Last Updated:
Family Case: ಇಬ್ಬರು ಹೆಂಡತಿಯರ ಗಂಡ ಇವತ್ತು ಅನಾಥ ಶವವಾಗಿದ್ದಾನೆ. ಅಪಘಾತ ಎಂದು ಜಗತ್ತಿಗೆ ಸುಳ್ಳು ಕಥೆ ಹೇಳಿ, ಕಣ್ಣೀರು ಹಾಕುತ್ತಿದ್ದ ಆಕೆಯ ಮುಖವಾಡ ಕಳಚಿದೆ. ಪ್ರೀತಿಯ ನಾಟಕವಾಡಿ ಗಂಡನ ಜೀವವನ್ನೇ ಮಣ್ಣು ಮಾಡಿದ ಆಕೆಯ ಕೊಲೆ ಸಂಚು ಬಯಲಾಗಿದ್ದು ಹೇಗೆ? ನಂಬಿಸಿ ಕುತ್ತಿಗೆ ಸೀಳಿದ ಆ ಅಸಲಿ ವಿಲನ್ ಯಾರು? ಇದಕ್ಕೆಲ್ಲಾ ಆನ್ಸರ್ ಇಲ್ಲಿದೆ.
ಒಬ್ಬನನ್ನೇ ನಂಬಿ ಬಂದ ಇಬ್ಬರು ಹೆಂಡತಿಯರ (Wife’s) ಗಂಡ ಇವತ್ತು ಅನಾಥ ಶವವಾಗಿದ್ದಾನೆ. ಅಪಘಾತ (Accident) ಎಂದು ಜಗತ್ತಿಗೆ ಸುಳ್ಳು ಕಥೆ (Story) ಹೇಳಿ, ಕಣ್ಣೀರು ಹಾಕುತ್ತಿದ್ದ ಆಕೆಯ ಮುಖವಾಡ ಕಳಚಿದೆ. ಪ್ರೀತಿಯ (Love) ನಾಟಕವಾಡಿ ಗಂಡನ ಜೀವವನ್ನೇ ಮಣ್ಣು ಮಾಡಿದ ಆಕೆಯ ಕೊಲೆ ಸಂಚು ಬಯಲಾಗಿದ್ದು ಹೇಗೆ? ನಂಬಿಸಿ ಕುತ್ತಿಗೆ ಸೀಳಿದ ಆ ಅಸಲಿ ವಿಲನ್ ಯಾರು? ಇದಕ್ಕೆಲ್ಲ ಇಲ್ಲಿದೆ ಆನ್ಸರ್.
ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ನಡೆದ ಭೀಕರ ಹತ್ಯಾಕಾಂಡ ದೇಶವನ್ನೇ ಬೆಚ್ಚಿಬೀಳಿಸಿದೆ. ಮೊದಲಿಗೆ ಇದು ಕಾರು ಅಪಘಾತವೆಂದು ಭಾಸವಾದರೂ, ನಂತರದ ಪೊಲೀಸ್ ತನಿಖೆಯಲ್ಲಿ ಇದು ಪೂರ್ವಯೋಜಿತ ಕುಟುಂಬ ಹತ್ಯೆ ಎಂಬುದು ಬಹಿರಂಗವಾಗಿದೆ. ಒಂದೇ ಕುಟುಂಬದ ನಾಲ್ವರನ್ನು ಕೊಂದು, ಅವರ ಶವಗಳನ್ನು ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಜನರಲ್ಲಿ ಆತಂಕ ಹುಟ್ಟಿಸಿದೆ.
ಅಜ್ಮೇರ್ ಜಿಲ್ಲೆಯ ಬೋರಾಡಾ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮಪುರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದ ರಸ್ತೆಯಲ್ಲಿ ಬೆಳಿಗ್ಗೆ ಒಂದು ಸ್ಕಾರ್ಪಿಯೊ ಕಾರು ಹೊತ್ತಿ ಉರಿಯುತ್ತಿರುವ ಮಾಹಿತಿ ಪೊಲೀಸರಿಗೆ ದೊರಕಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನೊಳಗೆ ಮೂರು ಸುಟ್ಟು ಕರಕಲಾದ ಶವಗಳನ್ನು ಪತ್ತೆಹಚ್ಚಿದರು. ಮತ್ತೊಬ್ಬ ವ್ಯಕ್ತಿಯನ್ನು ಕಾರಿನಿಂದ ಹೊರತೆಗೆದಿದ್ದರೂ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಆರಂಭದಲ್ಲಿ ಇದು ರಸ್ತೆ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಸ್ಥಳ ಪರಿಶೀಲನೆಯ ವೇಳೆ ಹಲವು ಅನುಮಾನಾಸ್ಪದ ಸಂಗತಿಗಳು ಬೆಳಕಿಗೆ ಬಂದವು.
ಮೃತರನ್ನು ಮಾಜಿ ಸರ್ಪಂಚ್ ರಾಮಸಿಂಗ್ ಚೌಧರಿ, ಅವರ ತಾಯಿ ಪೂಸಿ ದೇವಿ, ಎರಡನೇ ಪತ್ನಿ ಸುರಜ್ಞಾನ ದೇವಿ ಮತ್ತು ಸಂಬಂಧಿ ಮಹಿಮಾ ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಪೊಲೀಸರು ಮನೆಯೊಳಗೆ ರಕ್ತದ ಕಲೆಗಳು ಹಾಗೂ ಹೋರಾಟದ ಗುರುತುಗಳನ್ನು ಪತ್ತೆಹಚ್ಚಿದರು. ಇದರಿಂದ ಪ್ರಕರಣ ಅಪಘಾತವಲ್ಲ, ಹತ್ಯೆ ಎಂಬ ಅನುಮಾನ ಗಟ್ಟಿಯಾಯಿತು. ಬಳಿಕ ನಡೆದ ವಿಚಾರಣೆಯಲ್ಲಿ ರಾಮಸಿಂಗ್ ಅವರ ಮೊದಲ ಪತ್ನಿ ಸುನಿತಾ, ಮಗಳು ಸರಿತಾ ಮತ್ತು ಅಪ್ರಾಪ್ತ ಪುತ್ರ ಈ ಕೊಲೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ರಾಮಸಿಂಗ್ ಮತ್ತು ಮೊದಲ ಪತ್ನಿ ಸುನಿತಾ ನಡುವೆ ಹಲವು ವರ್ಷಗಳಿಂದ ಕುಟುಂಬ ಕಲಹ ನಡೆಯುತ್ತಿತ್ತು. ರಾಮಸಿಂಗ್ 2017ರಲ್ಲಿ ಎರಡನೇ ಮದುವೆಯಾಗಿದ್ದರಿಂದ ಮನೆಯೊಳಗಿನ ವೈಮನಸ್ಸು ಹೆಚ್ಚಾಗಿತ್ತು. ಪ್ರತಿದಿನ ಜಗಳಗಳು ನಡೆಯುತ್ತಿದ್ದವು. ಘಟನೆಗೆ ಮುನ್ನದ ರಾತ್ರಿ ಸಹ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಬಳಿಕ ಸುನಿತಾ ತನ್ನ ಇಬ್ಬರು ಮಕ್ಕಳ ಜೊತೆ ಸೇರಿ ಕುಟುಂಬ ಸದಸ್ಯರ ಮೇಲೆ ತೀಕ್ಷ್ಣಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಹತ್ಯೆಯ ಬಳಿಕ ಆರೋಪಿಗಳು ಶವಗಳನ್ನು ಕಾರಿನಲ್ಲಿ ತುಂಬಿ, ಮನೆಯಿಂದ ಸುಮಾರು 500 ಮೀಟರ್ ದೂರಕ್ಕೆ ತೆಗೆದುಕೊಂಡು ಹೋಗಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಘಟನೆ ಅಪಘಾತ ಅಥವಾ ಆಕಸ್ಮಿಕ ಬೆಂಕಿ ಅವಘಡ ಎಂದು ತೋರಿಸಲು ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿಗೆ ಬೆಂಕಿ ಹಚ್ಚಲು ಟ್ರ್ಯಾಕ್ಟರ್‌ನಿಂದ ಡೀಸೆಲ್ ತೆಗೆದುಕೊಂಡಿರುವ ಸುಳಿವೂ ದೊರೆತಿದೆ.
ಈ ಪ್ರಕರಣದ ತನಿಖೆಯಲ್ಲಿ ಗ್ರಾಮಸ್ಥರ ಮಾಹಿತಿಯೂ ಮಹತ್ವದ ಪಾತ್ರ ವಹಿಸಿದೆ. ಗ್ರಾಮಸ್ಥರು ನೀಡಿದ ಸಣ್ಣಸಣ್ಣ ಮಾಹಿತಿಗಳನ್ನು ಜೋಡಿಸಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಫರೆನ್ಸಿಕ್ ತಂಡ ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳು ಘಟನಾ ಸ್ಥಳದಿಂದ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಸುನಿತಾ, ಮಗಳು ಸರಿತಾ ಮತ್ತು ಅಪ್ರಾಪ್ತ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.













