ರತನ್ ಟಾಟಾ
ಇಲ್ಲಿ ನಾವು ಮಾತಾಡ್ತಿರೋದು ಬೇರೆ ಯಾರು ಅಲ್ಲ, ʻಬಿಸ್ಲೇರಿ’ ನೀರು ಬಾಟಲಿ ಕಂಪನಿಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಬಗ್ಗೆ. ಪ್ರಸ್ತುತ ರಮೇಶ್ ಮತ್ತು ಜೈನಾಬ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಐಕಾನಿಕ್ ಬಾಟಲ್ ವಾಟರ್ ಬ್ರ್ಯಾಂಡ್ ‘ಬಿಸ್ಲೇರಿ’ ಉಪಾಧ್ಯಕ್ಷರಾಗಿದ್ದಾರೆ. ಬ್ರ್ಯಾಂಡ್‌ನ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಜಯಂತಿ ಅತಿದೊಡ್ಡ ಕೊಡುಗೆ ನೀಡುತ್ತಿದ್ದಾರೆ.
ಟಾಟಾ ಮತ್ತು ಬಿಸ್ಲೇರಿ ನಡುವಿನ ಡೀಲ್ ಮುರಿದು ಬಿದ್ದ ನಂತರ ಜಯಂತಿಯವರೇ ಕಂಪನಿಯ ಹೊಣೆ ಹೊತ್ತುಕೊಂಡರು. ಅವರ ತಂದೆ ಕೂಡ ಯಾರಿಗೂ ಮಾರುತ್ತಿಲ್ಲ, ನುರಿತ ತಂಡದೊಂದಿಗೆ ನಮ್ಮ ಮಗಳೇ ಕಂಪನಿ ಮುನ್ನೆಡೆಸುತ್ತಾಳೆ ಎಂದು ಹೇಳಿಕೆ ನೀಡಿದ್ದರು.
ಜಯಂತಿ ಒಲವು ಫ್ಯಾಷನ್, ಪ್ರವಾಸ ಇದರ ಮೇಲೆ ಇದ್ದರೂ, ಮೊದಲಿಗೆ ಅಂದರೆ 24ನೇ ವಯಸ್ಸಿನಲ್ಲಿ, ಜಯಂತಿ ಅಪ್ಪನ ಕಂಪನಿ ಬಿಸ್ಲೇರಿಗೆ ಸೇರಿ, ಕುಟುಂಬ ವ್ಯವಹಾರದಲ್ಲಿ ತಮ್ಮ ಕೆರಿಯರ್ ಆರಂಭಿಸಿದರು. ತಂದೆ ರಮೇಶ್ ಚೌಹಾಣ್, ಅಡಿಯಲ್ಲಿ ಉದ್ಯಮ, ವ್ಯವಹಾರದ ಹಲವು ವಿಷಯಗಳನ್ನು ಕಲಿತುಕೊಂಡರು. ಆರಂಭದಲ್ಲಿ, ಅವರು ದೆಹಲಿ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಜಯಂತಿ ಅವರು ದೆಹಲಿ, ಮುಂಬೈ ಮತ್ತು ನ್ಯೂಯಾರ್ಕ್ ನಗರದಲ್ಲಿ ಶಿಕ್ಷಣ ಪಡೆದಿದ್ದಾರೆ. ಫ್ಯಾಶನ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು, ಲಾಸ್ ಏಂಜಲೀಸ್‌ನಲ್ಲಿರುವ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಮರ್ಚಂಡೈಸಿಂಗ್ (ಎಫ್‌ಐಡಿಎಂ) ಗೆ ಹಾಜರಾಗಿದ್ದರು, ಇಲ್ಲಿ ಇವರು ಉತ್ಪನ್ನ ಅಭಿವೃದ್ಧಿಯನ್ನು ಅಧ್ಯಯನ ಮಾಡಿದರು.
ಜಯಂತಿ ಚೌಹಾಣ್
ಅವರು ಇಸ್ಟಿಟುಟೊ ಮರಂಗೋನಿ ಮಿಲಾನೊದಲ್ಲಿ ಫ್ಯಾಶನ್ ಸ್ಟೈಲಿಂಗ್‌ನಲ್ಲಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಲಂಡನ್ ಕಾಲೇಜ್ ಆಫ್ ಫ್ಯಾಶನ್‌ನಿಂದ ಫ್ಯಾಶನ್ ಸ್ಟೈಲಿಂಗ್ ಮತ್ತು ಫೋಟೋಗ್ರಫಿಯಲ್ಲಿ ಡಿಪ್ಲೊಮಾಗಳನ್ನು ಪಡೆದರು. ಜೊತೆಗೆ, ಜಯಂತಿ ಅವರು ಲಂಡನ್ ವಿಶ್ವವಿದ್ಯಾಲಯದ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್ (SOAS) ನಿಂದ ಅರೇಬಿಕ್ ಪದವಿಯನ್ನು ಹೊಂದಿದ್ದಾರೆ. ತನ್ನ ವೃತ್ತಿಜೀವನದ ಆರಂಭಿಕ ಅವಧಿಯಲ್ಲಿ, ಜಯಂತಿ ಹಲವಾರು ಹೆಸರಾಂತ ಫ್ಯಾಷನ್ ಬ್ರ್ಯಾಂಡ್‌ಗಳೊಂದಿಗೆ ತರಬೇತಿ ಹೊಂದುವ ಮೂಲಕ ಮೌಲ್ಯಯುತವಾದ ಉದ್ಯಮದ ಅನುಭವ ಪಡೆದಿದ್ದಾರೆ.
ಬಿಸ್ಲೇರಿಯ ಕಾರ್ಯಾಚರಣೆಗಳನ್ನು ವಿಶೇಷವಾಗಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗಗಳಲ್ಲಿ ಪರಿವರ್ತಿಸುವಲ್ಲಿ ಅವರ ಪ್ರಯತ್ನಗಳು ಗಮನಾರ್ಹವಾಗಿವೆ.ಜಾಹೀರಾತು, ಸಂವಹನ ತಂತ್ರಗಳು ಮತ್ತು ಬ್ರಾಂಡ್ ಸ್ಥಾನೀಕರಣದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಯಂತಿ ಅವರ ನೇತೃತ್ವದಲ್ಲಿ, ಬಿಸ್ಲೇರಿ ತನ್ನ ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸಿದೆ. ಬಿಸ್ಲೆರಿ ಮಿನರಲ್ ವಾಟರ್, ವೇದಿಕಾ ನ್ಯಾಚುರಲ್ ಮಿನರಲ್ ವಾಟರ್, ಫಿಜ್ಜಿ ಫ್ರೂಟ್ ಡ್ರಿಂಕ್ಸ್, ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್, ಹೊಸ ಉತ್ಪನ್ನ ಅಭಿವೃದ್ಧಿ ಸೇರಿದಂತೆ ಹಲವಾರು ಉತ್ಪನ್ನಗಳ ಕಾರ್ಯಾಚರಣೆಯನ್ನು ಸುವ್ಯವಸ್ಥಿತಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಮೇಲೆ ಹೇಳಿದಂತೆ ಇವರ ತಂದೆ ರಮೇಶ್ ಚೌಹಾಣ್ ಆರಂಭದಲ್ಲಿ ಬಿಸ್ಲೆರಿಯನ್ನು ಟಾಟಾ ಗ್ರೂಪ್‌ಗೆ ಅಂದಾಜು 7,000 ಕೋಟಿ ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ಆದ್ರೆ ನಂತರ ಈ ಒಪ್ಪಂದವನ್ನು ನಂತರ ಜಯಂತಿ ಅವರು ರದ್ದುಗೊಳಿಸಿದರು, ಅವರು ಕುಟುಂಬವು ವರ್ಷಗಳಿಂದ ನಿರ್ಮಿಸಿದ ಬ್ರಾಂಡ್‌ನ ಮಾಲೀಕತ್ವವನ್ನು ಉಳಿಸಿಕೊಳ್ಳಲು ನಿರ್ಧರಿಸಿದರು. ಈಗ ಕಂಪನಿಯನ್ನು ಬಹು ಎತ್ತರಕ್ಕೆ ಕೊಂಡೊಯ್ದ ಇವರು 2,300 ಕೋಟಿ ರೂಪಾಯಿ ಮೌಲ್ಯದ ಬ್ರ್ಯಾಂಡ್ ಅನ್ನು ಮುನ್ನೆಡೆಸುತ್ತಿದ್ದಾರೆ.












