Last Updated:
Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾವು ಇದೀಗ ಹೊಸ ವಿವಾದಕ್ಕೆ ಗುರಿಯಾಗಿದೆ . ಸೇನಾಪಡೆಗಳ ಕಾರ್ಯಾಚರಣೆಯ ರಹಸ್ಯ ವಿವರಗಳನ್ನು ಬಹಿರಂಗಪಡಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಪರಿಶೀಲನೆ ನಡೆಸುವಂತೆ ಸೂಚಿನೆ ನೀಡಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ (Bollywood actor Ranveer Singh) ಅಭಿನಯದ ಧುರಂಧರ್ 2 (Dhurandhar 2) ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗಿ ಗೆದ್ದು ಬೀಗಿತ್ತು. ಇತ್ತೀಚಿಗೆ ಬಿಡುಗಡೆಗೊಂಡ ಸಿನಿಮಾಗಳನೆಲ್ಲಾ ಬೀಟ್ ಮಾಡಿ ಟಾಪ್ ಸ್ಥಾನಕ್ಕೆ ಏರಿತ್ತು. ಹೀಗಿರುವಾಗ ಇದೀಗ ಈ ಚಿತ್ರ ಹೊಸ ವಿವಾದಕ್ಕೆ ಗುರಿಯಾಗಿದೆ . ಸೇನಾಪಡೆಗಳ ಕಾರ್ಯಾಚರಣೆಯ ರಹಸ್ಯ ವಿವರಗಳನ್ನು ಬಹಿರಂಗಪಡಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ (Delhi High Court) ಕೇಂದ್ರ ಸರ್ಕಾರಕ್ಕೆ ಪರಿಶೀಲನೆ ನಡೆಸುವಂತೆ ಸೂಚಿನೆ ನೀಡಿದೆ.
ಸಶಸ್ತ್ರ ಸೀಮಾ ಬಲ್‌ನ ಹೆಡ್ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಧುರಂಧರ್ 2 ಚಿತ್ರವು ಸೈನಿಕ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಚಿತ್ರಿಸಿ, ದೇಶದ ಭದ್ರತೆ ಮತ್ತು ಸಮಗ್ರತೆಗೆ ಅಪಾಯ ಹುಟ್ಟಿಸಿದೆ ಎಂದು ಆರೋಪಿಸಲಾಗಿದೆ.
Delhi HC has directed Ministry of Information & Broadcasting and CBFC to decide plea claiming that “Dhurandhar: The Revenge” movie has potential of revealing information related to armed forces, even though it is claimed as a work of fiction.
Read more: https://t.co/fwOiDJi6jT pic.twitter.com/PhRMJdhweE— Live Law (@LiveLawIndia) May 20, 2026
ಅವರ ಪ್ರಕಾರ, ಚಿತ್ರದಲ್ಲಿ ತೋರಿಸಿದ ಕೆಲವು ಘಟನೆಗಳು ನಿಜ ಜೀವನದ ಕಾರ್ಯಾಚರಣೆಗಳ ಮಾದರಿಯನ್ನು ಹೋಲುತ್ತವೆ ಮತ್ತು ಇದು ಶತ್ರು ರಾಷ್ಟ್ರಗಳಿಗೆ ಉಪಯುಕ್ತ ಮಾಹಿತಿಯಾಗಬಹುದು ಎಂದು ತಿಳಿಸಿದ್ದಾರೆ .
ಜೊತೆಗೆ ಇವು ಎರಡೂ ಸಂಸ್ಥೆಗಳು ದೀಪಕ್ ಕುಮಾರ್ ಸಲ್ಲಿಸಿದ ಮನವಿಯನ್ನು ಪರೀಕ್ಷಿಸಿ, ಕಾನೂನುಸಮ್ಮತ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.ಧುರಂಧರ್ 2 ಈಗಾಗಲೇ ಯಶಸ್ವಿಯಾಗಿದ್ದರೂ, ಈ ಹೊಸ ಕಾನೂನು ವಿವಾದದಿಂದ ಸಿನಿಮಾ ತಂಡ ಮತ್ತೆ ಸುದ್ದಿಯಲ್ಲಿದೆ.
ಇನ್ನು ಧುರಂಧರ್ ಚಿತ್ರವು 2 OTT ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಅಂತರರಾಷ್ಟ್ರೀಯವಾಗಿ, ಈ ಚಿತ್ರವು ಮೇ 15 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಭಾರತದಲ್ಲಿ, ಇದು ಜೂನ್ 4 ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಇಂತಹ ಮತ್ತಷ್ಟು ಮಾಹಿತಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ.
Bangalore [Bangalore],Bangalore,Karnataka













