನೇ ಫೈನಲ್ನಲ್ಲಿ ಆಡಲು ಸಜ್ಜಾಗಿದೆ. ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲಿ ತಮ್ಮ ಐದನೇ ಫೈನಲ್ ಪಂದ್ಯದಲ್ಲಿ ಚರಿತ್ರೆ (History) ಸೃಷ್ಟಿಸಲು ಆರ್ಸಿಬಿ ರೆಡಿಯಾಗಿದೆ. ಆದ್ದರಿಂದ, ಆರ್ಸಿಬಿ ಮತ್ತೆ ಚಾಂಪಿಯನ್ ಆಗಬೇಕಾದರೆ ಕಳೆದ ಮೂರು ಫೈನಲ್ ಸೋಲುಗಳಲ್ಲಿ ಮಾಡಿದ ಈ ಒಂದು ತಪ್ಪನ್ನು (Mistake) ಅಪ್ಪಿತಪ್ಪಿಯೂ ಮಾಡಬಾರದು.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡಗಳ ಪಟ್ಟಿಯಲ್ಲಿ ಆರ್ಸಿಬಿ ಮೂರನೇ ಸ್ಥಾನದಲ್ಲಿದೆ. ಆರ್ಸಿಬಿ ಮೊದಲು ಐಪಿಎಲ್ ಫೈನಲ್ ತಲುಪಿದ್ದು 2009 ರಲ್ಲಿ. ಆ ಪಂದ್ಯದಲ್ಲಿ ಆರ್ಸಿಬಿಗೆ 144 ರನ್ಗಳ ಗುರಿಯನ್ನು ಡೆಕ್ಕನ್ ಚಾರ್ಜಸ್ ತಂಡ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಬಿಗ್ ಮ್ಯಾಚ್ನ ಒತ್ತಡದಲ್ಲಿ ಕೇವಲ 137 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಪರಿಣಾ, 6 ರನ್ಗಳಿಂದ ಸೋತಿತು.
ಇದಾದ ನಂತರ, 2011 ರ ಐಪಿಎಲ್ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 206 ರನ್ಗಳ ಗುರಿಯನ್ನು ಆರ್ಸಿಬಿ ಬೆನ್ನಟ್ಟಿತ್ತು. ಈ ಬಾರಿಯೂ ಆರ್ಸಿಬಿ ತಂಡವು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿತ್ತು. ಕೇವಲ 147 ರನ್ಗಳನ್ನು ಗಳಿಸಿತು. ಇದರ ಪರಿಣಾಮವಾಗಿ 58 ರನ್ಗಳ ಹೀನಾಯ ಸೋಲುಂಟಾಯಿತು. 2016 ರ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ 208 ರನ್ಗಳನ್ನು ಗಳಿಸಿದಾಗ, ಆರ್ಸಿಬಿ ಕೇವಲ 200 ರನ್ಗಳನ್ನು ತಲುಪಲು ಸಾಧ್ಯವಾಯಿತು. ಹೀಗಾಗಿ, ಆರ್ಸಿಬಿ ತಂಡವು ಟ್ರೋಫಿಯನ್ನು ಕೇವಲ 8 ರನ್ಗಳಿಂದ ಕಳೆದುಕೊಂಡಿತು.
ಸುಮಾರು 9 ವರ್ಷಗಳ ನಂತರ ಐಪಿಎಲ್ 2025 ರಲ್ಲಿ ಆರ್ಸಿಬಿ ಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಈ ಪಂದ್ಯದಲ್ಲಿ ಆರ್ಸಿನಿ ಇತಿಹಾಸವನ್ನು ಬದಲಾಯಿಸಿತು. ಟಾಸ್ ಸೋತ ನಂತರ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿ 190 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಪಂಜಾಬ್ ಕಿಂಗ್ಸ್ ಕೇವಲ 184 ರನ್ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ ಮೊದಲ ಬಾರಿಗೆ 6 ರನ್ಗಳಿಂದ ಗೆದ್ದು ಐಪಿಎಲ್ ಟ್ರೋಫಿಯನ್ ಎತ್ತಿ ಹಿಡಿದಿತ್ತು.
ಈ ದಾಖಲೆಗಳನ್ನು ಗಮನಿಸಿದರೆ, ಆರ್ಸಿಬಿ ಫೈನಲ್ನಲ್ಲಿ ಮೂರು ಬಾರಿ ರನ್ ಚೇಸ್ ಮಾಡುವಾಗ
ಸೋತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ, ನಾಯಕ ರಜತ್ ಪಾಟೀದಾರ್ ಟಾಸ್ ಗೆದ್ದರೆ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಶುಭಮನ್ ಗಿಲ್ ನೇತೃತ್ವದ ಗುಜರಾತ್ ತಂಡವು ಟಾಸ್ ಗೆದ್ದು ಸಂದರ್ಭಗಳ ಆಧಾರದ ಮೇಲೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸಹ ನಿರ್ಣಾಯಕವಾಗಿರುತ್ತದೆ.
ಅಹಮದಾಬಾದ್ ಪಿಚ್ನಲ್ಲಿ ಸಾಮಾನ್ಯವಾಗಿ ಚೇಸ್ ಮಾಡಿದ ತಂಡಗಳು ಅತಿಹೆಚ್ಚು ಪಂದ್ಯಗಳನ್ನು ಗೆದ್ದಿವೆ. ಹೀಗಾಗಿ ಟಾಸ್ ಗೆದ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುತ್ತವೆ. ಆದರೆ, ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡ ಇದನ್ನು ಉಲ್ಟಾ ಮಾಡಿದೆ. ಈ ವರ್ಷ ಮತ್ತೊಮ್ಮೆ ಆರ್ಸಿಬಿ ಚರಿತ್ರೆ ಸೃಷ್ಟಿಸುತ್ತಾ? ಕಾದು ನೋಡಬೇಕಾಗಿದೆ.













