Last Updated:
Child Abuse: ಹೆತ್ತ ತಾಯಿ ನೃತ್ಯದ ಲೋಕದಲ್ಲಿ ಮುಳುಗಿದ್ದಾಗ, ಮಗುವಿಗೆ ಸಿಕ್ಕಿದ್ದು ಮೃಗೀಯ ಹಿಂಸೆ. ಆಹಾರ ಸಿಲುಕಿ ಮಗು ಸತ್ತಿತು ಎಂಬ ಮಲತಂದೆಯ ನಾಟಕದ ಹಿಂದೆ, ಇಡೀ ರಾಜ್ಯವೇ ಬೆಚ್ಚಿಬೀಳುವ ಸಸ್ಪೆನ್ಸ್ ಅಡಗಿತ್ತು. ವೈದ್ಯರ ಅನುಮಾನ ಆ ಹಳೇ ಪ್ಲಾಸ್ಟರ್ನ ಹಿಂದಿದ್ದ ಕ್ರೂರ ಕೊಲೆಯನ್ನು ಬಯಲು ಮಾಡಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಆ ಒಂದೂವರೆ ವರ್ಷದ ಕಂದಮ್ಮನ (Child) ಕೈ ಮೇಲಿದ್ದ ಹಳೇ ಪ್ಲಾಸ್ಟರ್, ಯಾರಿಗೂ ತಿಳಿಯದ ಘೋರ ರಹಸ್ಯವೊಂದನ್ನು ಮೌನವಾಗಿಯೇ ಸಾರುತ್ತಿತ್ತು. ಹೆತ್ತ ತಾಯಿ (Mother) ನೃತ್ಯದ ಲೋಕದಲ್ಲಿ ಮುಳುಗಿದ್ದಾಗ, ಮಗುವಿಗೆ ಸಿಕ್ಕಿದ್ದು ಮೃಗೀಯ ಹಿಂಸೆ. ಆಹಾರ (Food) ಸಿಲುಕಿ ಮಗು ಸತ್ತಿತು ಎಂಬ ಮಲತಂದೆಯ ನಾಟಕದ (Drama) ಹಿಂದೆ, ಇಡೀ ರಾಜ್ಯವೇ ಬೆಚ್ಚಿಬೀಳುವ ಸಸ್ಪೆನ್ಸ್ ಅಡಗಿತ್ತು. ವೈದ್ಯರ ಅನುಮಾನ ಆ ಹಳೇ ಪ್ಲಾಸ್ಟರ್ನ ಹಿಂದಿದ್ದ ಕ್ರೂರ ಕೊಲೆಯನ್ನು ಬಯಲು ಮಾಡಿತು.
ಕೇರಳದ ತಿರುವನಂತಪುರಂ ಜಿಲ್ಲೆಯ ನೆಡುಮಂಗಾಡ್ನಲ್ಲಿ ಒಂದೂವರೆ ವರ್ಷದ ಮುಗ್ಧ ಮಗು ಅರ್ಷೀದ್ ಸಾವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಆರಂಭದಲ್ಲಿ ಆಹಾರ ಗಂಟಲಿನಲ್ಲಿ ಸಿಲುಕಿ ಮಗು ಮೃತಪಟ್ಟಿದೆ ಎಂದು ಬಿಂಬಿಸಲಾಗಿತ್ತು. ಮಗುವಿನ ಮಲತಂದೆ ಅಶ್ಕರ್ ಆಸ್ಪತ್ರೆ ಮತ್ತು ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲು ಯತ್ನಿಸಿದ್ದ. ಆದರೆ, ಪೊಲೀಸ್ ತನಿಖೆ ಮತ್ತು ವೈದ್ಯಕೀಯ ವರದಿಯಿಂದ ಇದು ಅಪಘಾತವಲ್ಲ, ಬದಲಿಗೆ ನಿರಂತರ ದೈಹಿಕ ಹಲ್ಲೆಯಿಂದ ನಡೆದ ಕ್ರೂರ ಕೊಲೆ ಎಂಬ ಕಹಿ ಸತ್ಯ ಹೊರಬಿದ್ದಿದೆ.
ಘಟನೆ ನಡೆದ ದಿನ ಮಗುವಿನ ತಾಯಿ ಅಖಿಲಾ ತಮಿಳುನಾಡಿನಲ್ಲಿ ನೃತ್ಯ ಕಾರ್ಯಕ್ರಮವೊಂದರಲ್ಲಿ ಬ್ಯುಸಿಯಾಗಿದ್ದರು. ಮಗುವನ್ನು ಮಲತಂದೆಯ ಬಳಿಯೇ ಬಿಟ್ಟು ಹೋಗಿದ್ದರು. ಮಗು ಕೊನೆಯುಸಿರೆಳೆಯುತ್ತಿದ್ದಾಗಲೂ ತಾಯಿ ನೃತ್ಯದ ಸಂಭ್ರಮದಲ್ಲಿದ್ದರು ಎಂಬುದು ಅತ್ಯಂತ ಹೃದಯವಿದ್ರಾವಕ ಸಂಗತಿ.
ಪೊಲೀಸ್ ತನಿಖೆಯ ವೇಳೆ ಮಗುವಿನ ದೇಹದ ಮೇಲೆ ಹಳೆಯ ಮತ್ತು ಆಳವಾದ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಹಿಂದೆ ಮಗುವಿನ ಎರಡು ಕೈಗಳಿಗೆ ಪ್ಲಾಸ್ಟರ್ ಹಾಕಲಾಗಿದ್ದ ಫೋಟೋಗಳು ಲಭ್ಯವಾಗಿದ್ದು, ಆಟವಾಡುವಾಗ ಬಿದ್ದು ಗಾಯಗೊಂಡಿದ್ದಾನೆ ಎಂದು ಅಶ್ಕರ್ ಮತ್ತು ಅಖಿಲಾ ಸುಳ್ಳು ಹೇಳಿ ಕ್ರೌರ್ಯವನ್ನು ಮುಚ್ಚಿಟ್ಟಿದ್ದರು. ಸರಿಯಾಗಿ ಮಾತನಾಡಲು ಬಾರದ ಮುಗ್ಧ ಕಂದಮ್ಮ ಮಲತಂದೆಯ ರಾಕ್ಷಸತನಕ್ಕೆ ಬಲಿಯಾಗಿದೆ.
ಮಲತಂದೆಯ ರಾಕ್ಷಸತನಕ್ಕೆ ಒಂದೂವರೆ ವರ್ಷದ ಕಂದಮ್ಮ ಬಲಿಯಾದ ಘಟನೆ ಕೇರಳದ ನೆಡುಮಂಗಾಡ್ನಲ್ಲಿ ನಡೆದಿದೆ. ಆಹಾರ ಗಂಟಲಿನಲ್ಲಿ ಸಿಲುಕಿ ಅರ್ಷೀದ್ ಮೃತಪಟ್ಟಿದ್ದಾನೆ ಎಂದು ಮಲತಂದೆ ಅಶ್ಕರ್ ನಾಟಕವಾಡಿದ್ದ. ಆದರೆ, ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ, ನಿರಂತರ ದೈಹಿಕ ಹಿಂಸೆಯಿಂದಲೇ ಮಗು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಘಟನೆ ನಡೆದಾಗ ತಾಯಿ ಅಖಿಲಾ ತಮಿಳುನಾಡಿನಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಈ ಕ್ರೂರ ಕೊಲೆಯನ್ನು ದೃಢಪಡಿಸಿರುವ ಪೊಲೀಸರು, ಕಲ್ಲೆದೆಯ ಮಲತಂದೆ ಅಶ್ಕರ್ ಮತ್ತು ಮಗುವನ್ನು ನಿರ್ಲಕ್ಷಿಸಿದ ತಾಯಿ ಅಖಿಲಾಳನ್ನು ಶೀಘ್ರದಲ್ಲೇ ಬಂಧಿಸಲಿದ್ದಾರೆ.
May 30, 2026 11:03 PM IST
Child Abuse: ಅಮ್ಮನ ನೆರಳಿಲ್ಲದ ಜಾಗದಲ್ಲಿ ಮಗುವಿಗೆ ಸಿಕ್ಕಿದ್ದು ಮಲತಂದೆ ಹಿಂಸೆ; ಕೈ ಮೇಲಿನ ಹಳೇ ಪ್ಲಾಸ್ಟರ್ ಹೇಳುತ್ತಿದೆ ಆ ಪುಟ್ಟ ಜೀವ ಅನುಭವಿಸಿದ ಯಾತನೆ!













