Fresh Fruits/Vegetables: ಮನೆಗೆ ತೋಟದಿಂದ ನೇರವಾಗಿ ಬರುತ್ತೆ ಹಣ್ಣು-ತರಕಾರಿ; ಅದು ಕೂಡ 4 ಕ್ಲಿಕ್ಕಲ್ಲಿ, ತಾಜಾ ಮಾವಿಗಂತೂ ಇದೇ ಬೆಸ್ಟ್‌ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮಾವಿನ ಹಣ್ಣು ಮನೆ ಬಾಗಿಲಿಗೆ!


Last Updated:

ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್‌ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ

ಮಾವಿನ ಹಣ್ಣು ಮನೆ ಬಾಗಿಲಿಗೆ!
ಮಾವಿನ ಹಣ್ಣು ಮನೆ ಬಾಗಿಲಿಗೆ!

ಬೆಂಗಳೂರು; ಟ್ರಾಫಿಕ್‌ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್‌ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News)  ಮಿಸ್ ಮಾಡ್ದೆ ಓದಿ! ಕೇವಲ 24 ಗಂಟೆಯಲ್ಲಿ ನಿಮ್ಮ ಮನೆಗೆ ಬರಲಿದೆ ರಸಭರಿತ ಮಾವು! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ! ಇನ್ಮುಂದೆ ನೀವು ಅಂಚೆ ಕಚೇರಿಯಿಂದ (Post Office) ಬರುವ ಪತ್ರಗಳಿಗಾಗಿ ಮಾತ್ರವಲ್ಲ, ಬಾಯಲ್ಲಿ ನೀರೂರಿಸುವ ತಾಜಾ ಹಣ್ಣುಗಳಿಗಾಗಿಯೂ (Fresh Fruits) ಕಾಯಬಹುದು!

ಭಾರತೀಯ ಅಂಚೆ ಇಲಾಖೆಯ ಪ್ಲಾನ್

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹಾಗೂ ನಗರದ ಮೂಲೆ ಮೂಲೆಗೂ ತಾಜಾ ಹಣ್ಣು, ತರಕಾರಿಗಳನ್ನು ತಲುಪಿಸಲು  ಹಾಪ್‌ಕಾಮ್ಸ್ (HOPCOMS) ಹಾಗೂ  ಭಾರತೀಯ ಅಂಚೆ ಇಲಾಖೆ ಕೈಜೋಡಿಸಿದ್ದು,  ‘ರೈತರ ಅಂಚೆ’  ಎಂಬ ಬಂಪರ್ ಆನ್‌ಲೈನ್ ಮಾರಾಟ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ!

ಏನಿದು ‘ರೈತರ ಅಂಚೆ?ʼ

ಬೆಂಗಳೂರು ಬೃಹತ್ತಾಗಿ ಬೆಳೆದಿದೆ, ಆದರೆ ಎಲ್ಲಾ ಏರಿಯಾಗಳಲ್ಲೂ ಹಾಪ್‌ಕಾಮ್ಸ್ ಮಳಿಗೆಗಳಿಲ್ಲ. ಹೀಗಾಗಿ ರೈತರು ಬೆಳೆದ ಫ್ರೆಶ್ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ, ಅದೂ ನಮ್ಮ ಪೋಸ್ಟ್ ಮ್ಯಾನ್ ಗಳ ಮೂಲಕವೇ ತಲುಪಿಸುವ ಮಾಸ್ಟರ್ ಪ್ಲಾನ್ ಇದಾಗಿದೆ.

ಮನೆ ಬಾಗಿಲಿಗೆ ಮಾವು ಬರೋದು ಹೇಗೆ?

ಹಾಪ್‌ಕಾಮ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮಗೆ ಇಷ್ಟವಾದ ಹಣ್ಣು/ತರಕಾರಿ ಆಯ್ಕೆ ಮಾಡಿ, ಆನ್‌ಲೈನ್‌ನಲ್ಲೇ ಹಣ ಪಾವತಿಸಿ. ಅಷ್ಟೇ! 24 ಗಂಟೆಯೊಳಗೆ  ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಬಂದು ಹಣ್ಣಿನ ಬಾಕ್ಸ್ ಕೊಟ್ಟು ಹೋಗ್ತಾರೆ!

ಗ್ರಾಹಕರು ಹಾಪ್‌ಕಾಮ್ಸ್‌ನ ಅಧಿಕೃತ ವೆಬ್‌ಸೈಟ್ https://hopcomsbengaluru.com ಗೆ ಭೇಟಿ ನೀಡಿ ಸರಳವಾದ 4 ಹಂತಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು. ಮೊದಲು ವೆಬ್‌ಸೈಟ್ ಲಿಂಕ್ ಓಪನ್ ಮಾಡಿ, ಹೊಸ ಬಳಕೆದಾರರಾಗಿದ್ದರೆ “Sign Up” ಆಯ್ಕೆ ಮಾಡಿಕೊಂಡು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಸ್ಕ್ರೀನ್ ಮೇಲೆ ನಮೂದಿಸಿ, ಖಾತೆಯನ್ನು ಖಚಿತಪಡಿಸಿಕೊಳ್ಳಬೇಕು. ಲಾಗಿನ್ ಪುಟಕ್ಕೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ “Login” ಬಟನ್ ಕ್ಲಿಕ್ ಮಾಡಬೇಕು. ಲಾಗಿನ್ ಆದ ಬಳಿಕ ಹೋಮ್ ಪೇಜ್‌ನಲ್ಲಿ ನಿಮ್ಮ ನಗರ ಮತ್ತು ಪಿನ್‌ಕೋಡ್ ಅನ್ನು ನಮೂದಿಸಬೇಕು. ನಂತರ ನಿಮಗೆ ಬೇಕಾದ ತಾಜಾ ಉತ್ಪನ್ನಗಳನ್ನು ಆಯ್ದುಕೊಂಡು ಕಾರ್ಟ್‌ಗೆ (Cart) ಸೇರಿಸಿ, ಆನ್‌ಲೈನ್ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಹಾಗೂ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಈ ವಿನೂತನ “ರೈತರ ಅಂಚೆ” ಡಿಜಿಟಲ್ ವ್ಯವಸ್ಥೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಹಾಪ್‌ಕಾಮ್ಸ್ ಸಂಸ್ಥೆ ತಿಳಿಸಿದೆ.
ಮಾವಿನ ತಳಿ ಹಾಗೂ ಬೆಲೆಗಳ ವಿವರ

ಮಾವಿನ ಹಣ್ಣಿನ ಸೀಸನ್ ನಡೀತಿದ್ದು, ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ 3 ಕೆಜಿ ಹಾಗೂ 5 ಕೆಜಿ ಬಾಕ್ಸ್‌ಗಳು ಈಗ ಆನ್‌ಲೈನ್‌ನಲ್ಲಿ ಲಭ್ಯ! ಬೆಲೆ ಕೇಳಿದ್ರೆ ನೀವು ಈಗಲೇ ಆರ್ಡರ್ ಮಾಡೋದು ಗ್ಯಾರಂಟಿ!

ಮಾವಿನತಳಿ (3 ಕೆಜಿಗೆ)    ಬೆಲೆ (ಶಿಪ್ಪಿಂಗ್ ಸೇರಿ)

  • ತೋತಾಪುರಿ                     ₹177
  • ಸಿಂಧೂರ                         ₹222
  • ರಸಪುರಿ                            ₹321
  • ಮಲ್ಲಿಕಾ                           ₹330
  • ಬಂಗನಪಲ್ಲಿ / ಬಾದಾಮಿ  ₹336
  • ದಶೇರಿ                              ₹378
  • ಅಲ್ಫಾನ್ಸೋ (ಆಪೂಸ್)     ₹396
  • ಕೇಸರ್                            ₹564
  • ಮಲ್ಗೋವಾ                    ₹651
  • ಇಮಾಮ್ ಪಸಂದ್         ₹765

ಈಗಲೇ ಆನ್‌ಲೈನ್‌ನಲ್ಲಿ ಯಾಕೆ ಆರ್ಡರ್ ಮಾಡಬೇಕು?

ಇದನ್ನೂ ಓದಿ: IMD Monsoon Alert: ರೈತರಿಗೆ ಬಿಗ್ ಶಾಕ್! ಈ ಬಾರಿ ಮಾನ್ಸೂನ್ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ, ಐಎಂಡಿ ಅಲರ್ಟ್!

ರೈತರಿಂದ ನೇರವಾಗಿ ಮಾವಿನ ಹಣ್ಣುಗಳನ್ನು ಖರೀದಿಸುವುದರಿಂದ ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ನ್ಯಾಯಯುತ ಲಾಭ ಸಿಗುತ್ತದೆ ಹಾಗೂ ನಿಮಗೂ ಕೂಡ ತಾಜಾ ಮತ್ತು ನೈಸರ್ಗಿಕವಾದ ಹಣ್ಣುಗಳು ದೊರೆಯುತ್ತವೆ. ಈ ಹಣ್ಣುಗಳು ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾಗಿದ್ದು, ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾಗಿವೆ. ಇನ್ನು ಹಣ್ಣುಗಳನ್ನು ಖರೀದಿಸಲು ಮಾರ್ಕೆಟ್‌ಗೆ ಹೋಗಿ ಟ್ರಾಫಿಕ್‌ನಲ್ಲಿ ಒದ್ದಾಡುವ ಬದಲು, ಮನೆಯಲ್ಲೇ ಆರಾಮವಾಗಿ ಕುಳಿತು ಆರ್ಡರ್ ಮಾಡುವುದರಿಂದ ನಿಮ್ಮ ಅಮೂಲ್ಯವಾದ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed