Shine Shetty: ‘ಮಿಥ್ಯ’ ನಿರ್ದೇಶಕನಿಗೆ ಒಲಿದ ರಾಷ್ಟ್ರ ಪ್ರಶಸ್ತಿ; ಖುಷಿಯಲ್ಲಿ ಎತ್ತಿ ಕುಣಿದಾಡಿದ ಶೈನ್ ಶೆಟ್ಟಿ! | | ACTPnews

Sumanth Bhat Shine Shetty Mithya Movie National Award Felicitation


ಮಿಥ್ಯ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

ಮಿಥ್ಯ ಚಿತ್ರಕ್ಕೆ ಮೂರು ಪ್ರಶಸ್ತಿ ಬಂದಿವೆ. ಮೊನ್ನೆ ಗುಜರಾತ್ ಅಲ್ಲಿ ನಡೆದ 72 ನೇ ಚಲನ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರಕ್ಕೆ ಮೂರು ವಿಭಾಗದಲ್ಲಿ ಅವಾರ್ಡ್ ಬಂದಿವೆ.

ಎತ್ತಿ ಕುಣಿದಾಡಿದ ಶೈನ್ ಶೆಟ್ಟಿ

(ಚಿತ್ರ ಕೃಪೆ: ಶೈನ್ ಶೆಟ್ಟಿ ವಿಡಿಯೊ ಇನ್​ಸ್ಟಾಗ್ರಾಮ್)

ಅತ್ಯುತ್ತಮ ಬಾಲ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಬಂದಿವೆ. ಈ ಮೂರು ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನ ಡೈರೆಕ್ಟರ್ ಸುಮಂತ್ ಭಟ್ ಪಡೆದು ಕೊಂಡಿದ್ದಾರೆ.

ಶೈನ್ ಶೆಟ್ಟಿ ಸಂಭ್ರಮ

ಮಿಥ್ಯ ಚಿತ್ರದ ಡೈರೆಕ್ಟರ್ ಸುಮಂತ್ ಭಟ್ ಅವರ ಮಿಥ್ಯ ಚಿತ್ರಕ್ಕೆ ಮೂರು ಪ್ರಶಸ್ತಿ ಬಂದಿವೆ. ಈ ಖುಷಿಯನ್ನ ಶೈನ್ ಶೆಟ್ಟಿ ಸೆಲೆಬ್ರೇಟ್ ಮಾಡಿದ್ದಾರೆ.”ನ್ಯಾಷನಲ್ ಅವಾರ್ಡ್ ಭಟ್ರಿಗೆ ಜೈ ಜೈ” ಅಂತಲೂ ಕೂಗಿ ಹೇಳಿದ್ದಾರೆ.

ದಿಗ್ಗಜರ ನಡುವೆ

ರಾಷ್ಟ್ರೀಯ ಪ್ರಶಸ್ತಿ ಪಡೆಯೋ ಕ್ಷಣ ಅದ್ಭುತವಾಗಿತ್ತು. ನಾನು ಕುಳಿತ ಮುಂದಿನ ಸಾಲಿನಲ್ಲಿ ದಿಗ್ಗಜರು ಕುಳಿತುಕೊಂಡಿದ್ದರು. ಅವರ ನಡುವೆ ಕುಳಿತುಕೊಳ್ಳುವುದೇ ಅತಿ ದೊಡ್ಡ ಹೆಮ್ಮೆಯ ವಿಷಯವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸುವ ಕ್ಷಣವು ಅದ್ಭುತವಾಗಿಯೇ ಇತ್ತು. ಅವರ ಎದುರು ಒಂದು ಅಡಿ ಅಂತರದಲ್ಲಿ ನಿಂತುಕೊಂಡು ಪ್ರಶಸ್ತಿ ಪಡೆಯುವುದು ಸದಾ ನೆನಪಿನಲ್ಲಿ ಉಳಿಯೋ ಕ್ಷಣವೇ ಆಗಿದೆ.

Sumanth Bhat Shine Shetty Mithya Movie National Award Felicitation

ರಾಷ್ಟ್ರ ಪ್ರಶಸ್ತ್ರಿ ಪಡೆದ ಮಿಥ್ಯ ಡೈರೆಕ್ಟರ್ ಸಂಭ್ರಮ

(ಚಿತ್ರ ಕೃಪೆ: ಶೈನ್ ಶೆಟ್ಟಿ ವಿಡಿಯೊ ಇನ್​ಸ್ಟಾಗ್ರಾಮ್)

ಸದ್ಯಕ್ಕೆ ಬೇರೆ ಏನು ಇಲ್ಲ..

ಸದ್ಯಕ್ಕೆ ನಾನು ಶಂಕರಾಭರಣ ಚಿತ್ರ ಬಿಟ್ಟು ಬೇರೆ ಏನೂ ಯೋಚನೆ ಮಾಡ್ತಾ ಇಲ್ಲ. ನಾನು ಮಾಡುವ ಚಿತ್ರಗಳು ಜನರಿಗೆ ಕನೆಕ್ಟ್ ಆಗ್ಬೇಕು. ಅದನ್ನ ಜನ ನೋಡ್ಬೇಕು.

ಮುಂದೇನೂ ಆ ರೀತಿಯ ಚಿತ್ರಗಳನ್ನ ಮಾಡೋಕೆ ಇಷ್ಟಪಡ್ತೀನಿ. ಈಗ ಸದ್ಯ ನಾನು ಶಂಕರಾಭರಣ ಚಿತ್ರದ ಕುರಿತು ಯೋಚನೆ ಮಾಡುತ್ತಿದ್ದೇನೆ ಅಂತಲೇ ಸುಮಂತ್ ಭಟ್ ಹೇಳಿಕೊಂಡಿದ್ದಾರೆ.

ಶಂಕರಾಭರಣ

ಸುಮಂತ್ ಭಟ್ ಅವರ ಶಂಕರಾಭರಣ ಚಿತ್ರ ಒಂದು ಹಾರರ್ ಕಾಮಿಡಿ ಸಿನಿಮಾ ಆಗಿದೆ. ಈ ಚಿತ್ರದ ಕತೆಯನ್ನ ನಾಯಕ ನಟ ಶೈನ್ ಶೆಟ್ಟಿ ಬರೆದಿದ್ದಾರೆ.

ಇವರು ಈ ಚಿತ್ರದ ನಾಯಕರೂ ಆಗಿದ್ದಾರೆ. ನಿರ್ಮಾಪಕರೂ ಆಗಿದ್ದಾರೆ. ಇವರ ಈ ಚಿತ್ರವನ್ನ ಸುಮಂತ್ ಭಟ್ ಡೈರೆಕ್ಷನ್ ಮಾಡಿದ್ದಾರೆ.

ನವೆಂಬರ್-20 ಕ್ಕೆ ರಿಲೀಸ್

ಶಂಕರಾಭರಣ ಚಿತ್ರ ನವೆಂಬರ್-20 ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ತಯಾರಿನೂ ಆಗುತ್ತಿದೆ. ಚಿತ್ರದ ಟೀಸರ್ ಕೂಡ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed