ODI World Cup 2027: ಭಾರತ ತಂಡ ಸುಲಭವಾಗಿ ವಿಶ್ವಕಪ್ ಗೆಲ್ಲುತ್ತೆ, ಆದರೆ ಅದೊಂದು ಸಮಸ್ಯೆ ಮೊದಲು ಸರಿಹೋಗಬೇಕಷ್ಟೇ! | ಕ್ರೀಡಾ ಸುದ್ದಿ | ACTPnews

ವೀರೇಂದರ್ ಸೆಹ್ವಾಗ್


Last Updated:

ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಟೂರ್ನಿಯಲ್ಲಿ ಭಾರತ ತಂಡ ಅತ್ಯಂತ ಸುಲಭವಾಗಿ ಜಯಗಳಿಸುವ ಅವಕಾಶ ಇದೆ, ಆದರೆ ತಂಡದಲ್ಲಿ ಬಹುದಿನಗಳಿಂದ ಕಾಡುತ್ತಿರುವ ಅದೊಂದು ಸಮಸ್ಯೆಯನ್ನ ತಿದ್ದಿಕೊಳ್ಳಬೇಕು ಎಂದು ಭವಿಷ್ಯ ನುಡಿದಿದ್ದಾರೆ.

ವೀರೇಂದರ್ ಸೆಹ್ವಾಗ್
ವೀರೇಂದರ್ ಸೆಹ್ವಾಗ್

2027ರ ಐಸಿಸಿ ಏಕದಿನ ವಿಶ್ವಕಪ್ (ODI World Cup 2027) ವೇಳಾಪಟ್ಟಿ ಬಿಡುಗಡೆಯಾಗಿದೆ. ಈಗಾಗಲೇ ತಂಡಗಳು ಸಿದ್ಧತೆಯನ್ನ ಆರಂಭಿಸಿವೆ. ತಂಡದ ಸಂಯೋಜನೆ ಬಗ್ಗೆ ಲೆಕ್ಕಾಚಾರ ಶುರು ಮಾಡಿವೆ. ಈ ಮಧ್ಯೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ (Virender Sehwag) ಟೂರ್ನಿಯಲ್ಲಿ ಭಾರತ ತಂಡ ಅತ್ಯಂತ ಸುಲಭವಾಗಿ ಜಯಗಳಿಸುವ ಅವಕಾಶ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಇದಕ್ಕಾಗಿ ಅವರು ಭಾರತ ತಂಡದ ಮುಂದೆ ಒಂದು ಪ್ರಮುಖವಾದ ಶರತ್ತನ್ನು ಇಟ್ಟಿದ್ದಾರೆ. ಶನಿವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೆಹ್ವಾಗ್, ಭಾರತ ತಂಡದ ಸಂಯೋಜನೆ ಬಗ್ಗೆ ಏನೇಳಿದ್ದಾರೆಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.

ವಿಶ್ವಕಪ್ ಗೆಲ್ಲಲು ಸೆಹ್ವಾಗ್ ನೀಡಿರುವ ಸಲಹೆ

ಭಾರತ ತಂಡದ ಬ್ಯಾಟಿಂಗ್ ವಿಭಾಗವು 2023ರ ವಿಶ್ವಕಪ್‌ನಲ್ಲಿದ್ದ ಆಟಗಾರರನ್ನೇ ಹೊಂದಿದ್ದು, ಈಗ ಹೆಚ್ಚು ಅನುಭವದೊಂದಿಗೆ ಬಲಿಷ್ಠವಾಗಿದೆ. ಆದರೆ ಬೌಲಿಂಗ್ ವಿಭಾಗವೇ ಸದ್ಯದ ದೊಡ್ಡ ಚಿಂತೆಯಾಗಿದೆ. “ನಮ್ಮ ಬೌಲಿಂಗ್ ದಾಳಿಯು ವಿಶ್ವಕಪ್ ಉದ್ದಕ್ಕೂ ಬಲಿಷ್ಠವಾಗಿ ಮತ್ತು ಫಿಟ್ ಆಗಿ ಉಳಿದರೆ, ಖಂಡಿತ ಭಾರತ ತಂಡ ಅತ್ಯಂತ ಸುಲಭವಾಗಿ ವಿಶ್ವಕಪ್ ಗೆಲ್ಲಬಹುದು” ಎಂದು ತಿಳಿಸಿದ್ದಾರೆ.

ಜಸ್ಪ್ರಿತ್ ಬುಮ್ರಾ ಮೇಲೆ ದೊಡ್ಡ ಜವಾಬ್ದಾರಿ

ನಮ್ಮ ವೇಗಿಗಳ ಪೈಕಿ ಜಸ್ಪ್ರಿತ್ ಬುಮ್ರಾ ಸದ್ಯ ಜಗತ್ತಿನ ಅತ್ಯುತ್ತಮ ಬೌಲರ್ ಆಗಿದ್ದು, ಅವರ ಮೇಲೆಯೇ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಇದೆ ಎಂದು ಸೆಹ್ವಾಗ್ ಹೇಳಿದ್ದಾರೆ. ವಿಶ್ವಕಪ್‌ಗೆ ಕೇವಲ ಒಂದು ವರ್ಷ ಬಾಕಿ ಇರುವುದರಿಂದ ಬುಮ್ರಾ ಅವರಿಗೆ ಸರಣಿಗಳಿಂದ ನಿಯಮಿತವಾಗಿ ವಿಶ್ರಾಂತಿ ನೀಡಿ ಅವರ ಕೆಲಸದ ಹೊರೆಯನ್ನು (Workload) ಮ್ಯಾನೇಜ್ ಮಾಡಲಾಗುತ್ತಿದೆ.

ಭರವಸೆ ಮೂಡಿಸದ ಇತರೆ ಬೌಲರ್

ದಕ್ಷಿಣ ಆಫ್ರಿಕಾದ ಪಿಚ್‌ಗಳು ಆರಂಭದಲ್ಲಿ ಹೊಸದಾಗಿರುವುದರಿಂದ ವೇಗದ ಬೌಲಿಂಗ್ ಅಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತೀಚಿನ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬುಮ್ರಾ ಇಲ್ಲದ ಕಾರಣ ಭಾರತ ತಂಡದ ಬೌಲರ್‌ಗಳು 295, 405 ಮತ್ತು 351 ರನ್‌ಗಳ ಬೃಹತ್ ಮೊತ್ತವನ್ನು ಬಿಟ್ಟುಕೊಟ್ಟು ವೈಫಲ್ಯ ಅನುಭವಿಸಿದ್ದರು. ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಬ್ಯಾಕಪ್ ಬೌಲರ್‌ಗಳು ಹೆಚ್ಚಿನ ಭರವಸೆ ಮೂಡಿಸುತ್ತಿಲ್ಲ. ಹೀಗಾಗಿ ಭಾರತ ತಂಡ ಎತ್ತರದ ವೇಗಿ ಗುರ್ನೂರ್ ಬ್ರಾರ್ ಅವರನ್ನು ಸಿದ್ಧಪಡಿಸುತ್ತಿದೆ ಮತ್ತು ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ತಂಡಕ್ಕೆ ಕರೆತರುವ ಆಲೋಚನೆಯಲ್ಲಿದೆ.

15 ವರ್ಷದ ವೈಭವ್ ಸೂರ್ಯವಂಶಿಯನ್ನ ತಮಗೆ ಹೋಲಿಸಿದ ಸೆಹ್ವಾಗ್

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ಸೆಹ್ವಾಗ್ ತಮ್ಮ ಆಟಕ್ಕೆ ಹೋಲಿಸಿದ್ದಾರೆ. “ಸೂರ್ಯವಂಶಿ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ಮುಗಿಬೀಳುವ ಅವರ ಆಲೋಚನೆ ನನ್ನ ಶೈಲಿಯನ್ನೇ ಹೋಲುತ್ತದೆ. ಈಗ ಅವರಿಗೆ ಭಾರತ ತಂಡದಲ್ಲಿ ಯಾವಾಗ ಅವಕಾಶ ಸಿಗುತ್ತದೆ ಮತ್ತು ಅವರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದಷ್ಟೇ ಮುಖ್ಯ” ಎಂದು ಸೆಹ್ವಾಗ್ ಹೇಳಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿ ಇರುವುದರಿಂದ ಸೂರ್ಯವಂಶಿ ಮೊದಲ ಎರಡು ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಗಿ ಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed