ಮೇ 23ರಂದು ಭಕ್ತರು ಹರಕೆ ಅರ್ಪಿಸುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಒಂದು ದಿನ ಮಾತ್ರವೇ 57,580 ಮಂದಿ ಭಕ್ತರು ಮುಡಿ ಅರ್ಪಿಸಿದ್ದು ವಿಶೇಷ. ತಿರುಮಲದಲ್ಲಿ ಮುಡಿ ಅರ್ಪಿಸುವ ಭಕ್ತರ ಕಾಯುವಿಕೆ ಸಂಖ್ಯೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ತಿರುಮಲದ ಹಲವು ಕಡೆಗಳಲ್ಲಿ ಕಲ್ಯಾಣಕಟ್ಟೆ ಕೇಂದ್ರಗಳನ್ನು ಏರ್ಪಾಡು ಮಾಡಿದೆ. ಟಿಟಿಡಿ ಪ್ರಮುಖ ಕಲ್ಯಾಣಕಟ್ಟೆಗಳಾದ PAC-1, PAC-2, PAC-3, PAC-5, GNC, HVC, ಸಪ್ತಗಿರಿ ವಿಶ್ರಾಂತಿ ಗೃಹ, ನಂದಕಂ ವಿಶ್ರಾಂತಿ ಗೃಹ, ಕೌಸ್ತುಭ ವಿಶ್ರಾಂತಿ ಗೃಹ, ಶ್ರೀ ವೆಂಕಟೇಶ್ವರ ವಿಶ್ರಾಂತಿ ಗೃಹ, ಶ್ರೀ ಪದ್ಮಾವತಿ ವಿಶ್ರಾಂತಿ ಗೃಹ ಬಳಿ 11 ಸಣ್ಣ ಸಣ್ಣ ಮುಡಿ ಅರ್ಪಿಸುವ ಕೇಂದ್ರಗಳನ್ನು ಹೆಚ್ಚುವರಿಯಾಗಿ ಆರಂಭ ಮಾಡಿದೆ.













