Last Updated:
Ajith: ನಟ ಅಜಿತ್ ಅವರ ತಾಯಿ ಮೃತಪಟ್ಟಿದ್ದಾರೆ. ಸಿಎಂ ವಿಜಯ್ ಈ ನೋವಿನ ಸಂದರ್ಭದಲ್ಲಿ ಗೆಳೆಯನಿಗೆ ಸಮಾಧಾನ ಮಾಡಲು ಬಂದರು. ಆ ವೇಳೆ ವಿಜಯ್ ಯಾಕೆ ಚಪ್ಪಲಿ ಧರಿಸಲಿಲ್ಲ?
ತಮಿಳಿನ ಖ್ಯಾತ ನಟ ಅಜಿತ್ (Ajith) ಅವರಿಗೆ ಮಾತೃ ವಿಯೋಗವಾಗಿದೆ. ಅವರ ತಾಯಿ ಮೋಹಿನಿ (Mother) ಅವರು ಮೃತಪಟ್ಟಿದ್ದಾರೆ. ಅಜಿತ್ ಅವರ ಆಪ್ತ ಸ್ನೇಹಿತ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C Joseph Vijay) ಶನಿವಾರ ಬೆಳಗ್ಗೆ ಅಜಿತ್ ಅವರ ಅಮ್ಮ ಮೋಹಿನಿ ಮಣಿ ಅಂತಿಮ ದರ್ಶನಕ್ಕೆ ಬಂದಿದ್ದರು. ಮೋಹಿನಿ ಅವರು ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ನಟಿ ತ್ರಿಶಾ ಸಾವಿನ ಮನೆಗೆ ಬಂದರು. ವಿಜಯ್ ಅವರು ಕೂಡಾ ಬಂದಿದ್ದರು. ಕೈಯಲ್ಲಿ ಹೂಮಾಲೆ ಹಿಡಿದು ಕಾರಿನಿಂದ ಬರಿಗಾಲಲ್ಲಿ ಇಳಿದು ಬಂದಿದ್ದಾರೆ ನಟ. ತಮ್ಮನ್ನು ಸ್ವೀಕರಿಸಲು ಕಾಯುತ್ತಿದ್ದ ಅಜಿತ್ ಅವರನ್ನು ಅಪ್ಪಿ ಹಿಡಿದು ಸಾಂತ್ವನಿಸಿದರು.
ಅಮ್ಮನ ಸಾವಿನ ಸುದ್ದಿ ತಿಳಿದ ನಂತರ ಶನಿವಾರ ಅಜಿತ್ ಚೆನ್ನೈಗೆ ಮರಳಿದರು. ನಂತರ ವಿಜಯ್ ಅಜಿತ್ ಮನೆಗೆ ಬಂದು ಮೋಹಿನಿ ಅವರ ಅಂತಿಮ ದರ್ಶನ ಪಡೆದರು.
ಜನರು ಅಂತ್ಯಕ್ರಿಯೆಯ ಮನೆ, ಸಾವು ನಡೆದ ಮನೆ, ಅಥವಾ ಮೃತರ ಮನೆಗೆ, ಅಂತ್ಯಕ್ರಿಯೆ ಸ್ಥಳಕ್ಕೆ ಹೋಗುವಾಗ ಸಾಮಾನ್ಯವಾಗಿ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಹೋಗುತ್ತಾರೆ. ಯಾಕೆ? ವಿಜಯ್ ಅವರು ಅಜಿತ್ ಅವರ ಮನೆಗೆ ಬರುವಾಗ ಚಪ್ಪಲಿ ಕಾರಿನಲ್ಲಿಯೇ ಬಿಟ್ಟು ಬರಿಗಾಲಿನಲ್ಲಿ ಬಂದಿದ್ದು ಸುದ್ದಿಯಾಯಿತು.
ಇದು ಬಹುತೇಕ ಎಲ್ಲ ಧರ್ಮಗಳಲ್ಲಿಯೂ ಪಾಲಿಸಲಾಗುವ ಒಂದು ಸಂಗತಿ. ಸಾವು ನಡೆದಂತಹ ಸ್ಥಳದ ಮೇಲಿನ ಗೌರವ, ಅವರ ದುಃಖದಲ್ಲಿ ಪಾಲುಗೊಳ್ಳುವ ಭಾಗವಾಗಿ ಜನರು ಸಾವಿನ ಮನೆಗೆ ಹೋಗುವಾಗ ಸಾಮಾನ್ಯವಾಗಿ ಚಪ್ಪಲಿ ಧರಿಸುವುದಿಲ್ಲ.
ಹಿಂದೂ ಧರ್ಮದಂತಹ ಅನೇಕ ಸಂಪ್ರದಾಯಗಳಲ್ಲಿ, ಅಂತ್ಯಕ್ರಿಯೆಯ ವಿಧಿಗಳು ನಡೆಯುವ ವ್ಯಕ್ತಿಯ ಮನೆ ಅಥವಾ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗೆ ಚಪ್ಪಲಿ ಅಥವಾ ಸಾಮಾನ್ಯವಾಗಿ ಬೂಟುಗಳನ್ನು ಧರಿಸುವುದು ಸತ್ತವರಿಗೆ ಮತ್ತು ಅಲ್ಲಿರುವ ಪವಿತ್ರ ವಸ್ತುಗಳು ಅಥವಾ ದೀಪಗಳಿಗೆ ಅಗೌರವ ಎಂದು ಪರಿಗಣಿಸಲಾಗುತ್ತದೆ.
ಸ್ಯಾಂಡಲ್ಗಳು, ಫ್ಲಿಪ್-ಫ್ಲಾಪ್ಗಳು ಮತ್ತು ಬೂಟುಗಳು ಸಾಮಾನ್ಯವಾಗಿ ಕ್ಯಾಶುಯಲ್, ದೈನಂದಿನ ಉಡುಗೆಯ ಭಾಗ. ಅಂತ್ಯಕ್ರಿಯೆಗಳು ಸಾಮಾನ್ಯವಾಗಿ ಸಂಪ್ರದಾಯವಾದಿ, ಔಪಚಾರಿಕ ಮತ್ತು ಗೌರವಾನ್ವಿತ ಸಂದರ್ಭ. ಹಾಗಾಗಿ ಅಲ್ಲಿ ತುಂಬಾ ಮೌನವಾಗಿ, ಗಂಭೀರವಾಗಿ ಇರಲಾಗುತ್ತದೆ. ಈ ಸಂದರ್ಭದ ಗಾಂಭೀರ್ಯಕ್ಕೆ ತಕ್ಕಂತೆ ಜನ ಚಪ್ಪಲಿ ಅವಾಯ್ಡ್ ಮಾಡುತ್ತಾರೆ.
Bangalore,Karnataka
May 31, 2026 11:13 AM IST













