ಅಪ್ಪನ ಮನಸ್ಸಿನ ಮಾತು ಕೇಳಿ ಕಿಚ್ಚ ಖುಷಿನೂ ಆಗಿದ್ದಾರೆ. ಎಮೋಷನಲ್ ಕೂಡ ಆಗಿದ್ದಾರೆ. ನಿನ್ನ ಈ ಯಶಸ್ವಿ ಜರ್ನಿಯಿಂದ ನನಗೂ ಮತ್ತು ನಿನ್ನ ಅಮ್ಮನಿಗೂ ಆದ ಖುಷಿಗಿಂತ ಬೇರೊಂದಿಲ್ಲ ಅಂತಲೇ ಸುದೀಪ್ ತಂದೆ ಹೇಳಿದ್ದಾರೆ.
ಅಪ್ಪನ ಮಾತಿಗೆ ಸುದೀಪ್ ಎಮೋಷನಲ್
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಕಿಚ್ಚನ ಈ ಯಶಸ್ವಿ 30 ವರ್ಷದ ಸಿನಿ ಜರ್ನಿಗೆ ಸಲ್ಮಾನ್ ಖಾನ್ ಕೂಡ ವಿಶ್ ಮಾಡಿದ್ದಾರೆ. ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ವಿಶ್ ಮಾಡಿದ್ದಾರೆ.
ಸುದೀಪ್ ಅವರ ಈ ಸಂಭ್ರಮದಲ್ಲಿ ದೊಡ್ಮನೆಯ ಸ್ಪರ್ಧಿಗಳು ಭಾಗಿ ಆಗಿದ್ದಾರೆ. ತಾವು ಇರೋ ಮನೆಯಲ್ಲಿಯೇ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ವೇದಿಕೆ ಮೇಲೂ ಸುದೀಪ್ ಅವರನ್ನ ಡ್ಯಾನ್ಸ್ ಮೂಲಕವೇ ಸ್ವಾಗತಿಸಲಾಗಿದೆ. ಭಾನುವಾರದ ಬಿಗ್ ಬಾಸ್ ಸಂಚಿಕೆಯಲ್ಲಿ ಸುದೀಪ್ ಸಂಭ್ರಮವೇ ಇರುತ್ತದೆ.
ಸಲ್ಮಾನ್ ಖಾನ್ ವಿಶ್
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಕಿಚ್ಚ ಸುದೀಪ್ ಇಂಡಸ್ಟ್ರಿಗೆ ಬಂದು 30 ವರ್ಷ ಆಗಿದೆ. ತಾಯವ್ವ ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದಾರೆ. ಈ ಚಿತ್ರ 1997 ರಲ್ಲಿ ಬಂದಿದೆ.
ಇಲ್ಲಿಂದ ಸಾಗಿ ಬಂದ ಕಿಚ್ಚನ ಪಯಣದಲ್ಲಿ ಸುದೀಪ್ ಕನ್ನಡಿಗರ ಕಿಚ್ಚ ಆಗಿದ್ದಾರೆ. ಅಭಿನಯ ಚಕ್ರವರ್ತಿ ಆಗಿದ್ದಾರೆ. ಬಿಗ್ ಬಾಸ್ ಆಗಿದ್ದಾರೆ.
ಸುದೀಪ್ ಚಿತ್ರ ಜೀವನದಲ್ಲಿ ಮತ್ತೊಂದು ಅತಿ ಮಹತ್ವದ ಚಿತ್ರ ಮಾಡ್ತಿದ್ದಾರೆ. ಶ್ರೀ ಕೃಷ್ಣ ‘ದೇವರಾಯ’ ಚಿತ್ರ ಮಾಡುತ್ತಿದ್ದಾರೆ. ವಿಜಯನಗರದ ಶ್ರೇಷ್ಠ ಚಕ್ರವರ್ತಿ ಶ್ರೀ ಕೃಷ್ಣ ದೇವರಾಯನ ಪಾತ್ರವನ್ನ ಈ ಚಿತ್ರದಲ್ಲಿ ಮಾಡುತ್ತಿದ್ದಾರೆ.
ಬಿಲ್ಲ ರಂಗ ಬಾಷಾ ಚಿತ್ರ ಇವರ ಜೀವನದ ಮತ್ತೊಂದು ಅತಿ ದೊಡ್ಡ ಸಿನಿಮಾ ಆಗಿದೆ. ಇದರಲ್ಲಿ ಸುದೀಪ್ ಮೂರು ಪಾತ್ರ ಮಾಡುತ್ತಿದ್ದಾರೆ. ಮೂರು ಮೂರು ಪಾತ್ರದ ಈ ಚಿತ್ರದ ಶೂಟಿಂಗ್ ನಡೀತಿದೆ. ಇದರ ಜೊತೆಗೆ ಸುದೀಪ್ ಈಗ ಬಿಗ್ ಬಾಸ್ ಸೀಸನ್-13 ಹೋಸ್ಟ್ ಮಾಡುತ್ತಿದ್ದಾರೆ ಅಂತ ಹೇಳಬಹುದು.













