Last Updated:
ಇ-ಚಲನ್ಗಳ ವಸೂಲಾತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ದೇಶಾದ್ಯಂತ ಸದ್ಯ ಸುಮಾರು ₹45,000 ಕೋತ್ತುಟಿ ರೂಪಾಯಿ ಟ್ರಾಫಿಕ್ ದಂಡ ಬಾಕಿ ಉಳಿದಿದೆ ಮ ಅದರಲ್ಲಿ ಕೇವಲ ₹25,000 ಕೋಟಿ ಮಾತ್ರ ವಸೂಲಾಗಿದೆ ಎಂಬ ಆಘಾತಕಾರಿ ಮಾಹಿತಿ ಕೋರ್ಟ್ಗೆ ಲಭ್ಯವಾಗಿದೆ.
ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಪಾಲಿಸುವುದು ಮತ್ತು ಬಾಕಿ ಇರುವ ಟ್ರಾಫಿಕ್ ಚಲನ್ಗಳನ್ನು (Traffic Challans) ಸಕಾಲದಲ್ಲಿ ಪಾವತಿಸುವುದು ಇನ್ಮುಂದೆ ಅತ್ಯಂತ ಅನಿವಾರ್ಯವಾಗಲಿದೆ. ಏಕೆಂದರೆ, ದೇಶಾದ್ಯಂತ ಬಾಕಿ ಉಳಿದಿರುವ ಇ-ಚಲನ್ ದಂಡದ ವಸೂಲಾತಿಗಾಗಿ ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 28) ಅತ್ಯಂತ ಕಠಿಣವಾದ ಉಪಾಯವೊಂದನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ಮಾಡಿದೆ. ಸುಪ್ರೀಂ ನೀಡಿರುವ ಸಲಹೆ ಕೇಳಿದ್ರೆ ವಾಹನ ಚಾಲಕರಿಗೆ ಆಘಾತವನ್ನುಂಟು ಮಾಡಬಹುದು.
ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ದೇಶದ ಅತ್ಯುನ್ನತ ನ್ಯಾಯಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಚಾರ ದಂಡವನ್ನು ನೇರವಾಗಿ ವಿದ್ಯುತ್ ಬಿಲ್ಗಳಿಗೆ ಲಿಂಕ್ ಮಾಡಿ ಪಾವತಿಸದ ಇ-ಚಲನ್ಗಳಿಗೆ ಬಾಕಿ ಇರುವ ದಂಡವನ್ನು ವಸೂಲಿ ಮಾಡಬಹುದು ಎಂದು ಸೂಚಿಸಿದೆ.
ಜಸ್ಟಿಸ್ ಜೆ.ಬಿ. ಪಾರ್ದಿವಾಲಾ ಮತ್ತು ಜಸ್ಟಿಸ್ ಕೆ.ವಿ. ವಿಶ್ವನಾಥನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಬಾಕಿ ಇರುವ ಇ-ಚಲನ್ ದಂಡವನ್ನು ನೇರವಾಗಿ ವಾಹನ ಮಾಲೀಕರ ಮನೆ ವಿದ್ಯುತ್ ಬಿಲ್ಗೆ (Electricity Bill) ಲಿಂಕ್ ಮಾಡಬಹುದು ಎಂದು ಸಲಹೆ ನೀಡಿದೆ. ಅಂದರೆ, ನೀವು ಟ್ರಾಫಿಕ್ ಫೈನ್ ಕಟ್ಟದಿದ್ದರೆ ನಿಮ್ಮ ಮನೆಯ ಕರೆಂಟ್ ಕಟ್ ಆಗುವ ಸಾಧ್ಯತೆ ಇರುತ್ತದೆ.
ಇ-ಚಲನ್ಗಳ ವಸೂಲಾತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ದೇಶಾದ್ಯಂತ ಸದ್ಯ ಸುಮಾರು ₹45,000 ಕೋಟಿ ರೂಪಾಯಿ ಟ್ರಾಫಿಕ್ ದಂಡ ಬಾಕಿ ಉಳಿದಿದೆ ಮತ್ತು ಅದರಲ್ಲಿ ಕೇವಲ ₹25,000 ಕೋಟಿ ಮಾತ್ರ ವಸೂಲಾಗಿದೆ ಎಂಬ ಆಘಾತಕಾರಿ ಮಾಹಿತಿ ಕೋರ್ಟ್ಗೆ ಲಭ್ಯವಾಗಿದೆ. ಈ ಬೃಹತ್ ಬಾಕಿಯನ್ನು ವಸೂಲಿ ಮಾಡಲು ಮತ್ತು ಜನರಲ್ಲಿ ನಿಯಮಗಳ ಬಗ್ಗೆ ಭಯ ಹುಟ್ಟಿಸಲು ಕೋರ್ಟ್ ಈ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಿದೆ.
ದಂಡ ಪಾವತಿಸದ ವಾಹನಗಳ ಚಾಲನಾ ಪರವಾನಗಿ (Driving License) ಅಮಾನತುಗೊಳಿಸುವುದು, ಆರ್ಸಿ (RC) ನವೀಕರಣ, ಫಿಟ್ನೆಸ್ ಪ್ರಮಾಣಪತ್ರ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ನೀಡುವುದನ್ನು ತಡೆಯುವಂತೆ ಕೋರ್ಟ್ ಸೂಚಿಸಿದೆ. ಅಲ್ಲದೆ, ಅಂತಹ ವಾಹನಗಳನ್ನು ‘ಪರಿವಾಹನ’ ಪೋರ್ಟಲ್ನಲ್ಲಿ ಬ್ಲಾಕ್ಲಿಸ್ಟ್ ಮಾಡಲು ಹಾಗೂ ಮಾಲೀಕತ್ವ ವರ್ಗಾವಣೆಯನ್ನು ತಡೆಯಲು ಸಲಹೆ ನೀಡಿದೆ.
ದೀರ್ಘಕಾಲದಿಂದ ದಂಡ ಕಟ್ಟದ ವಾಹನಗಳನ್ನು ರಸ್ತೆಗಳಲ್ಲಿ ರ್ಯಾಂಡಮ್ ಚೆಕಿಂಗ್ (ಆಕಸ್ಮಿಕ ತಪಾಸಣೆ) ನಡೆಸಿ ತಕ್ಷಣವೇ ಜಪ್ತಿ (Seize) ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಹೇಳಿದೆ.
ಇವೆಲ್ಲವೂ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಬಂದಿರುವ ಸಲಹೆ ಮತ್ತು ಪ್ರಸ್ತಾಪಗಳಾಗಿದ್ದು, ಇವು ಇನ್ನೂ ಅಂತಿಮ ಕಾಯ್ದೆ ಅಥವಾ ಆದೇಶಗಳಾಗಿ ಜಾರಿಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರಗಳು ದಂಡ ವಸೂಲಾತಿಗಾಗಿ ಅತ್ಯಂತ ಕಠಿಣ ಕಾನೂನುಗಳನ್ನು ತರಲಿವೆ ಎಂಬುದಕ್ಕೆ ಈ ಬೆಳವಣಿಗೆ ಸ್ಪಷ್ಟ ಮುನ್ಸೂಚನೆಯಾಗಿದೆ.














