Last Updated:
Vijay: ಮಗ ನಿರ್ದೇಶಿಸಿದ ಮೊದಲ ಸಿನಿಮಾ ಚಿತ್ರಮಂದಿರಲ್ಲಿ ರಿಲೀಸ್ ಆಗಿದೆ. ಮಗನಿಗಾಗಿ ಒಂದು ಟ್ವೀಟ್ ಕೂಡಾ ಮಾಡಿಲ್ವಾ ಸಿಎಂ ವಿಜಯ್? ಉಪಚುನಾವಣೆಯಲ್ಲಿ ದಳಪತಿ ಬ್ಯುಸಿ?
ತಮಿಳುನಾಡು ಸಿಎಂ ವಿಜಯ್ (Tamil Nadu CM Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಅವರ ಮೊದಲ ನಿರ್ದೇಶನದ ಸಿನಿಮಾ ಸಿಗ್ಮಾ (Sigma Release) ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ವೇಳೆ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ವಿಜಯ್ ಅವರ ಪತ್ನಿ ಸಂಗೀತಾ (Sangeetha) ಹಾಗೂ ಮಗಳು ದಿವ್ಯಾ ಲಂಡನ್ನಿಂದ ಚೆನ್ನೈಗೆ (Chennai) ಬಂದಿಳಿದಿದ್ದಾರೆ. ಕಮಲಾ ಥಿಯೇಟರ್ನಲ್ಲಿ (Kamala Theater) ಚಿತ್ರತಂಡದ ಜೊತೆ ಅವರು ಮೂವಿ ನೋಡುವ ದೃಶ್ಯ ವೈರಲ್ ಆಗಿದೆ.
ಜೇಸನ್ ಮೊದಲ ನಿರ್ದೇಶನದ ಸಮಯದಲ್ಲಿ ಕುಟುಂಬದಿಂದ ಬೆಂಬಲ ಸಿಕ್ಕಿದ್ದು ಆದರೆ ಸಿಎಂ ಹಾಗೂ ತಮಿಳಿನ ಸೂಪರ್ಸ್ಟಾರ್ ನಟ ವಿಜಯ್ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕನಿಷ್ಠ ಒಂದು ಟ್ವೀಟ್ ಆಗಲಿ, ಪೋಸ್ಟ್ ಆಗಲಿ ಹಾಕಿಲ್ಲ.
ಜೇಸನ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು ವಿಜಯ್ ಅವರು ತಂದೆಯ ಸ್ಥಾನದಲ್ಲಿ ನಿಂತಾದರೂ ಒಂದು ಪೋಸ್ಟ್ ಹಾಕಬೇಕಾಗಿತ್ತು ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಿಜಯ್ ಅವರ ಸಹೋದರನನ್ನು ಬಿಟ್ಟು ಇತರ ಸಂಬಂಧಿಕರು ಕಾಣಿಸಕೊಳ್ಳಲಿಲ್ಲ.
ವಿಜಯ್ ಅವರ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಂತ ಅವರ ಪೋಷಕರು ಜೇಸನ್ ಸಂಜಯ್ ಸಿನಿಮಾ ರಿಲೀಸ್ ವೇಳೆ ಕಂಡು ಬರಲಿಲ್ಲ. ಅಷ್ಟೇ ಅಲ್ಲದೆ ವಿಜಯ್ ಕುಟುಂಬದ ಆಪ್ತರು ಯಾರೂ ಸಿಗ್ಮಾ ರಿಲೀಸ್ ವೇಳೆ ಕಾಣಿಸಲಿಲ್ಲ. ಆದರೆ ವಿಜಯ್ ಅವರ ಸಹೋದರ ಮಾತ್ರ ಅತ್ತಿಗೆ ಹಾಗೂ ಅಣ್ಣ ಮಗನಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿರುವ ದೃಶ್ಯ ಕಂಡು ಬಂದಿದೆ.
ಅಕ್ಟೋಬರ್ 6 ರಂದು ಧಾರಾಪುರಂ ಮತ್ತು ಮಧುರಾಂತಕಂ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದ್ರಾವಿಡ ಪ್ರಮುಖ ಪಕ್ಷಗಳ ವಿರುದ್ಧ ಬ್ಲಾಕ್ಬಸ್ಟರ್ ಚೊಚ್ಚಲ ಪ್ರವೇಶದ ನಂತರ ಟಿವಿಕೆಯ ಕ್ರೇಜ್ಗೆ ಇದು ದೊಡ್ಡ ಪರೀಕ್ಷೆ. ಸದ್ಯ ನಟ ವಿಜಯ್ ಅವರು ಅದರ ಕೆಲಸಗಳಲ್ಲಿಯೇ ಬ್ಯುಸಿಯಾಗಿದ್ದಾರೆ.
ಈ ಸ್ಥಾನಗಳ ಶಾಸಕರಾದ ಕೆ.ಎಂ. ಕುಮಾರವೇಲ್ ಮತ್ತು ಪಿ. ಸತ್ಯಭಾಮ ಅವರು ಎಐಎಡಿಎಂಕೆ ತೊರೆದು ತಮ್ಮ ವಿಧಾನಸಭಾ ಸ್ಥಾನಗಳನ್ನು ತ್ಯಜಿಸಿದ ನಂತರ ಉಪಚುನಾವಣೆಗಳು ಅನಿವಾರ್ಯವಾದವು. ಕುಮಾರವೇಲ್ ಮತ್ತು ಸತ್ಯಭಾಮ ಅವರು ವಿಜಯ್ ಅವರ ಪಕ್ಷವನ್ನು ಸೇರಿಕೊಂಡರು ಮತ್ತು ಅವರವರ ಸ್ಥಾನಗಳಿಂದ ಮರು ನಾಮನಿರ್ದೇಶನಗೊಂಡಿದ್ದಾರೆ. ಅಕ್ಟೋಬರ್ 9 ರಂದು ಮತಗಳ ಎಣಿಕೆ ನಡೆಯಲಿದೆ.
ಈ ಒಂದು ಸಂದರ್ಭದಲ್ಲಿ ವಿಜಯ್ ಅವರು ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಸದ್ಯ ಎಲ್ಲರ ಕುತೂಹಲ ಆ ಕಡೆಗಿದೆ. ಆದರೆ ವಿಜಯ್ ಅವರ ಪತ್ನಿ ಮಾತ್ರ ಲಂಡನ್ನಿಂದ ಬಂದು ಮಗನ ಜೀವನದ ಮಹತ್ವದ ಘಟ್ಟದಲ್ಲಿ ಜೊತೆಗೆ ನಿಂತಿದ್ದಾರೆ.














