GT vs RCB: ಆರ್​​ಸಿಬಿ ಹೆಸರಿನಲ್ಲಿ 5 ಬಿಗ್ ರೆಕಾರ್ಡ್​! ಸಿಎಸ್‌ಕೆ-ಜಿಟಿ ಪ್ಲೇಆಫ್ ದಾಖಲೆಗಳನ್ನು ಉಡೀಸ್ ಮಾಡಿದ ಹಾಲಿ ಚಾಂಪಿಯನ್ | ಕ್ರೀಡಾ ಸುದ್ದಿ | ACTPnews

ರಾಯಲ್ ಚಾಲೆಂಜರ್ಸ್ ಬೆಂಗಳೂರು


Last Updated:

ಐಪಿಎಲ್ 2025 ರಲ್ಲಿ ಆರ್​​ಸಿಬಿ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐದು ಬೃಹತ್ ದಾಖಲೆಗಳನ್ನು ಮುರಿದಿದೆ. ಈ ಪಂದ್ಯದಲ್ಲಿ ಆರ್​​ಸಿಬಿ ಪರ ನಾಯಕ ರಜತ್ ಪಾಟೀದಾರ್ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ (IPL) 2026 ರ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ (Match) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್​​ಸಿಬಿ ಅದ್ಭುತ ಪ್ರದರ್ಶನ ನೀಡಿ 20 ಓವರ್‌ಗಳಲ್ಲಿ 254 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಆರ್​ಸಿಬಿ ಪರ ನಾಯಕ ರಜತ್ ಪಾಟೀದಾರ್ (Rajat Patidar) ಭರ್ಜರಿ ಅರ್ಧಶತಕದೊಂದಿಗೆ ಸಂಚಲನ ಮೂಡಿಸಿದರು. ಈ ಪಂದ್ಯದಲ್ಲಿ ಆರ್​​ಸಿಬಿ ಐದು ಪ್ರಮುಖ ದಾಖಲೆಗಳನ್ನು ಬ್ರೇಕ್ ಮಾಡಿತು.

ಆರ್‌ಸಿಬಿ ನಿರ್ಮಿಸಿದ 5 ದೊಡ್ಡ ದಾಖಲೆಗಳು

ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಆರ್‌ಸಿಬಿ ಅತಿ ಹೆಚ್ಚು ಬೌಂಡರಿ ಗಳಿಸಿದ ತಂಡವಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟರ್​​ಗಳು 38 ಬೌಂಡರಿಗಳನ್ನು ಬಾರಿಸಿದರು. ಇದಕ್ಕೂ ಮೊದಲು, ಐಪಿಎಲ್ 2012 ರ ಪ್ಲೇಆಫ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 33 ಬೌಂಡರಿಗಳನ್ನು ಬಾರಿಸಿದ್ದ ಸಿಎಸ್‌ಕೆ ಈ ದಾಖಲೆಯನ್ನು ಹೊಂದಿತ್ತು. ಈಗ ಸಿಎಸ್​​ಕೆ ದಾಖಲೆಯನ್ನು ಆರ್‌ಸಿಬಿ ಮುರಿದಿದೆ.

ಆರ್‌ಸಿಬಿ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ತಂಡವಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ 254 ರನ್ ಗಳಿಸಿತು. ಇದಕ್ಕೂ ಮೊದಲು, ಐಪಿಎಲ್ 2023 ರ ಪ್ಲೇಆಫ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 233 ರನ್ ಗಳಿಸಿದ್ದ ಜಿಟಿ ಈ ದಾಖಲೆಯನ್ನು ಹೊಂದಿತ್ತು. ಇದಲ್ಲದೆ, ಟಿ20 ಕ್ರಿಕೆಟ್ ನಾಕೌಟ್ ಪಂದ್ಯದಲ್ಲಿ ಆರ್‌ಸಿಬಿ ನಾಲ್ಕನೇ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆಯನ್ನು ಸಹ ಹೊಂದಿತ್ತು.

ಗರಿಷ್ಠ ಐಪಿಎಲ್ ಪ್ಲೇಆಫ್ ಪವರ್ ಪ್ಲೇ

ಪಂದ್ಯದಲ್ಲಿ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ತಮ್ಮ ಮೂರನೇ ಅತ್ಯಧಿಕ ಮೊತ್ತವನ್ನು ದಾಖಲಿಸಿತು. ಇದಲ್ಲದೆ, ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಪ್ಲೇಆಫ್‌ನಲ್ಲಿ ಐದನೇ ವೇಗದ ಅರ್ಧಶತಕ ಗಳಿಸಿದರು. ಅವರು ಕೇವಲ 21 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ಇದಲ್ಲದೆ, ಈ ಪಂದ್ಯದಲ್ಲಿ ಆರ್‌ಸಿಬಿ ಪವರ್ ಪ್ಲೇನಲ್ಲಿ 76 ರನ್ ಗಳಿಸಿತು. ಇದು ಐಪಿಎಲ್ ಪ್ಲೇಆಫ್ ಪವರ್ ಪ್ಲೇನಲ್ಲಿ ನಾಲ್ಕನೇ ಅತ್ಯಧಿಕ ಮೊತ್ತವಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಪ್ಲೇಆಫ್ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಕೋರ್‌ಗಳು

  • 265/5 – ಸೋಮರ್‌ಸೆಟ್ vs ಡರ್ಬಿಶೈರ್, ಟೌಂಟನ್, 2022 (ಕ್ವಾರ್ಟರ್-ಫೈನಲ್, ಟಿ20 ಬ್ಲಾಸ್ಟ್)
  • 262/3 – ಜಾರ್ಖಂಡ್ vs ಹರಿಯಾಣ, ಪುಣೆ, 2025 (ಫೈನಲ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ)
  • 255/5 – ಭಾರತ vs ನ್ಯೂಜಿಲೆಂಡ್, ಅಹಮದಾಬಾದ್, 2026 (ಫೈನಲ್, ಟಿ20 ವಿಶ್ವಕಪ್)
  • 254/5 – ಆರ್‌ಸಿಬಿ vs ಜಿಟಿ, ಧರ್ಮಶಾಲಾ, 2026 (ಕ್ವಾಲಿಫೈಯರ್ 1, ಐಪಿಎಲ್)
  • 253/7 – ಭಾರತ vs ಇಂಗ್ಲೆಂಡ್, ವಾಂಖೆಡೆ, 2026 (ಸೆಮಿಫೈನಲ್, ಟಿ20 ವಿಶ್ವಕಪ್)
  • ಐಪಿಎಲ್ ಪ್ಲೇಆಫ್‌ಗಳಲ್ಲಿ ರಜತ್ ಪಾಟೀದಾರ್ ಪ್ರದರ್ಶನ
  • 112*(54) vs ಲಕ್ನೋ ಸೂಪರ್ ಜೈಂಟ್ಸ್, ಎಲಿಮಿನೇಟರ್ 2022
  • 58(42) vs ರಾಜಸ್ಥಾನ ರಾಯಲ್ಸ್, ಕ್ವಾಲಿಫೈಯರ್ 2, 2022
  • 34(22) vs ರಾಜಸ್ಥಾನ ರಾಯಲ್ಸ್, ಎಲಿಮಿನೇಟರ್ 2024
  • 15*(8) vs ಪಂಜಾಬ್ ಕಿಂಗ್ಸ್, ಕ್ವಾಲಿಫೈಯರ್ 1, 2025
  • 26(16) vs ಪಂಜಾಬ್ ಕಿಂಗ್ಸ್, ಫೈನಲ್ 2025
  • 93*(33) vs ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್ 1, 2026

ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ತಂ ಡಗಳು

  • 38 – ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್, ಧರ್ಮಶಾಲಾ, 2026*
  • 33 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್, ಚೆನ್ನೈ, 2012
  • 32 – ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್, ವಾಂಖೆಡೆ, 2014
  • 31 – ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್, ಅಹಮದಾಬಾದ್, 2023
  • 31 – ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್, ನ್ಯೂ ಚಂಡೀಗಢ, 2025

ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಅತ್ಯಧಿಕ ಸ್ಕೋರ್‌ಗಳು

  • 254/5 – ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್, ಧರ್ಮಶಾಲಾ, 2026*
  • 233/3 – ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್, ಅಹಮದಾಬಾದ್, 2023
  • 228/5 – ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್, ನ್ಯೂ ಚಂಡೀಗಢ, 2025
  • 226/6 – ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್, ವಾಂಖೆಡೆ, 2014
  • 222/5 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್, ಚೆನ್ನೈ, 2012



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed