ಹಾಲಿ ಚಾಂಪಿಯನ್ ಆರ್ಸಿಬಿ 2027ರ ಹರಾಜಿಗೂ ಮುನ್ನ ಆಸ್ಟ್ರೇಲಿಯಾದ ದೈತ್ಯ ಆಲ್ ರೌಂಡರ್ ಗ್ರೇಸ್ ಹ್ಯಾರಿಸ್ ಅವರನ್ನು ತನ್ನ ತಂಡದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆರ್ಸಿಬಿ ಫ್ರಾಂಚೈಸಿಯು ಮುಂಬರುವ ಸೀಸನ್ನಲ್ಲಿ ಹೊಸ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮತ್ತು ಹರಾಜಿನ ಬಜೆಟ್ ಹೆಚ್ಚಿಸಿಕೊಳ್ಳಲು ಈ ಕಠಿಣ ನಿರ್ಧಾರವನ್ನು ಕೈಗೊಂಡಿದೆ.
ಗ್ರೇಸ್ ಹ್ಯಾರಿಸ್ ಅವರು ತಮ್ಮ ಬಿರುಸಿನ ಬ್ಯಾಟಿಂಗ್ ಮತ್ತು ಉಪಯುಕ್ತ ಆಫ್-ಸ್ಪಿನ್ ಬೌಲಿಂಗ್ಗೆ ಹೆಸರಾಗಿದ್ದರೂ, ಇತ್ತೀಚಿನ ಪಂದ್ಯಗಳಲ್ಲಿ ಅವರ ಫಾರ್ಮ್ನಲ್ಲಿ ಸ್ಥಿರತೆ ಇರಲಿಲ್ಲ. ಹೀಗಾಗಿ ಆರ್ಸಿಬಿ ವಿದೇಶಿ ಆಟಗಾರ್ತಿಯರ ಕೋಟಾದಲ್ಲಿ ಬದಲಾವಣೆ ತರಲು ಇವರನ್ನು ಬಿಡುಗಡೆ ಮಾಡಿದೆ. ಗ್ರೇಸ್ ಹ್ಯಾರಿಸ್ ಮಾತ್ರವಲ್ಲದೆ ಆರ್ಸಿಬಿ ತಂಡವು ಲಿನ್ಸೆ ಸ್ಮಿತ್, ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ದಯಾಲನ್ ಹೇಮಲತಾ ಮತ್ತು ಗೌತಮಿ ನಾಯ್ಕ್ ಅವರನ್ನು ಸಹ ತಂಡದಿಂದ ಮುಕ್ತಗೊಳಿಸಿದೆ.
ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ತನ್ನ ಯುವ ವಿಕೆಟ್ಕೀಪರ್-ಬ್ಯಾಟರ್ ಜಿ. ಕಮಲಿನಿ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಎಡಗೈ ಬ್ಯಾಟರ್ ಆಗಿರುವ ಕಮಲಿನಿ 2026ರ ಆವೃತ್ತಿಯಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ 5 ಪಂದ್ಯಗಳನ್ನು ಆಡಿ ಕೇವಲ 75 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ದರು. ಮುಂಬೈ ಇಂಡಿಯನ್ಸ್ ಹಿರಿಯ ಮತ್ತು ಯುವ ಆಟಗಾರ್ತಿಯರ ಸಮತೋಲನವನ್ನು ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಂಡಿದೆ. ಇನ್ನಿ ಆರ್ಸಿಬಿ ವಿಧ್ವಂಸಕ ಆಟ
ಮುಂಬೈ ಇಂಡಿಯನ್ಸ್ ತಂಡವು ಕಮಲಿನಿ ಅವರೊಂದಿಗೆ ಕ್ರಾಂತಿ ರೆಡ್ಡಿ, ಮಿಲ್ಲಿ ಇಲ್ಲಿಂಗ್ವರ್ತ್, ಪೂನಂ ಖೇಮ್ನಾರ್, ಸೈಕಾ ಇಶಾಕ್ ಮತ್ತು ತ್ರಿವೇಣಿ ವಸಿಷ್ಠ ಅವರನ್ನು ಸಹ ಬಿಡುಗಡೆ ಮಾಡಿದೆ.
ಉಳಿಸಿಕೊಂಡವರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಸಯಾಲಿ ಸತ್ಗರೆ, ಪ್ರತ್ಯೂಷಾ ಕುಮಾರ್.
ಬಿಡುಗಡೆಯಾದವರು: ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ದಯಾಲನ್ ಹೇಮಲತಾ, ಗೌತಮಿ ನಾಯ್ಕ್
ಉಳಿಸಿಕೊಂಡವರು : ಹರ್ಮನ್ಪ್ರೀತ್ ಕೌರ್ (ನಾಯಕಿ), ನಟಾಲಿ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಹ್ಯಾಲಿ ಮ್ಯಾಥ್ಯೂಸ್, ನಿಕೋಲಾ ಕ್ಯಾರಿ, ಶಬ್ನಿಮ್ ಇಸ್ಮಾಯಿಲ್, ಅಮನ್ಜೋತ್ ಕೌರ್, ಸಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ರಹಿಲಾ ಫಿರ್ದೌಸ್, ವೈಷ್ಣವಿ ಶರ್ಮಾ.
ಬಿಡುಗಡೆಯಾದವರು: ಜಿ. ಕಮಲಿನಿ, ಸೈಕಾ ಇಶಾಕ್, ತ್ರಿವೇಣಿ ವಸಿಷ್ಠ, ಮಿಲ್ಲಿ ಇಲ್ಲಿಂಗ್ವರ್ತ್, ಕ್ರಾಂತಿ ರೆಡ್ಡಿ, ಪೂನಂ ಖೇಮ್ನಾರ್
ಉಳಿಸಿಕೊಂಡವರು: ಜೆಮಿಮಾ ರೋಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಅನ್ನಾಬೆಲ್ ಸುದರ್ಲ್ಯಾಂಡ್, ಮರಿಜಾನ್ನೆ ಕಪ್, ಲಾರಾ ವೊಲ್ವಾರ್ಡ್, ಚಿನೆಲ್ಲೆ ಹೆನ್ರಿ, ಲೂಸಿ ಹ್ಯಾಮಿಲ್ಟನ್, ಮಿನ್ನು ಮಣಿ, ನಿಕಿ ಪ್ರಸಾದ್, ಶ್ರೀ ಚರಣಿ, ಮಮತಾ ಮಡಿವಾಳ, ನಂದಿನಿ ಶರ್ಮಾ, ದಿಯಾ ಯಾದವ್.
ಬಿಡುಗಡೆಯಾದವರು : ಸ್ನೇಹಾ ರಾಣಾ, ಲಿಜೆಲ್ಲೆ ಲೀ, ಅಲಾನಾ ಕಿಂಗ್, ತಾನಿಯಾ ಭಾಟಿಯಾ, ಪ್ರಗತಿ ಸಿಂಗ್, ಎಡ್ಲಾ ಸೃಜನಾ.
ಉಳಿಸಿಕೊಂಡವರು: ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಮೆಗ್ ಲ್ಯಾನಿಂಗ್, ಫೋಬೆ ಲಿಚ್ಫೀಲ್ಡ್, ತಾರಾ ನಾರ್ರಿಸ್, ಹರ್ಲೀನ್ ಡಿಯೋಲ್, ಶಿಖಾ ಪಾಂಡೆ, ಪ್ರತಿಭಾ ರಾವಲ್, ಕ್ರಾಂತಿ ಗೌಡ್, ಸಿಮ್ರಾನ್ ಶೇಖ್, ಶಿಪ್ರಾ ಗಿರಿ.
ಬಿಡುಗಡೆಯಾದವರು: ಆಶಾ ಶೋಭನಾ, ಡಿಯಾಂಡ್ರಾ ಡಾಟಿನ್, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ಆಮಿ ಜೋನ್ಸ್, ಕ್ಲೋಯ್ ಟ್ರಯಾನ್, ಚಾರ್ಲಿ ನಾಟ್, ಗಂಗಾಡಿ ತ್ರಿಶಾ, ಸುಮನ್ ಮೀನಾ
ಉಳಿಸಿಕೊಂಡವರು : ಬೆತ್ ಮೂನಿ, ಆಶ್ಲೀ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಡಿವೈನ್, ಕಿಮ್ ಗಾರ್ತ್, ರೇಣುಕಾ ಸಿಂಗ್, ಯಸ್ತಿಕಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್, ತನುಜಾ ಕನ್ವರ್, ಕಶ್ವಿ ಗೌತಮ್, ಕನಿಕಾ ಅಹುಜಾ, ಅನುಷ್ಕಾ ಶರ್ಮಾ, ಭಾರ್ತಿ ಫುಲ್ಮಾಲಿ, ಹ್ಯಾಪಿ ಕುಮಾರಿ, ಜಿಂಟಿಮಣಿ ಕಲಿತಾ.
ಬಿಡುಗಡೆಯಾದವರು: ಡ್ಯಾನಿ ವ್ಯಾಟ್-ಹೋಡ್ಜ್, ಆಯುಷಿ ಸೋನಿ, ತಿತಾಸ್ ಸಾಧು, ಶಿವಾನಿ ಸಿಂಗ್













