ಯುವ ರಾಜಕುಮಾರ್ ಕೇದಾರನಾಥ್ ಅನುಭವ ಬರೆದುಕೊಂಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಅನುಭವದ ಸಾಲುಗಳನ್ನ ಬರೆದುಕೊಂಡಿದ್ದಾರೆ.
ನಿಶಬ್ದದ ಬಳಿಕ ಬರೋ ಸೌಂಡು ಬಲು ಜೋರು ಅಂತ ಹೇಳಿದ್ಯಾಕೆ?
(ಚಿತ್ರ ಕೃಪೆ: ಯುವ ರಾಜ್ಕುಮಾರ್ ಇನ್ಸ್ಟಾಗ್ರಾಮ್)
ಚಾರಣ ಸಹನೆಯನ್ನ ಕಳಿಸುತ್ತದೆ. ಖುಷಿಯನ್ನು ಕೊಡುತ್ತದೆ. ಇಡೀ ಈ ಒಂದು ಚಾರಣದಲ್ಲಿ ಹರ ಹರ ಮಹಾದೇವ ಪದ ನನ್ನ ಮೈಮನವನ್ನ ಆವರಿಸಿಕೊಂಡಿತ್ತು. ಪ್ರತಿ ವ್ಯಕ್ತಿ, ಪ್ರತಿ ವಸ್ತು ಹೀಗೆ ಎಲ್ಲೆಡೆ ಹರ ಹರ ಮಹಾದೇವ ಪದ ಪ್ರತಿಧ್ವನಿಸುತ್ತಿತ್ತು ಅಂತಲೇ ಯುವ ರಾಜಕುಮಾರ್ ಬರೆದುಕೊಂಡಿದ್ದಾರೆ.
ಇಡೀ ಚಾರಣವನ್ನ ಕಂಪ್ಲೀಟ್ ಮಾಡಿದೇವು. ಬೇಸ್ ಕ್ಯಾಂಪ್ಗೂ ಹೋದೆವು. ಅಲ್ಲಿಂದ ಕೇದಾರನಾಥನ ಮಂದಿರಕ್ಕೂ ಕಾಲಿಟ್ಟೇವು. ಆ ಕ್ಷಣವೇ ಎಲ್ಲವೂ ನಿಂತು ಹೋದ ಅನುಭವ ಆಯಿತು.
ಈ ಕ್ಷಣ ನಾನು ಪ್ರಸ್ತುತದಲ್ಲಿಯೇ ಇದ್ದೆ. ಯಾವುದೇ ಭೂತಕಾವೂ ಇಲ್ಲ. ಭವಿಷ್ಯ ಕಾಲವೂ ಇಲ್ಲ. ಅಲ್ಲಿ ಆ ಕ್ಷಣ ಕೇವಲ ಪ್ರಸ್ತುತ ಕಾಲದಲ್ಲಿಯೇ ಇದ್ದೆ. ಈ ಕ್ಷಣ ದೇವರು ನನ್ನ ಮುಂದೆ ಇದ್ದಾನೆ ಅನ್ನುವ ಭಾವ ಇತ್ತು.
ನಾನು ದೇವರ ಸನ್ನಿಧಿಯಲ್ಲಿಯೇದ್ದೆನೆ ಅನ್ನುವ ಭಾವನೆನೂ ಇತ್ತು. ಈ ಕ್ಷಣ ಏನೂ ಬೇಕು ಅಂತಲೂ ಅನಿಸಲಿಲ್ಲ ಅಂತಲೂ ಯುವ ರಾಜಕುಮಾರ್ ಬರೆದುಕೊಂಡಿದ್ದಾರೆ.
ನಿಶಬ್ದದ ನಂತರ ಬಂದ ಸದ್ದು
(ಚಿತ್ರ ಕೃಪೆ: ಯುವ ರಾಜ್ಕುಮಾರ್ ಇನ್ಸ್ಟಾಗ್ರಾಮ್)
ಈ ಒಂದು ಪರಿಸರದಲ್ಲಿ ನಾನು ನೋಡಿದಾಗ ಸುತ್ತಲು ಹಿಮಾಲಯ ಪರ್ವತಗಳು, ಮಧ್ಯದಲ್ಲಿರೋ ಮಂದಿರ, ಜನರು, ಕುದುರೆಗಳು, ಪಾರ್ಥನೆಗಳು, ದೇವಸ್ಥಾನದ ಘಂಟೆಗಳು, ಹರಿಯುವ ನದಿ ಇದನ್ನೆಲ್ಲ ನೋಡಿದೆ, ಆಲಿಸಿದೆ.
ಆದರೆ, ಇದರಿಂದ ಕಲಿತಿರೋದು ಏನು ಗೊತ್ತಾ? ನಿಶಬ್ದದ ನಂತರ ಬಂದ ಸೌಂಡ್ ಜೋರಾಗಿಯೇ ಇತ್ತು ಅನ್ನೋದು ತಿಳಿಯಿತು ಅಂತಲೇ ಯುವ ರಾಜಕುಮಾರ್ ಹೇಳಿಕೊಂಡಿದ್ದಾರೆ.
ನನ್ನ ಮುಂದಿನ ಪ್ರಾಜೆಕ್ಟ್ ಯಾವುದು? ನನ್ನ ಮುಂದಿನ ಹೆಜ್ಜೆ ಏನು? ಈ ಎಲ್ಲ ಪ್ರಶ್ನೆಗಳಿಗೆ ನನ್ನ ಉತ್ತರವೇನು?
ಈ ನಿಶಬ್ದವನ್ನ ಆನಂದಿಸಿ, ಯಾಕೆಂದ್ರರೆ ಹರ ಹರ ಮಹಾದೇವ ಅಂತಲೂ ಯುವ ರಾಜಕುಮಾರ್ ಬರೆದುಕೊಂಡಿದ್ದಾರೆ. ಅಂದ್ರೆ, ಸ್ವಲ್ಪ ಕಾಯಿರಿ, ಸೈಲೆಂಟ್ ಆಗಿಯೇ ಇರಿ, ಸೈಲೆನ್ಸ್ ಬಳಿಕ ಬರುವ ಸೌಂಡ್ ಜೋರಾಗಿಯೇ ಇರುತ್ತದೆ ಅನ್ನೋದನ್ನ ಹೀಗೆ ಹೇಳಿದ್ದಾರೆ. ಅಂದ್ರೆ, ದೊಡ್ಡದೇನು ಪ್ಲಾನ್ ಮಾಡಿದ್ದಾರೆ ಅನಿಸುತ್ತದೆ.
ನನ್ನ ಮುಂದಿನ ಹೆಜ್ಜೆ….
(ಚಿತ್ರ ಕೃಪೆ: ಯುವ ರಾಜ್ಕುಮಾರ್ ಇನ್ಸ್ಟಾಗ್ರಾಮ್)
ಯುವ ರಾಜ್ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಇದನ್ನ ಬರೆದುಕೊಂಡಿದ್ದಾರೆ. ಈ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರೊಟ್ಟಿಗೆ ಮೇಲೆ ಹೇಳಿದ ಅಷ್ಟು ವಿಷಯಗಳನ್ನ ಇಂಗ್ಲಿಷ್ ಅಲ್ಲಿ ಬರೆದುಕೊಂಡಿದ್ದಾರೆ.
ಇನ್ನುಳಿದಂತೆ ಯುವ ರಾಜ್ಕುಮಾರ್ ಅವರ ಮುಂದಿನ ಸಿನಿಮಾಗಳು ಯಾವದು? ಮುಂದಿನ ನಡೆ ಏನು ಅನ್ನೋದಕ್ಕೆ ಇದರಲ್ಲಿಯೇ ಉತ್ತರ ಕೊಟ್ಟಿದ್ದಾರೆ.
ಆದರೆ, ಯುವ ರಾಜ್ಕುಮಾರ್ ಅವರ ಈಗೀನ ಈ ಪೋಸ್ಟ್ ಹೆಚ್ಚು ಕುತೂಹಲ ಹುಟ್ಟಿಸಿದೆ ಅಂತ ಹೇಳಬಹುದು.












