Last Updated:
Vijay: ನಟ ವಿಜಯ್ ಅವರ ಜನ ನಾಯಗನ್ ಸಿನಿಮಾ ಜೂನ್ 19ರಂದು ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಅದಾಗಿ ಕೆಲವೇ ವಾರಗಳಲ್ಲಿ ಅವರ ಮಗನ ಸಿನಿಮಾ ಕೂಡಾ ರಿಲೀಸ್ ಆಗಲಿದೆ.
ಸೆನ್ಸಾರ್‌ನಲ್ಲಿ ಸಿಲುಕಿರುವ ವಿಜಯ್ (Vijay) ಅವರ ಕೊನೆಯ ಚಿತ್ರ ಜನ ನಾಯಗನ್ (Jana Nayagan) ಇನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ. ಇತ್ತೀಚಿನ ವದಂತಿಗಳು ಈ ಚಿತ್ರವು ವಿಜಯ್ ಅವರ ಹುಟ್ಟುಹಬ್ಬಕ್ಕೆ (Birthday) ಕೆಲವು ದಿನಗಳ ಮೊದಲು ಜೂನ್ 19 ರಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಿರುವಾಗಲೇ ವಿಜಯ್ (Vijay) ಮಗನ ಸಿನಿಮಾ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದೆ.
ಅಂದಹಾಗೆ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರು ಹೀರೋ ಆಗಿ ಬರ್ತಾ ಇಲ್ಲ. ಸಾಮಾನ್ಯವಾಗಿ ಹೀರೋ ಮಕ್ಕಳು ಹೀರೋ ಆಗ್ತಾರೆ. ಆದರೆ ಇವರು ಡೈರೆಕ್ಷನ್ಗೆ ಕೈ ಹಾಕಿದ್ದಾರೆ. ಈಗಾಗಲೇ ಬಾಲಿವುಡ್ನಲ್ಲಿ ಶಾರುಖ್ ಮಗ ಡೈರೆಕ್ಷನ್ಗೆ ಕೈ ಹಾಕಿ ಗೆದ್ದಿದ್ದನ್ನು ನೋಡಿದ್ದೇವೆ. ಈಗ ವಿಜಯ್ ಮಗನ ಸರದಿ.
ಹೌದು, ಜೇಸನ್ ಸಂಜಯ್ ನಿರ್ದೇಶನದ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜೇಸನ್ ಸಂಜಯ್ ಅವರ ಜನ ಸಿಗ್ಮ ಸಿನಿಮಾ ಜುಲೈ 31ಕ್ಕೆ ರಿಲೀಸ್ ಆಗಲಿದೆ.
ನಟ ಹಾಗೂ ತಮಿಳುನಾಡು ಸಿಎಂ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ . ಆಕ್ಷನ್ ಚಿತ್ರವಾಗಿರುವ ಈ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿತ್ತು.
ಆದರೆ ಕೆಲವು ಸಮಸ್ಯೆಗಳಿಂದ ಅದು ಸಾಧ್ಯವಾಗಲಿಲ್ಲ. ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಸಂಪತ್ ರಾಜ್, ಶಿವ ಪಂಡಿತ್, ಅನ್ಬು ದಾಸನ್, ಯೋಗ್ ಜೋಬಿ ಮತ್ತು ಇತರರು ಅವರ ಜೊತೆ ನಟಿಸಿದ್ದಾರೆ. ಥಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಈಗ ಈ ಸಿನಿಮಾ ಜುಲೈ 31ಕ್ಕೆ ರಿಲೀಸ್ಗೆ ನಿಗದಿಯಾಗಿದೆ. ಇನ್ನೊಂದು ಸಂಗತಿ ಏನೆಂದರೆ ವಿಜಯ್ ಅವರ ಜನ ನಾಯಗನ್ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದಾಗಿ ವಿಳಂಬವಾಗಿದೆ. ಈಗ ಈ ಸಿನಿಮಾ ಜೂನ್ 19ಕ್ಕೆ ಬರಲಿದೆ ಎನ್ನಲಾಗಿದೆ. ಆದರೆ ಇದು ಇನ್ನೂ ಕನ್ಫರ್ಮ್ ಆಗಿಲ್ಲ. ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ.
ಒಂದು ವೇಳೆ ಜೂನ್ 19ಕ್ಕೆ ಜನ ನಾಯಗನ್ ರಿಲೀಸ್ ಆಗಿ ಜುಲೈ 31ಕ್ಕೆ ಸಿಗ್ಮ ಸಿನಿಮಾ ರಿಲೀಸ್ ಆದರೆ ಅಲ್ಲಿಗೆ ತಿಂಗಳ ಗ್ಯಾಪ್ನಲ್ಲಿ ಅಪ್ಪ-ಮಗನ ಸಿನಿಮಾ ಚಿತ್ರಮಂದಿರಕ್ಕೆ ಬರೋದು ಬಹುತೇಕ ಪಕ್ಕಾ ಆಗಿದೆ.
Bangalore,Karnataka













