Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು |


ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ.

ಚಿತ್ರದಲ್ಲಿ ನಾಯಕ ಪಾತ್ರವನ್ನು ಬಾಬಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರೊಂದಿಗೆ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಸಪ್ನಾ ಪಬ್ಬಿ ಕೂಡ ಸಿನಿಮಾದ ಕಥಾ ವಿನ್ಯಾಸದಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ.

‘ಪಿಂಜರಾ’ ಹಾಡಿನಲ್ಲಿ ರಾಜ್‌ ಬಿ. ಶೆಟ್ಟಿ

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪಿಂಜರಾ’ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ. ಜೈಲಿನ ಹಿನ್ನೆಲೆಯಲ್ಲೇ ಚಿತ್ರೀಕರಣಗೊಂಡಿರುವ ಈ ಹಾಡಿನ ಕೇಂದ್ರ ಬಿಂದುವೇ ರಾಜ್ ಬಿ. ಶೆಟ್ಟಿ. ಕೈದಿಗಳ ಗುಂಪಿನ ನಡುವೆ ಅವರ ಡ್ಯಾನ್ಸ್ ಇದೀಗ ಎಲ್ಲರ ಗಮನ ಸೆಳೆದಿದೆ.

ಡೈರೆಕ್ಟರ್ ಅನುರಾಗ್ ಕಶ್ಯಪ್ ನೈಜ ಘಟನೆಗಳ ಸ್ಪೂರ್ತಿಯಿಂದಲೇ ಈ ಚಿತ್ರ ಮಾಡಿದ್ದಾರೆ. ಸಮೀರ್ ಮೆಹರಾ ಅನ್ನೋ ಪಾತ್ರವನ್ನ ಬಾಬಿ ಡಿಯೋಲ್ ಇಲ್ಲಿ ಮಾಡಿದ್ದಾರೆ. ಆದರೆ, ಈ ಪಾತ್ರಕ್ಕೆ ರಸಿಕತೆ ಜಾಸ್ತಿ ಇದೆ. ಇದೇ ಇಲ್ಲಿ ಯಡವಟ್ಟು ಮಾಡುತ್ತದೆ. ಇದರಿಂದಲೇ ಸಮೀರ್ ಮೆಹರಾ ಜೈಲಿಗೆ ಹೋಗ್ತಾರೆ.

ರಾಜ್ ಬಿ ಶೆಟ್ಟಿಗೂ ಬಾಬಿ ಡಿಯೋಲ್ ಪಾತ್ರಕ್ಕೂ ಇಲ್ಲಿ ನೇರವಾದ ಕನೆಕ್ಷನ್ ಏನೂ ಇಲ್ಲ. ಆದರೆ, ಇದು ಜೈಲಿನಲ್ಲಿಯೇ ಕನೆಕ್ಟ್ ಆಗುತ್ತದೆ. ಅದು ಹೇಗೆ ಆಗುತ್ತದೆ. ಮುಂದೆ ಏನೆಲ್ಲ ಆಗುತ್ತದೆ ಅನ್ನೋದು ಚಿತ್ರದಲ್ಲಿಯೇ ನೋಡಬೇಕು. ರಾಜ್ ಬಿ ಶೆಟ್ಟಿ ಇಲ್ಲಿ ಕೈದಿಯ ಪಾತ್ರ ಮಾಡಿದ್ದಾರೆ. ಹಾಗಂತ ಜೈಲು ಡ್ರೆಸ್ ಅಲ್ಲಿ ಏನೂ ಕಾಣಿಸೋದಿಲ್ಲ. ಸರಳ ಉಡುಪಿನಲ್ಲಿಯೇ ಕಾಣಿಸುತ್ತಾರೆ. ಕಾಮನ್ ಮ್ಯಾನ್ ತರವೂ ಇದ್ದಾರೆ.

ರಾಜ್ ಬಿ ಶೆಟ್ಟಿ ಅಭಿನಯದ ಈ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಜೂನ್-5 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದನ್ನ ಅಧಿಕೃತವಾಗಿಯೇ ಸಿನಿಮಾ ತಂಡ ಹೇಳಿಕೊಂಡಿದೆ. ಚಿತ್ರದ ಟ್ರೈಲರ್ ಜೊತೆಗೆ ಈ ಮಾಹಿತಿನೂ ಇದೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed