Job Update: SSLC ಆಗಿದೆಯಾ? ಡ್ರೈವಿಂಗ್‌ ಲೈಸೆನ್ಸ್ ಉಂಟಾ? ಬೆಂಗಳೂರಿಗರಿಗೆ ಬಿಗ್‌ ಚಾನ್ಸ್‌, ಸರ್ಕಾರಿ ನೌಕರಿ ನಿಮಗಾಗಿ ಕಾದಿದೆ! | | ACTPnews

Job Update: SSLC ಆಗಿದೆಯಾ? ಡ್ರೈವಿಂಗ್‌ ಲೈಸೆನ್ಸ್ ಉಂಟಾ? ಬೆಂಗಳೂರಿಗರಿಗೆ ಬಿಗ್‌ ಚಾನ್ಸ್‌, ಸರ್ಕಾರಿ ನೌಕರಿ ನಿಮಗಾಗಿ ಕಾದಿದೆ! |


30 ಹುದ್ದೆಗಳು; ವರ್ಗವಾರು ವಿವರ

IISc ಅಧಿಸೂಚನೆಯ ಪ್ರಕಾರ ಒಟ್ಟು 30 ಜೂನಿಯರ್ ಸೆಕ್ಯುರಿಟಿ ಅಸಿಸ್ಟೆಂಟ್ ಹುದ್ದೆಗಳ ಪೈಕಿ UR 13, OBC 8, SC 4, ST 2 ಮತ್ತು EWS 3 ಹುದ್ದೆಗಳಿವೆ. ಈ ನೇಮಕಾತಿ ಬೆಂಗಳೂರಿನ IISc ಆವರಣದಲ್ಲಿನ ಸೆಕ್ಯುರಿಟಿ ಅಂಡ್ ಫೈರ್ ಫೈಟಿಂಗ್ ವಿಭಾಗಕ್ಕೆ ಸಂಬಂಧಿಸಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಗಳು SSLC/ಮೆಟ್ರಿಕ್ಯುಲೇಷನ್ ಅಥವಾ ಅದಕ್ಕೆ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ (Agniveervayu), ಮಾಜಿ ಸೈನಿಕರು ಅಥವಾ ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (Ex-CAPF) ಸಿಬ್ಬಂದಿಯಾಗಿದ್ದು, ಕನಿಷ್ಠ 4 ವರ್ಷ ಸೇವೆ ಸಲ್ಲಿಸಿ ಡಿಸ್ಚಾರ್ಜ್ ಸರ್ಟಿಫಿಕೇಟ್ ಹೊಂದಿರಬೇಕು. ಮೊದಲ ಬ್ಯಾಚ್‌ನ ನಾಲ್ಕು ವರ್ಷದ ಸೇವಾ ಅವಧಿ ಇನ್ನೂ ಪೂರ್ಣಗೊಳಿಸದ Combatant Ex-Agniveers ಕೂಡ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಬಳಿ ಮಾನ್ಯ ದ್ವಿಚಕ್ರ ವಾಹನ ಚಾಲನಾ ಪರವಾನಗಿ ಇರಬೇಕು. ಇದರ ಜೊತೆಗೆ ಉತ್ತಮ ದೈಹಿಕ ಸಾಮರ್ಥ್ಯ, ಸಂವಹನ ಹಾಗೂ interpersonal skills ಹೊಂದಿರಬೇಕು. ಇಂಗ್ಲಿಷ್‌ನಲ್ಲಿ ಓದಲು-ಬರೆಯಲು ಮತ್ತು ಮಾತನಾಡಲು ನಿರರ್ಗಳತೆ ಕಡ್ಡಾಯವಾಗಿದೆ.

ವಯೋಮಿತಿ ಎಷ್ಟು?

ಅರ್ಜಿಯ ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು 30 ವರ್ಷ ಮೀರಿರಬಾರದು. ಅನ್ವಯಿಸುವ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ತಿಂಗಳಿಗೆ ₹35,000 ಸಂಭಾವನೆ

ಆಯ್ಕೆಯಾದ ಜೂನಿಯರ್ ಸೆಕ್ಯುರಿಟಿ ಅಸಿಸ್ಟೆಂಟ್‌ಗಳಿಗೆ ತಿಂಗಳಿಗೆ ₹35,000 ಒಟ್ಟು ಸಂಭಾವನೆ ನೀಡಲಾಗುತ್ತದೆ. ಈ ಹುದ್ದೆ ಶಾಶ್ವತ ಸರ್ಕಾರಿ ಉದ್ಯೋಗವಲ್ಲ; ಇದು ಗುತ್ತಿಗೆ ಆಧಾರದ ನೇಮಕಾತಿಯಾಗಿದೆ. ಆರಂಭಿಕ ಗುತ್ತಿಗೆ ಅವಧಿ ಒಂದು ವರ್ಷವಾಗಿದ್ದು, ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯದ ಆಧಾರದ ಮೇಲೆ ವರ್ಷಕ್ಕೊಮ್ಮೆ ನವೀಕರಿಸಿ ಗರಿಷ್ಠ 5 ವರ್ಷಗಳವರೆಗೆ ಮುಂದುವರಿಸಬಹುದಾಗಿದೆ. ವರ್ಷಕ್ಕೆ ಗರಿಷ್ಠ 10% ಹೆಚ್ಚಳಕ್ಕೆ ಅವಕಾಶವಿದ್ದು, ಗರಿಷ್ಠ ನಾಲ್ಕು ಇಂತಹ ಪರಿಷ್ಕರಣೆಗಳಿಗೆ ಅವಕಾಶವಿದೆ.

ಕೆಲಸ ಏನು?

ಜೂನಿಯರ್ ಸೆಕ್ಯುರಿಟಿ ಅಸಿಸ್ಟೆಂಟ್‌ಗಳು ಸಂಸ್ಥೆಯ ಪ್ರವೇಶ-ನಿರ್ಗಮನ ನಿಯಂತ್ರಣ, ಕ್ಯಾಂಪಸ್ ಪೆಟ್ರೋಲಿಂಗ್, CCTV ಮತ್ತು ಅಲಾರಂ ವ್ಯವಸ್ಥೆಗಳ ಮೇಲ್ವಿಚಾರಣೆ, ಭದ್ರತಾ ಉಲ್ಲಂಘನೆಗಳ ವರದಿ, ಅಗ್ನಿ ಅವಘಡ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಸ್ಪಂದನೆ, ಕಾರ್ಯಕ್ರಮಗಳ ವೇಳೆ crowd management ಹಾಗೂ traffic regulation ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಭದ್ರತಾ ದಾಖಲೆಗಳು, incident reports ಮತ್ತು visitor records ನಿರ್ವಹಿಸುವುದರ ಜೊತೆಗೆ, ಸಂಸ್ಥೆ ಒದಗಿಸುವ ಭದ್ರತಾ ಮತ್ತು ಸಂವಹನ ಸಾಧನಗಳನ್ನು ಬಳಸಬೇಕಾಗುತ್ತದೆ. ಶಿಫ್ಟ್ ಆಧಾರದಲ್ಲಿ, ರಾತ್ರಿ ಪಾಳಿಯಲ್ಲೂ ಕರ್ತವ್ಯ ನಿರ್ವಹಿಸುವುದು ಹುದ್ದೆಯ ಭಾಗವಾಗಿದೆ.

ಆಯ್ಕೆ ಹೇಗೆ?

ಅಭ್ಯರ್ಥಿಗಳ ಆಯ್ಕೆ Physical Efficiency Test ಮತ್ತು Trade Test ಆಧಾರದಲ್ಲಿ ನಡೆಯಲಿದೆ. ಈ ಹಂತದಲ್ಲಿ ಶಾರ್ಟ್‌ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ ನಂತರ Interview ನಡೆಯಲಿದೆ. ಆಯ್ಕೆ ಪ್ರಕ್ರಿಯೆಯ ದಿನಾಂಕ, ಸಮಯ ಮತ್ತು ವಿಧಾನವನ್ನು IISc ಇ-ಮೇಲ್ ಮೂಲಕ ತಿಳಿಸುತ್ತದೆ. ಆಯ್ಕೆ ಪ್ರಕ್ರಿಯೆ ಸಂಸ್ಥೆಯಲ್ಲೇ ನೇರವಾಗಿ ನಡೆಯಲಿದ್ದು, ಪ್ರಯಾಣ ಭತ್ಯೆ ಅಥವಾ ಇತರೆ TA/DA ನೀಡುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅರ್ಜಿ ಶುಲ್ಕದ ಬಗ್ಗೆ

ಅಧಿಕೃತ ಅಧಿಸೂಚನೆಯಲ್ಲಿ ಪ್ರತ್ಯೇಕ ಅರ್ಜಿ ಶುಲ್ಕದ ಮೊತ್ತವನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪೋರ್ಟಲ್‌ನಲ್ಲಿನ ಅಂತಿಮ ಸೂಚನೆಗಳನ್ನು ಪರಿಶೀಲಿಸುವುದು ಸೂಕ್ತ.

ಆನ್‌ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು?

ಅಭ್ಯರ್ಥಿಗಳು IIScಯ ತಾತ್ಕಾಲಿಕ ನೇಮಕಾತಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯ ವಿದ್ಯಾರ್ಹತೆ, ವಯಸ್ಸು, ವರ್ಗ, ಅಂಕಗಳು ಮತ್ತು ಸೇವಾ ಅನುಭವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಚಾಲನಾ ಪರವಾನಗಿಯನ್ನು “Any Other Relevant Certificates” ವಿಭಾಗದಲ್ಲಿ ಅಪ್‌ಲೋಡ್ ಮಾಡಬೇಕು. ಸಲ್ಲಿಸಿದ ಅರ್ಜಿಯ ಹಾರ್ಡ್ ಕಾಪಿಯನ್ನು IIScಗೆ ಕಳುಹಿಸುವ ಅಗತ್ಯವಿಲ್ಲ; ಆದರೆ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ಇಟ್ಟುಕೊಳ್ಳುವಂತೆ ಸಂಸ್ಥೆ ಸೂಚಿಸಿದೆ.

ಅರ್ಜಿ ಸಲ್ಲಿಸಲು ಅಧಿಕೃತ ಪೋರ್ಟಲ್: IISc Temporary Positions Recruitment Portal

ಪ್ರಮುಖ ದಿನಾಂಕಗಳು

ಅರ್ಜಿ ಆರಂಭ: 25 ಸೆಪ್ಟೆಂಬರ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನ: 16 ಅಕ್ಟೋಬರ್ 2026

ಅರ್ಜಿದಾರರು ತಮ್ಮ ವಿದ್ಯಾರ್ಹತೆ, ಸೇವಾ ಅನುಭವ ಮತ್ತು ಇತರೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಂಡ ನಂತರವೇ ಅರ್ಜಿ ಸಲ್ಲಿಸುವಂತೆ IISc ಸೂಚಿಸಿದೆ. ಗುತ್ತಿಗೆ ಹುದ್ದೆಯಾಗಿರುವುದರಿಂದ PF, ಪಿಂಚಣಿ, seniority ಅಥವಾ promotion ಸೇರಿದಂತೆ ಶಾಶ್ವತ ಸೇವಾ ಸೌಲಭ್ಯಗಳು ಅನ್ವಯಿಸುವುದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed