ಬೆಂಗಳೂರಿನಲ್ಲಿ ಭಾನುವಾರ ಸೆಪ್ಟೆಂಬರ್-27 ರಂದು ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಆಗಿದೆ. ಇಲ್ಲಿಯ ನಂದಿ ಲಿಂಕ್ಸ್ ಗ್ರೌಂಡ್ ಅಲ್ಲಿ ಈ ಸಂಭ್ರಮ ನಡೆದಿದೆ.
ಅಂಜದ ಎದೆಯಲ್ಲಿ ನಂಜೇ ಇಲ್ಲ..
(ಚಿತ್ರ ಕೃಪೆ: ಕನ್ನಡ ಪಿಚ್ಚರ್ ವಿಡಿಯೋ)
ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಈ ಸಡಗರದಲ್ಲಿ ಭಾಗಿ ಆಗಿದ್ದರು. ಶಿವರಾಜ್ ಕುಮಾರ್, ಶೃತಿ, ಉಮಾಶ್ರೀ, ಶ್ರೀನಾಥ್ ಅಲ್ಲದೆ ಪರ ಭಾಷಾ ಕಲಾವಿದರಾದ ರೋಜಾ ಹಾಗೂ ಸುಹಾಸಿನಿ ಕೂಡ ಇಲ್ಲಿಗೆ ಆಗಮಿಸಿದ್ದರು.
ಅಮೃತ ಮಹೋತ್ಸವ ಮಾಡಿರೋ ವೀರಕಪುತ್ರ ಶ್ರೀನಿವಾಸ್ ಅವರಿಗೆ ಒಂದು ಮಾತು ಹೇಳಿದರು. ನಾವೆಲ್ಲ ಸ್ನೇಹಲೋಕದಲ್ಲಿ ಆಡಿದ್ದೇವೆ. ಈ ಕಾರಣಕ್ಕೆ ನಾವೆಲ್ಲ ಕಲಾವಿದರು ಒಂದು ಕಡೆಗೆ ಸೇರುತ್ತಿದ್ದೇವು.
ಈ ಸ್ನೇಹಲೋಕ ಮತ್ತೆ ಶುರು ಮಾಡಿ, ಮತ್ತೊಮ್ಮೆ ನಾವೆಲ್ಲ ಆಡುತ್ತೇವೆ ಅಂತಲೂ ಹೇಳಿದರು. ಈ ಒಂದು ವೇದಿಕೆಯಲ್ಲಿ ದುನಿಯಾ ವಿಜಯ್ ಹಾಗೂ ನವೀನ್ ಕೃಷ್ಣ ಅಷ್ಟೆ ಖುಷಿಯಲ್ಲಿಯೇ ನಾಗರಹಾವು ಚಿತ್ರದ ಹಾವಿನ ದ್ವೇಷ ಹಾಡಿ ಖುಷಿಪಟ್ಟರು.
ಸ್ನೇಹಲೋಕ ಶುರು ಮಾಡಿ ಎಂದ ಸಲಗ
(ಚಿತ್ರ ಕೃಪೆ: ಕನ್ನಡ ಪಿಚ್ಚರ್ ವಿಡಿಯೋ)
ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ದೊಡ್ಡಮಟ್ಟದಲ್ಲಿಯೇ ಇತ್ತು. ಅರ್ಧ ಕಿಲೋ ಮೀಟರ್ ಉದ್ದದ ಧ್ವಜವನ್ನ ಹಿಡಿದು ಅಭಿಮಾನಿಗಳು ಸಾಗಿದರು.
ಈ ಮೆರವಣಿಗೆಯ ಬಳಿಕ ಬೆಳಗ್ಗೆ 11 ಗಂಟೆ ಹೊತ್ತಿಗೆ ರಾಜೇಶ್ ಕೃಷ್ಣ ನೇತೃತ್ವದಲ್ಲಿ ಗಾನ ಗೌರವ ಸಲ್ಲಿಸಲಾಯಿತು. ಹೆಸರಾಂತ ಗಾಯಕರು ಇಲ್ಲಿ ಬಂದು ವಿಷ್ಣುವರ್ಧನ್ ಅವರಿಗೆ ಗಾನ ಗೌರವ ಸಲ್ಲಿಸಿದರು.
ಉಮಾಶ್ರೀ ಅವರು ವಿಷ್ಣುವರ್ಧನ್ ಅವರ ಜೊತೆಗಿನ ಕೆಲಸ ಅನುಭವ ಹಂಚಿಕೊಂಡಿದ್ದಾರೆ. ನನ್ನ ಅಭಿನಯವನ್ನ ಕಂಡು ತುಂಬಾನೆ ಖುಷಿಪಟ್ಟಿದ್ದರು. ಫೋನ್ ಮಾಡಿ ಕೂಡ ಹೇಳಿದ್ದರು.
ಉಮಾಶ್ರೀ ಅವರ ಅಭಿನಯಕ್ಕೆ ‘Hats Off’ ಅಂತಲೇ ವಿಷ್ಣುವರ್ಧನ್ ಅವರು ಪೇಪರ್ಗೂ ಹೇಳಿದ್ದರು. ಆ ಪೇಪರ್ ಕಟಿಂಗ್ ಇನ್ನೂ ಇದೆ ಅಂತಲೂ ಹೇಳಿಕೊಂಡರು.
ವಿಷ್ಣುವರ್ಧನ್ ಅವರ 150 ನೇ ಚಿತ್ರದಲ್ಲಿ ನಾನು ನಟಿಸಿದ್ದೇನೆ. ಇವರ ಜೊತೆಗೆ ನಟಿಸಿರೋ ನಾನೇ ಪುಣ್ಯವಂತೆ ಅಂತಲೇ ನಟಿ ಶೃತಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.













