Last Updated:
ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೊಸ ಚಿಕಿತ್ಸಾ ವಿಧಾನಗಳನ್ನು ಬಳಸುವ ಮೂಲಕ ಕಣ್ಣಿನ ಪೊರೆ ಸಮಸ್ಯೆಯನ್ನು ಪರಿಶೀಲಿಸಬಹುದು. ಆದಷ್ಟು ಬೇಗ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದ್ರೆ ಕಣ್ಣಿನ ಪೊರೆ ಸಮಸ್ಯೆಯನ್ನು ಪತ್ತೆ ಹಚ್ಚುವುದು ಹೇಗೆ? ಇದರ ಗುಣಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರಗಳೇನು ಎಂಬುವುದನ್ನು ತಿಳಿಯೋಣ.
ವಯಸ್ಸಾಗುತ್ತಿದ್ದಂತೆ ಕೆಲವು ಕಾಯಿಲೆಗಳು (Disease) ಬರುವುದು ಸಹಜ. ಆದರೆ ಎಲ್ಲರಿಗೂ ಒಂದೇ ರೀತಿಯ ಸಮಸ್ಯೆಗಳೇ ಬರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವೃದ್ಧರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಕಣ್ಣಿನ ಪೊರೆ (Cataracts). ಕುರುಡುತನಕ್ಕೆ (Blindness) ಸುಮಾರು ಶೇಕಡ 66ರಷ್ಟು ಈ ಕಣ್ಣಿನ ಪೊರೆ ಸಮಸ್ಯೆಯೇ ಕಾರಣವಾಗಿದೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಈ ಕಣ್ಣಿನ ಪೊರೆಯು ವಯಸ್ಸಾದವರಲ್ಲಿ ರೆಟಿನಾದ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಇದು ಪರೋಕ್ಷವಾಗಿ ಮೆದುಳಿನ (Brain) ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆಮೊರಿ ಮತ್ತು ಗ್ರಹಿಕೆಯನ್ನು ದುರ್ಬಲಗೊಳಿಸುತ್ತದೆ.
ಆದರೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೊಸ ಚಿಕಿತ್ಸಾ ವಿಧಾನಗಳನ್ನು ಬಳಸುವ ಮೂಲಕ ಕಣ್ಣಿನ ಪೊರೆ ಸಮಸ್ಯೆಯನ್ನು ಪರಿಶೀಲಿಸಬಹುದು. ಆದಷ್ಟು ಬೇಗ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದ್ರೆ ಕಣ್ಣಿನ ಪೊರೆ ಸಮಸ್ಯೆಯನ್ನು ಪತ್ತೆ ಹಚ್ಚುವುದು ಹೇಗೆ? ಇದರ ಗುಣಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರಗಳೇನು ಎಂಬುವುದನ್ನು ತಿಳಿಯೋಣ.
ಸಾಂದರ್ಭಿಕ ಚಿತ್ರ
ಕಣ್ಣಿನ ಪೊರೆಗಳಿಗೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಆಗಾಗ್ಗೆ ಬದಲಾಯಿಸಬೇಕಾಗಬಹುದು. ಕಣ್ಣಿನ ಪೊರೆ ಸಮಸ್ಯೆ ಇರುವವರಿಗೆ ರಾತ್ರಿ ಹೊತ್ತು ವಾಹನ ಚಲಾಯಿಸಲು ಸಹ ತೊಂದರೆಯಾಗುತ್ತದೆ. ಬೀದಿ ದೀಪಗಳು ಅಥವಾ ಹೆಡ್ಲೈಟ್ಗಳಿದ್ದರೂ ವಾಹನ ಚಲಾಯಿಸುವಾಗ ಕುರುಡಾಗಿ ಕಾಣುತ್ತವೆ. ಅದರಲ್ಲೂ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವ ಕೆಲವರಿಗೆ ದೃಷ್ಟಿ ಮಂದವಾಗಬಹುದು. ಅವರ ಕಣ್ಣುಗಳು ಮಸುಕಾಗುತ್ತವೆ ಮತ್ತು ಮಂಜಾಗಿ ಕಾಣಿಸುತ್ತದೆ. ದೂರದಲ್ಲಿರುವ ವಸ್ತುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಸಾಮಾನ್ಯವಾಗಿ, ಈ ಸಮಸ್ಯೆಯು ಮೊದಲು ಒಂದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಕಾಲಾನಂತರದಲ್ಲಿ ಇನ್ನೊಂದು ಕಣ್ಣಿನ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಈ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಹೊತ್ತು ಓಡಾಡಲು ಪರದಾಡುತ್ತಿರುತ್ತದೆ. ಬೀದಿ ದೀಪಗಳು ಸರಿಯಾಗಿ ಕಾಣುವುದಿಲ್ಲ. ಒಂದು ರೀತಿ ಎಲ್ಲವೂ ಅಸ್ಪಷ್ಟವಾಗಿ ಕಾಣುವುದರಿಂದ ಅಪಘಾತಗಳು ಉಂಟಾಗುತ್ತದೆ. ಕಣ್ಣಿನ ಪೊರೆಗಳಿಂದ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಸಹ ಕುಗ್ಗುತ್ತದೆ. ಕೆಲವೊಮ್ಮೆ ಯಾವುದೇ ಬಣ್ಣದ ವಸ್ತುಗಳನ್ನು ನೋಡಿದರೂ ಸಹ ಅವು ಹೆಚ್ಚಾಗಿ ಹಳದಿಯಾಗಿಯೇ ಕಾಣುತ್ತದೆ. ಅಲ್ಲದೇ ಯಾವುದೇ ಬಣ್ಣದ ವಸ್ತುಗಳನ್ನು ಖರೀದಿಸುವಾಗಲೂ ತೊಂದರೆ ಉಂಟಾಗಬಹುದು.
ಸಾಂದರ್ಭಿಕ ಚಿತ್ರ
ಕಣ್ಣಿನ ಪೊರೆ ಸಮಸ್ಯೆ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸರ್ಕಾರಗಳು ಮತ್ತು ವಿವಿಧ ಎನ್ಜಿಒಗಳು ಸ್ವಯಂಪ್ರೇರಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ವಿಶೇಷವಾಗಿ 55 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಆಗಾಗ ನಡೆಸುತ್ತಿರುದೆ. ಇವುಗಳಲ್ಲಿ ಭಾಗಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಭಾರತದಲ್ಲಿ ಸಾಕಷ್ಟು ಮಂದಿ ವಯಸ್ಸಾದವರು ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಹಿಂಜರಿಯುತ್ತಾರೆ. ಆದರೆ, ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ, ಇದು ಮತ್ತೊಂದು ಕಣ್ಣಿಗೂ ಸಮಸ್ಯೆಯನ್ನು ಉಂಟು ಮಾಡಬಹುದು. ಇದರ ಪರಿಣಾಮದಿಂದ ಗ್ಲುಕೋಮಾ ಅಥವಾ ದೃಷ್ಟಿ ನಷ್ಟವಾಗಿದೆ.
ನೀವು ಕಣ್ಣಿನ ಪೊರೆಯ ಸಮಸ್ಯೆಯನ್ನು ಹೊಂದಿದ್ದೀರಾ ಎಂದು ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸಬೇಕು. ಈ ಸಮಸ್ಯೆಯನ್ನು ದೃಢೀಕರಿಸಲು ಸ್ಲಿಟ್-ಲ್ಯಾಂಪ್ ಪರೀಕ್ಷೆ ಮತ್ತು ವಿಸ್ತರಿಸಿದ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಈ ಸಮಸ್ಯೆ ಪರಿಹಾರಕ್ಕೆ ಯಾವುದೇ ನಾನ್ಸರ್ಜಿಕಲ್ ವಿಧಾನಗಳು ಲಭ್ಯವಿಲ್ಲ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಇದನ್ನು ಭಾಗಶಃ ನಿವಾರಿಸಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
Nov 21, 2024 10:38 AM IST













