Telugu
oi-Muralidhar S
ಜೂ.ಎನ್ಟಿಆರ್
ಸಹೋದರ
ನಂದಮುರಿ
ಕಲ್ಯಾಣ್
ರಾಮ್
ಇಂದು
(ಜುಲೈ
5)
ಹುಟ್ಟುಹಬ್ಬ.
ಈ
ಸಂಬಂಧ
ಅವರ
ಹೊಚ್ಚ
ಹೊಸ
ಸಿನಿಮಾದ
ಗ್ಲಿಂಪ್ಸ್
ರಿಲೀಸ್
ಆಗಿದೆ.
ಚಿತ್ರತಂಡ
ಗ್ಲಿಂಪ್ಸ್
ಅನ್ನು
ಉಡುಗೊರೆಯಾಗಿ
ನೀಡಿದ್ದು,
ಬಿಡುಗಡೆಯಾದ
ಕೆಲವೇ
ಗಂಟೆಯಲ್ಲಿ
2.3
ಮಿಲಿಯನ್
ವೀವ್ಸ್
ಪಡೆದುಕೊಂಡಿದೆ.
ಅಂದ್ಹಾಗೆ,
ಕಲ್ಯಾಣ್
ರಾಮ್
ನಟಿಸುತ್ತಿರುವ
ಹೊಚ್ಚ
ಹೊಸ
ಸಿನಿಮಾದ
ಹೆಸರು
‘ಡೆವಿಲ್:
ದಿ
ಬ್ರಿಟಿಷ್
ಸೀಕ್ರೆಟ್
ಏಜೆಂಟ್’.
ಇದೇ
ಸಿನಿಮಾದ
ಗ್ಲಿಂಪ್ಸ್
ಅನ್ನು
ಚಿತ್ರತಂಡ
ಬಿಡುಗಡೆ
ಮಾಡಿದ್ದು,
ತೆಲುಗು
ಪ್ರೇಕ್ಷಕರಿಂದ
ಉತ್ತಮ
ಪ್ರತಿಕ್ರಿಯೆ
ಸಿಕ್ಕಿದೆ.

ಜೂ.ಎನ್ಟಿಆರ್
ಅಂತಯೇ
ಕಲ್ಯಾಣ್
ರಾಮ್
ಮಾಸ್
ಹೀರೊ.
ಈ
ನಟ
ಹೊಸ
ಬಗೆಯ
ಸ್ಟೋರಿಗಳನ್ನು
ಆಯ್ಕೆ
ಮಾಡಿಕೊಳ್ಳುತ್ತಾರೆ.
ಅದಂತೆಯೇ
ಕಲ್ಯಾಣ್
ರಾಮ್
ಈ
ಬಾರಿಯೂ
ಗೂಢಾಚಾರಿಯಾಗಿ
ಪ್ರೇಕ್ಷಕರ
ಮುಂದೆ
ಬರುತ್ತಿದ್ದಾರೆ.
ಅದೇ
ಈ
‘ಡೆವಿಲ್’.
‘ಡೆವಿಲ್:
ದಿ
ಬ್ರಿಟಿಷ್
ಸೀಕ್ರೆಟ್
ಏಜೆಂಟ್’
ಫಸ್ಟ್
ಲುಕ್
ರಿಲೀಸ್
ಮಾಡಿ
ಕುತೂಹಲ
ಕೆರಳಿಸಿತ್ತು.
ಆದ್ರೀಗ
ಡೆವಿಲ್
ಸಿನಿಮಾದ
ಗ್ಲಿಂಪ್ಸ್
ರಿಲೀಸ್
ಮಾಡಿದೆ.
ಇದು
ಪ್ರೇಕ್ಷಕರನ್ನು
ತುದಿಗಾಲಲ್ಲಿ
ನಿಲ್ಲುವಂತೆ
ಮಾಡಿದೆ.
1
ನಿಮಿಷ
2
ಸೆಕೆಂಡ್ನ
ಗ್ಲಿಂಪ್ಸ್ಗೆ
ಸಿನಿಪ್ರಿಯರು
ಫಿದಾ
ಆಗಿದ್ದಾರೆ.

ಈ
ಸಿನಿಮಾ
ಸ್ವಾತಂತ್ರ್ಯ
ಪೂರ್ವದ
ನಡೆಯುವ
ಕಥೆ.
ಕಲ್ಯಾಣ್
ರಾಮ್
ಡೆವಿಲ್
ಅವತಾರದಲ್ಲಿ
ಬ್ರಿಟಿಷ್
ಏಜೆಂಟ್
ಆಗಿ
ಕಾಣಿಸಿಕೊಳ್ಳುತ್ತಿದ್ದಾರೆ.
ಗೂಢಚಾರಿಯ
ರೂಲ್ಸ್
ಏನು?
ಅನ್ನೋದನ್ನು
ವಿವರಿಸುತ್ತಾ?
ಎಂಟ್ರಿ
ಕೊಡುವ
ಕಲ್ಯಾಣ್
ರಾಮ್
ಲುಕ್
ಹಾಗೂ
ಗೆಟಪ್ಗೆ
ಸಿನಿಪ್ರಿಯರು
ಕರಗಿ
ಹೋಗಿದ್ದಾರೆ.
ಈ
ಸಿನಿಮಾದಲ್ಲಿ
ಕಲ್ಯಾಣ್
ರಾಮ್
ಜೋಡಿಯಾಗಿ
ಸಂಯುಕ್ತ
ಮೆನನ್
ನಟಿಸಿರೋದು
ವಿಶೇಷ.
ತೆಲುಗು
ಮಾಧ್ಯಮಗಳಲ್ಲಿ
‘ಡೆವಿಲ್’
ಸಿನಿಮಾಗೂ
ನೇತಾಜಿ
ಸುಭಾಷ್
ಚಂದ್ರ
ಬೋಸ್
ಕಾಣೆಯಾಗಿದ್ದಕ್ಕೂ
ಸಂಬಂಧವಿದೆ
ಎಂದು
ವರದಿ
ಮಾಡಿವೆ.
ಅದು
ಗೊತ್ತಾಗೋಕೆ
ಟೀಸರ್,
ಟ್ರೈಲರ್
ಬರಬೇಕು.
ತನಗಿಂತ
4
ವರ್ಷ
ದೊಡ್ಡ
ನಟಿಯನ್ನು
ಇಷ್ಟಪಟ್ಟಿದ್ದ
ತಾರಕ್?
ಆ
ರಾದ್ದಾಂತಕ್ಕೆ
ಇಂಡಸ್ಟ್ರಿ
ಬಿಟ್ಟ
ನಟಿ
ಯಾರು?
ಡೆವಿಲ್
ಸಿನಿಮಾವನ್ನು
ಅಭಿಷೇಕ್
ನಾಮಾ
ನಿರ್ಮಾಣ
ಮಾಡಿದ್ದಾರೆ.
ನವೀನ್
ಮೇಡಾರಂ
ಈ
ಚಿತ್ರದ
ನಿರ್ದೇಶಕರು.
ಡೆವಿಲ್
ಚಿತ್ರಕ್ಕೆ
ಕಥೆ,
ಚಿತ್ರಕಥೆ
ಮತ್ತು
ಸಂಭಾಷಣೆಯನ್ನು
ಶ್ರೀಕಾಂತ್
ವಿಸ್ಸಾ
ಬರೆದಿದ್ದಾರೆ.
ಹರ್ಷವರ್ಧನ್
ರಾಮೇಶ್ವರ್
ಟ್ಯೂನ್
ಹಾಕಿದ್ದರೆ,
ಸೌಂದರರಾಜನ್
ಛಾಯಾಗ್ರಹಣವಿದೆ.
ತೆಲುಗು,
ಕನ್ನಡ
ಹಿಂದಿ,
ತಮಿಳು
ಭಾಷೆಗಳಲ್ಲಿ
‘ಡೆವಿಲ್’
ರಿಲೀಸ್
ಆಗಲಿದೆ.
English summary
Nandamuri Kalyan Ram new movie Devil The British Secret Agent Glimpse on his birthday, know more.
Wednesday, July 5, 2023, 23:34
Story first published: Wednesday, July 5, 2023, 23:34 [IST]