Team India: 4 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಭುವನೇಶ್ವರ್ ಕುಮಾರ್ ರಿಟರ್ನ್! ನ್ಯೂಜಿಲ್ಯಾಂಡ್ ಟಿ20 ಸರಣಿಗೆ ಹೀಗಿದೆ ಭಾರತ ತಂಡ | ಕ್ರೀಡಾ ಸುದ್ದಿ | ACTPnews

ಭುವನೇಶ್ವರ್ ಕುಮಾರ್ (Photo: AP)


Last Updated:

ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮುಂಬರಲಿರುವ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗಾಗಿ ಪ್ರಕಟಿಸಲಾದ 16 ಸದಸ್ಯರ ಬಲಿಷ್ಠ ಭಾರತ ತಂಡದಲ್ಲಿ ಸ್ವಿಂಗ್ ಕಿಂಗ್​ಗೆ ಸ್ಥಾನ ನೀಡಲಾಗಿದೆ.

 ಭುವನೇಶ್ವರ್ ಕುಮಾರ್ (Photo: AP)
ಭುವನೇಶ್ವರ್ ಕುಮಾರ್ (Photo: AP)

ಅಂತೂ ಇಂತೂ ಟೀಮ್ ಇಂಡಿಯಾ ಹಾಗೂ ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಬರೋಬ್ಬರಿ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ ಮತ್ತೆ ಟೀಮ್ ಇಂಡಿಯಾಗೆ ಭರ್ಜರಿಯಾಗಿ ಪುನರಾಗಮನ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮುಂಬರಲಿರುವ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗಾಗಿ ಪ್ರಕಟಿಸಲಾದ 16 ಸದಸ್ಯರ ಬಲಿಷ್ಠ ಭಾರತ ತಂಡದಲ್ಲಿ ಸ್ವಿಂಗ್ ಕಿಂಗ್​ಗೆ ಸ್ಥಾನ ನೀಡಲಾಗಿದೆ. ಐಪಿಎಲ್ 2026ರ ಸೀಸನ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮಿಂಚಿದ್ದ ಭುವನೇಶ್ವರ್ ಕುಮಾರ್, ಭಾರತದ ಪರ ತಮ್ಮ ಕೊನೆಯ ಪಂದ್ಯವನ್ನು ನವೆಂಬರ್ 2022 ರಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು.

ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದರೂ, ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರಿಗೆ ತಂಡದಿಂದ ಕೋಕ್ ನೀಡಲಾಗಿದೆ. ಇತ್ತೀಚೆಗೆ ಶನಿವಾರ (ಅಕ್ಟೋಬರ್ 3) ರಂದು ನಿಶ್ಶಿನ್‌ನಲ್ಲಿ ನಡೆದಿದ್ದ 2026ರ ಏಷ್ಯನ್ ಗೇಮ್ಸ್‌ನ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಬಿಷ್ಣೋಯ್ ಆಡಿದ್ದರಾದರೂ, ಚಿನ್ನದ ಪದಕದ ಆ ಪಂದ್ಯದಲ್ಲಿ ಒಂದೂ ವಿಕೆಟ್ ಪಡೆಯಲು ವಿಫಲರಾಗಿದ್ದರು. ಅವರ ಬದಲಿಗೆ ವರುಣ್ ಚಕ್ರವರ್ತಿ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಉಂಟಾಗಿದ್ದ ಗಾಯದ ಸಮಸ್ಯೆಯಿಂದಾಗಿ ವರುಣ್ ಚಕ್ರವರ್ತಿ ಅವರು ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದರು.

ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ

• ಅಕ್ಟೋಬರ್ 22 (ಗುರುವಾರ): 1ನೇ T20I – ಕ್ರೈಸ್ಟ್‌ಚರ್ಚ್ (ಮಧ್ಯಾಹ್ನ 12:30)

• ಅಕ್ಟೋಬರ್ 24 (ಶನಿವಾರ): 2ನೇ T20I – ಕ್ರೈಸ್ಟ್‌ಚರ್ಚ್ (ಮಧ್ಯಾಹ್ನ 12:30)

• ಅಕ್ಟೋಬರ್ 27 (ಮಂಗಳವಾರ): 3ನೇ T20I – ವೆಲ್ಲಿಂಗ್ಟನ್ (ಮಧ್ಯಾಹ್ನ 12:30)

• ಅಕ್ಟೋಬರ್ 30 (ಶುಕ್ರವಾರ): 4ನೇ T20I – ಆಕ್ಲೆಂಡ್ (ಮಧ್ಯಾಹ್ನ 12:30)

• ನವೆಂಬರ್ 1 (ಭಾನುವಾರ): 5ನೇ T20I – ಹ್ಯಾಮಿಲ್ಟನ್ (ಮಧ್ಯಾಹ್ನ 12:30)

ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಆಡುತ್ತಿರುವ ಭಾರತ ತಂಡದ 14 ಆಟಗಾರರು ಈ ನ್ಯೂಜಿಲೆಂಡ್ ಪ್ರವಾಸದ ತಂಡದಲ್ಲೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೆ ವೆಸ್ಟ್ ಇಂಡೀಸ್ ಸರಣಿಯಂತೆ ಈ ಸರಣಿಗೂ ವಿಶ್ರಾಂತಿ ನೀಡಲಾಗಿದ್ದು, ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇವರಿಬ್ಬರಿಗೆ ಟೆಸ್ಟ್ ತಂಡಕ್ಕಾಗಿ ವಿಶ್ರಾಂತಿ ನೀಡಲಾಗಿದೆ.

ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತದ ಸಂಪೂರ್ಣ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅರ್ಶ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed