Miyazaki Mango: ವಿಶ್ವದ ದುಬಾರಿ ಮಾವು ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ; ಅಸಲಿಗೆ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದುಬಾರಿ ಮಾವು ಬೆಳೆದ ರೈತ


Last Updated:

ವಿಶ್ವದ ಅತ್ಯಂತ ದುಬಾರಿ ಮಾವು ಬೆಳೆದ ರೈತ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಲು ನೀವು ಮಿಸ್ ಮಾಡ್ದೆ ಈ ಸ್ಟೋರಿ ಓದಲೇ ಬೇಕು.

ದುಬಾರಿ ಮಾವು ಬೆಳೆದ ರೈತ
ದುಬಾರಿ ಮಾವು ಬೆಳೆದ ರೈತ

ಮಾವಿನ ಹಣ್ಣು ಯಾರಿಗೆ ಇಷ್ಟ (Indian Mango) ಆಗೋದಿಲ್ಲ ಹೇಳಿ? ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಭಾರತದ ಖ್ಯಾತಿಯನ್ನು ಜಗತ್ತಿಗೆ ಹೆಚ್ಚಿಸಿದೆ. ಭಾರತದ ಜನಪ್ರಿಯ ಮಾವಿನ ತಳಿಗಳಾದ ಆಲ್ಫೋನ್ಸೊ (Alphonso Mango) ಸೇರಿದಂತೆ ವಿವಿಧ ಮಾವಿನ ತಳಿಗಳು ದೇಶ ವಿದೇಶಕ್ಕೂ ರಫ್ತಾಗುತ್ತದೆ. ಬೇಸಿಗೆ ಆರಂಭವಾದರೆ ಸಾಕು ವಿವಿಧ ತಳಿಯ ಮಾವುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದರೆ ಒಡಿಶಾದ ರೈತನೋರ್ವ (Farmer) ಅಪರೂಪದ ತಳಿಯ ಮಾವು ಬೆಳೆದಿದ್ದು, ಈಗ ಈ ಮಾವು ಆ ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಹೌದು, ಒಡಿಶಾದ ಮಲ್ಕನ್​ಗಿರಿ ಜಿಲ್ಲೆಯ ರೈತ ದೇಬಾ ಪಧಿಯಾಮಿ ಎಂಬಾತ ಜಗತ್ತಿನ ದುಬಾರಿ ಮಾವು ಜಪಾನಿನ ಮಿಯಾಝಕಿ ಮಾವನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಈ ಅಪರೂಪದ ಮಾವಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 3 ಲಕ್ಷ ವರೆಗೂ ಬೆಲೆ ಇದೆ. ಆದರೆ ರೈತ ದೇಬಾ ಅವರು ಜಪಾನ್‌ನ ದುಬಾರಿ ಮಾವಿನ ತಳಿ ಮಿಯಾಝಾಕಿ ಮಾವು ಬೆಳೆದು ಯಶಸ್ವಿ ಆಗಿದ್ದರೂ, ಈಗ ಅವರಿಗೆ ಬಹುದೊಡ್ಡ ಸಮಸ್ಯೆ ಎದುರಾಗಿದೆ. ಅದು ಏನಪ್ಪಾ ಅಂದರೇ, ಈ ದುಬಾರಿ ಮಾವನ್ನು ಹೇಗೆ? ಯಾರಿಗೆ? ಮಾರಾಟ ಮಾಡಬೇಕು ಎಂಬುವುದು ತಿಳಿಯದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇದರೊಂದಿಗೆ ರಾತ್ರಿ-ಹಗಲು ಮಾವಿನ ಮರಕ್ಕೆ ಕಾವಾಲು ಇರೋದು ಇದು ಕೂಡ ದೊಡ್ಡ ಸವಾಲಾಗಿದೆ. ನಾಲ್ಕು ವರ್ಷಗಳ ಹಿಂದೆ ದೇಬಾ ಅವರು ಮಿಯಾಝಾಕಿ ಮಾವಿನ ಸಸಿಗಳನ್ನು ಪಡೆದುಕೊಂಡು ನಾಟಿ ಮಾಡಿದ್ದರು. ಹವಾಮಾನ ಬದಲಾವಣೆ ಹಾಗೂ ಕಠಿಣ ಸಂದರ್ಭದಲ್ಲೂ ಮರಗಳನ್ನು ಬೆಳೆಸಿದ್ದರು. ಸದ್ಯ ಈಗ ಮಾವಿನ ಮರಗಳು ಫಲ ನೀಡಿದೆ. ಆದರೆ ರೈತರಿಗೆ ಆತಂಕ, ಭಯ ಉಂಟು ಮಾಡಿದ್ದು, ಯಾರಾದರೂ ಈ ಮಾವಿನ ಹಣ್ಣು ಕದಿಯುತ್ತಾರೆ ಎಂದು ಮಾವಿನ ಮರದ ಬಳಿಕಯೇ ಕಾಯುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Vaibhav Suryavanshi: ಲಕ್ಷುರಿ ಕಾರು, ಮುಂಬೈನಲ್ಲಿ ದುಬಾರಿ ಫ್ಲಾಟ್; ಜಸ್ಟ್ 15 ವರ್ಷಕ್ಕೆ ಇಷ್ಟು ಕೋಟಿ ಆಸ್ತಿನಾ?

ರೈತ ದೇವಾ ದುಬಾರಿ ಮಾವಿನ ಹಣ್ಣನ್ನು ಬೆಳೆದರೂ ಇದನ್ನು ಹೇಗೆ ಮಾರಾಟ ಮಾಡಬೇಕು ಎಂದು ತಿಳಿಯದೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಮಿಯಾಝಾಕಿ ಮಾವಿನ ಹಣ್ಣಿನ ಪ್ಯಾಕಿಂಗ್, ಸಾಗಣೆ ಬಗ್ಗೆ ತೀವ್ರ ನಿಗಾ ವಹಿಸಬೇಕಿದೆ. ಇವುಗಳನ್ನು ಖರೀದಿ ಮಾಡುವವರು ಕೂಡ ಉನ್ನತ ಮಟ್ಟದ ಹೋಟೆಲ್/ ರೆಸ್ಟೋರೆಂಟ್ ಅವರು ಖರೀದಿ ಮಾಡುತ್ತಾರೆ. ಆದ್ದರಿಂದ ಈ ರೈತನಿಗೆ ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಮತ್ತು ಸಹಾಯ ಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed