Last Updated:
ಬಿಗ್ ಬಾಸ್ ಮನೆಗೆ ಒಳಗೆ ಮೂವರ ಎಂಟ್ರಿ ಆಗಿದೆ. ವೈಲ್ಡ್ ಕಾರ್ಡ್ ಮೂಲಕ ಇವರು ಹೋಗಿದ್ದಾರೆ. ಆದರೆ, ಯಾರು ಅನ್ನುವ ಕುತೂಹಲ ಹೆಚ್ಚಾಗಿದೆ. ಪ್ರೋಮೋದಲ್ಲಿ ಆ ರೀತಿನೇ ಇವರನ್ನ ತೋರಿಸಿದ್ದಾರೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ…
ಬಿಗ್ ಬಾಸ್ (Bigg Boss) ಮನೆಗೆ ಮೂವರ ಎಂಟ್ರಿ ಆಗುತ್ತದೆ. ಅದು ವೈಲ್ಡ್ ಕಾರ್ಡ್ ಎಂಟ್ರಿನೇ (Wild Card Entry) ಆಗಿದೆ. ಮೂವರು ಜನರಲ್ಲಿ ಇಬ್ಬರು ಹುಡುಗಿಯರು ಇದ್ದಾರೆ. ಮೂರನೇ ಹುಡುಗ ಯಾರು ಅನ್ನುವ ಕುತೂಹಲ ಇದೆ. ಕಿಶನ್ ಬೆಳಗಲಿ (Kishan Bilagali) ಹೆಸರಿನೂ ಇದೆ. ಆದರೆ, ಕಲರ್ಸ್ ಕನ್ನಡ (Colors Kannada) ಪ್ರೋಮೋದಲ್ಲಿ ಮುಖವನ್ನ ತೋರಿಲ್ಲ. ಬದಲಾಗಿ ಎಂಟ್ರಿ ಮತ್ತು ಡ್ಯಾನ್ಸ್ ಹಾಗೂ ಮಾತುಗಳು ಇವೆ. ಈ ಬಗ್ಗೆ ಇನ್ನಷ್ಟು ಹೇಳೋದು ಇದೆ.
ಈ ಒಂದು ಕುತೂಹಲವನ್ನ ಪ್ರೋಮೋ ಹುಟ್ಟುಹಾಕಿದೆ. ಈ ಮೂವರಲ್ಲಿ ಇಬ್ಬರು ಹುಡುಗಿಯರೇ ಇದ್ದಾರೆ. ಇವರ ಮಾತುಗಳು ಜೋರಾಗಿಯೇ ಇವೆ.
ಬಿಗ್ ಬಾಸ್ ಹೊಸ ಕಿಚ್ಚು
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಬಹುಶಃ ಸುದೀಪ್ ಹೇಳಿದಂತೆ ಇವರು ಮನೆ ಒಳಗೆ ಕಿಚ್ಚು ಹಚ್ಚುವಂತೆ ಇದೆ. ಇವರ ಮಾತುಗಳನ್ನ ಕೇಳಿದರೆ ಹಾಗೆ ಅನಿಸುತ್ತದೆ. ಇವರ ವೈಲ್ಡ್ ಕಾರ್ಡ್ ಎಂಟ್ರಿ ಜಬರ್‌ದಸ್ತ್ ಆಗಿಯೇ ಇದೆ.
ಈ ಮೂವರಲ್ಲಿ ಆ ಹುಡುಗ ಯಾರು? ಈ ಒಂದು ಪ್ರಶ್ನೆಗೆ ಉತ್ತರ ಸಿಗೋದಿಲ್ಲ. ಮುಖವು ಕಾಣಿಸೋದಿಲ್ಲ. ಆದರೆ, ಹಿಂದಿನಿಂದ ಒಂದೇ ಒಂದು ಶಾಟ್ ತೋರಿಸುತ್ತಾರೆ.
ಬಿಗ್ ಬಾಸ್ ಮನೆಯ ಎಮರ್ಜೆನ್ಸಿ ಎಕ್ಸಿಟ್ ಅಲ್ಲಿ ಇಬ್ಬರು ಬರ್ತಾರೆ ಅನ್ನುವ ಮಾತನ್ನ ಸುದೀಪ್ ಹೇಳಿದ್ದರು. ಅದರಲ್ಲಿ ತಾಂಡವ್ ರಾಮ್ ಮನೆಯಿಂದ ಹೊರಗೆ ಬಂದರು. ಆದರೆ, ಇವರು ವಾಪಾಸ್ ಮನೆ ಒಳಗೆ ಹೋಗಿದ್ದಾರೆ.
ಅವಿನಾಶ್ ಹೊರಗೆ ಬಂದಿರೋದು ಗೊತ್ತೇ ಇದೆ. ಇವರನ್ನ ಬಿಟ್ಟು ವೈಷ್ಣವಿ ಏನಾದರೂ ಮನೆಯಿಂದ ಹೊರಗೆ ಬಂದ್ರಾ? ಈ ಪ್ರಶ್ನೆನೂ ಇದೆ. ಈ ಪ್ರಶ್ನೆಗಳ ನಡುವೆ ವೈಲ್ಡ್ ಕಾರ್ಡ್ ಮೂಲಕ ಮೂವರು ಎಂಟ್ರಿ ಆಗಿದೆ.
ದೊಡ್ಮನೆಗೆ ಮೂವರ ಎಂಟ್ರಿ; ಇದರಲ್ಲಿ ಇಬ್ಬರು ಹುಡುಗಿಯರು ನೋಡಿ!
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಕಿಚ್ಚನ ಚಪ್ಪಾಳೆಗೆ ಇದೀಗ ಮತ್ತೊಂದು ಬೆಲೆ ಬಂದಿದೆ. ಕಿಚ್ಚನ ಚಪ್ಪಾಳೆ ಪಡೆಯೋರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡಲಾಗುತ್ತಿದೆ. ಬಿಗ್ ಬಾಸ್ ಸೀಸನ್-13 ರ ಮೊದಲ ಚಪ್ಪಾಳೆಯನ್ನ ಆಸಿಯಾ ಫಿರ್ದೋಸ್ ಪಡೆದುಕೊಂಡಿದ್ದಾರೆ. ಕಿಚ್ಚನ ಚಪ್ಪಾಳೆಯ ಒಂದು ಲಕ್ಷ ರೂಪಾಯಿಯನ್ನ ಇವರೇ ಮೊದಲು ಪಡೆದುಕೊಂಡಿದ್ದಾರೆ ಅಂತ ಹೇಳಬಹುದು.














