Bigg Boss-13: ಕಿಚ್ಚ ಸುದೀಪ್ ಸಿನಿಪಯಣಕ್ಕೆ 30ರ ಸಂಭ್ರಮ; ಬಿಗ್ ಬಾಸ್ ಸೆಟ್‌ನಲ್ಲಿ ವಿಶೇಷ ಆಚರಣೆ! | | ACTPnews

ಕಿಚ್ಚನ ಸಿನಿಪಯಣದ 30 ವರ್ಷದ ಸಡಗರ!(ಚಿತ್ರ ಕೃಪೆ: ಪಿ.ಆರ್.ವಿಡಿಯೋ)


Last Updated:

ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 30 ವರ್ಷ ಆಗಿದೆ. ಇದನ್ನ ಬಿಗ್ ಬಾಸ್ ಸೆಟ್ ಅಲ್ಲಿ ಸೆಲೆಬ್ರೇಟ್ ಮಾಡಲಾಗಿದೆ. ಈ ಕ್ಷಣದ ವಿಡಿಯೋ ಕೂಡ ಹೊರ ಬಂದಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಿಚ್ಚನ ಸಿನಿಪಯಣದ 30 ವರ್ಷದ ಸಡಗರ!(ಚಿತ್ರ ಕೃಪೆ: ಪಿ.ಆರ್.ವಿಡಿಯೋ)
ಕಿಚ್ಚನ ಸಿನಿಪಯಣದ 30 ವರ್ಷದ ಸಡಗರ!(ಚಿತ್ರ ಕೃಪೆ: ಪಿ.ಆರ್.ವಿಡಿಯೋ)

ಬಿಗ್ ಬಾಸ್ (Bigg Boss) ಸೆಟ್ ಇರೋ ಜಾಲಿವುಡ್‌ ಅಲ್ಲಿ ಒಂದು ಸಂಭ್ರಮವಾಗಿದೆ. ಈ ಸಡಗರ ವಿಶೇಷವಾಗಿದೆ. ಕಿಚ್ಚ ಸುದೀಪ್ ಸಿನಿ ಜರ್ನಿಯ 30 ವರ್ಷದ ಸಂಭ್ರಮವೇ ಇದಾಗಿದೆ. ಈ ಒಂದು ಖುಷಿಯಲ್ಲಿ ಕಿಚ್ಚ ಸುದೀಪ್ (Kichcha Sudeepa) ಕೂಡ ಭಾಗಿ ಆಗಿದ್ದಾರೆ. ಇದರ ವಿಡಿಯೋ ಕೂಡ ಮಾಧ್ಯಮಗಳಿಗೆ ಶೇರ್ ಆಗಿದ್ದಾರೆ. ಕಿಚ್ಚ ಸುದೀಪ್ (Kichcha Sudeepa) ಕಪ್ಪು ಬಣ್ಣದ ಡ್ರೆಸ್ ತೊಟ್ಟು ಈ ಸೆಲೆಬ್ರೇಷನ್ (Celebration) ಅಲ್ಲಿ ಭಾಗಿ ಆಗಿದ್ದಾರೆ. ಈ ಒಂದು ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಿಚ್ಚನ ಸಂಭ್ರಮ

ಬಿಗ್ ಬಾಸ್ ಸೆಟ್ ಜಾಲಿವುಡ್ ಸ್ಟುಡಿಯೋದಲ್ಲಿಯೇ ಇದೆ. ಈ ಒಂದು ಸ್ಟುಡಿಯೋದವರು ಸುದೀಪ್ 30 ವರ್ಷದ ಸಿನಿ ಜರ್ನಿಯನ್ನ ಸೆಲೆಬ್ರೇಟ್ ಮಾಡಿದ್ದಾರೆ.
Kichcha Sudeepa 30 years film journey celebration at bigg boss sets

ಕಿಚ್ಚನ ಸಿನಿಪಯಣದ 30 ವರ್ಷದ ಸಡಗರ

(ಚಿತ್ರ ಕೃಪೆ: ಪಿ.ಆರ್.ವಿಡಿಯೋ)

ಈ ಒಂದು ಸಂಭ್ರಮದಲ್ಲಿ ಕೇಕ್ ಕಟ್ಟಿಂಗ್ ಕೂಡ ಆಗಿದೆ. ಎಲ್ಲರೊಟ್ಟಿಗೂ ಸುದೀಪ್ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಈ ಒಂದು ಸೆಲೆಬ್ರೇಷನ್‌ಗೆ ಕಿಚ್ಚ ಸುದೀಪ್ ಕಪ್ಪು ಬಟ್ಟೆ ತೊಟ್ಟು ಭಾಗಿ ಆಗಿದ್ದಾರೆ. ಈ ಕ್ಷಣವನ್ನು ಅಷ್ಟೆ ಸಂಭ್ರಮಿಸಿದ್ದಾರೆ.

ಸುದೀಪ್ ಸಿನಿಮಾ ಪಯಣ

ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 30 ವರ್ಷ ಆಗಿದೆ. ತಾಯವ್ವ ಚಿತ್ರದಿಂದಲೇ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಸುದೀಪ್ ಸಿನಿಮಾ ಪಯಣ ಸಾಗ್ತಾನೇ ಇದೆ.

ಈ 30 ವರ್ಷದಲ್ಲಿ ಸುದೀಪ್ ಜನರ ಪ್ರೀತಿಯ ಕಿಚ್ಚ ಆಗಿದ್ದಾರೆ. ಬಾದಷಾ ಆದರು, ಅಭಿನಯ ಚಕ್ರವರ್ತಿ ಆದರು, ಬಿಗ್ ಬಾಸ್ ಆದರು ನೋಡಿ.

ಹೀಗೆ ಸಾಗಿ ಬಂದ ಇವರ ಸಿನಿ ಪಯಣದಲ್ಲಿ ಬಾಲಿವುಡ್ ಚಿತ್ರವೂ ಇದೆ. ತೆಲುಗು ಸಿನಿಮಾನೂ ಇದೆ. ತಮಿಳು ಚಿತ್ರವೂ ಇದೆ. ಮಲೆಯಾಳಂ ಸಿನಿಮಾ ಬಿಟ್ಟು ಎಲ್ಲ ಭಾಷೆಯಲ್ಲೂ ಸುದೀಪ್ ಅಭಿನಯಿಸಿದ್ದಾರೆ.

Kichcha Sudeepa 30 years film journey celebration at bigg boss sets

ಬಿಗ್ ಬಾಸ್ ಸೆಟ್ ಅಲ್ಲಿ ಸೆಲೆಬ್ರೇಷನ್

(ಚಿತ್ರ ಕೃಪೆ: ಪಿ.ಆರ್.ವಿಡಿಯೋ)

ದೇವರಾಯ

ಸುದೀಪ್ ಈಗ ಶ್ರೀ ಕೃಷ್ಣ ದೇವರಾಯ ಚಿತ್ರ ಮಾಡ್ತಿದ್ದಾರೆ. ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿ ಶ್ರೀ ಕೃಷ್ಣ ದೇವರಾಯನ ಪಾತ್ರದಲ್ಲಿಯೇ ಸುದೀಪ್ ಅಭಿನಯಿಸುತ್ತಿದ್ದಾರೆ.

ಈ ಚಿತ್ರ ಅಲ್ಲದೆ ಸದ್ಯ ಬಿಲ್ಲ ರಂಗ ಬಾಷಾ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ.

ಸ್ಕೂಲ್ ಬಸ್

ಕಿಚ್ಚ ಸುದೀಪ್ ಈ ಸ್ಕೂಲ್ ಬಸ್ ಚಿತ್ರವನ್ನು ಒಪ್ಪಿದ್ದಾರೆ. ತಮಿಳು ನಟ-ನಿರ್ದೇಶಕ ಸಮುದ್ರಕಣಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರ ಅಲ್ಲದೆ ಸುದೀಪ್ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ.

ಈ ಚಿತ್ರವನ್ನ ಜೋಗಿ ಪ್ರೇಮ್ ಡೈರೆಕ್ಷನ್ ಮಾಡುತ್ತಿದ್ದಾರೆ. ಜೋಗಿ ಪ್ರೇಮ್ ಸಿನಿಮಾ, ದೇವರಾಯ, ಸ್ಕೂಲ್ ಬಸ್ ಈ ಎಲ್ಲ ಚಿತ್ರಗಳು ಸುದೀಪ್ ಜನ್ಮ ದಿನ ಸೆಪ್ಟೆಂಬರ್-2 ರಂದು ಅನೌನ್ಸ್ ಆಗಿವೆ.

ಇನ್ನುಳಿದಂತೆ ಸುದೀಪ್ ಸದ್ಯ ಬಿಗ್ ಬಾಸ್ ಮಾಡ್ತಿದ್ದಾರೆ. ಬಿಲ್ಲ ರಂಗ ಬಾಷಾ ಚಿತ್ರದ ಕೆಲಸವು ನಡೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed