Last Updated:
ಆತ ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿರಲಿಲ್ಲ. ನಿನ್ನನ್ನೇ ಮದ್ವೆ ಆಗೋದು ಅಂತಾ ಕೊಡಬಾರದ ಕಾಟ ಕೊಡ್ತಿದ್ದ. ನೋಡೋವರೆಗೂ ನೋಡಿದ ಹೆಣ್ಣೆತ್ತವ್ರು ಪಾಗಲ್ ಪ್ರೇಮಿಯ ಕಥೆ ಮುಗಿಸಿದ್ದಾರೆ.
ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು. ದುಬೈನಿಂದ ವಾಪಸ್ ಬಂದ ರಮೇಶನಿಗೆ ಆಕೆಯ ಮೇಲೆ ಕಣ್ಣು ಬಿದ್ದಿತ್ತು. ಆಕೆ ಅಪ್ರಾಪ್ತೆಯಾಗಿದ್ದರೂ ಆಕೆಯನ್ನೇ ಮದ್ವೆಯಾಗಲೇಬೇಕೆಂದು (Marriage) ಹಠಕ್ಕೆ ಬಿದ್ದಿದ್ದ. ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದನಂತೆ. 2020ರಲ್ಲಿ ಬಾಲಕಿಯ ತಂದೆ (Father) ಈರಯ್ಯ ನೀಡಿದ್ದ ದೂರಿನ ಮೇರೆಗೆ ಬಾಗಲಕೋಟೆ ಪೊಲೀಸರು ರಮೇಶನನ್ನು ಜೈಲಿಗೆ (Jail) ಕಳುಹಿಸಿದ್ದರು. ಜೈಲಿನಿಂದ ಬಂದ ಮೇಲಾದರೂ ಸುಧಾರಿಸಿಕೊಳ್ತಾನೆ ಅನ್ಕೊಂಡಿದ್ದ ಕುಟುಂಬಕ್ಕೆ (Family) ರಮೇಶ್ ಮತ್ತೆ ಶಾಕ್ ಕೊಟ್ಟಿದ್ದ.
ರಮೇಶ್ನ ಕಾಟ ಸಹಿಸಿಕೊಂಡು ತಂದೆ ಈರಯ್ಯ ಮರ್ಯಾದೆಗೆ ಅಂಜಿ ಸುಮ್ಮನಿದ್ದರು. ಅಷ್ಟಾದ್ರೂ ಕಿಡಿಗೇಡಿ ಕಾಟ ಮಾತ್ರ ನಿಲ್ಲಲಿಲ್ಲ. ರೊಚ್ಚಿಗೆದ್ದ ಯುವತಿ ತಂದೆ, ಎಷ್ಟೇ ಬುದ್ಧಿ ಹೇಳಿದರೂ ಪ್ರಯೋಜನವಿಲ್ಲ. ಈತನನ್ನು ಮುಗಿಸಲೇಬೇಕು ಅಂತಾ ಸಂಬಂಧಿಕರ ಜೊತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಏಪ್ರಿಲ್ 27ರ ರಾತ್ರಿ ರಮೇಶ್ನನ್ನು ಮಾತನಾಡಿಸಲು ಬಂದ ಈರಯ್ಯ & ಗ್ಯಾಂಗ್, ಆತನಿಗೆ ಕಂಠಪೂರ್ತಿ ಎಣ್ಣೆ ಕುಡಿಸಿದ್ದಾರೆ. ನಶೆ ಏರ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಶವವನ್ನು ಅಲ್ಲಾಳಸಂದ್ರದ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಏಪ್ರಿಲ್ 28ರಂದು ರಾಜಕಾಲುವೆಯಲ್ಲಿ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿ ಈರಯ್ಯ/ ಕೊಲೆಯಾದ ರಮೇಶ್
ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್, ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯ ಆಗಿತ್ತು. ಆರಂಭದಲ್ಲಿ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದೇವು. ಆದರೆ ತನಿಖೆಯಲ್ಲಿ ಇದು ಕೊಲೆ ಎಂದು ತಿಳಿದು ಬಂದಿತ್ತು. ಪ್ರಕರಣದಲ್ಲಿ ಮೃತನಾದವನ ಹೆಸರು ರಮೇಶ್ 36 ವರ್ಷ ವಯಸ್ಸು, 15-20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿ. ಬೈಕ್ ಟ್ಯಾಕ್ಸಿ ಹಾಗೂ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದ. ಇವನನ್ನು ಊಟಕ್ಕೆ ಅಂತ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಕುಡಿಸಿದ್ದಾರೆ, ಕುಡಿತ ಜಾಸ್ತಿ ಆಗುತ್ತಿದ್ದಂತೆ ಆತನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಆ ಬಳಿಕ ರಾಜಕಾಲುವೆಯಲ್ಲಿ ಮೃತದೇಹ ಎಸೆದು ಎಸ್ಕೇಪ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು
ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದ ಯಲಹಂಕ ಪೊಲೀಸರು, ತನಿಖೆ ಚುರುಕುಗೊಳಿಸಿದಾಗ ಅಸಲಿ ಕಹಾನಿ ಬಯಲಾಯಿತು. ತಂದೆಯೇ ಮಗಳನ್ನು ಕಾಪಾಡಿಕೊಳ್ಳಲು ಈ ಕೃತ್ಯ ಎಸಗಿರೋದು ಗೊತ್ತಾಗಿತ್ತು. ಹೀಗಾಗಿ ರಮೇಶ್ನ ಕಥೆ ಮುಗಿಸಿದ್ದ ಯುವತಿ ತಂದೆ ಈರಯ್ಯ, ಕೊಲೆಗೆ ಸಾಥ್ ಕೊಟ್ಟ ಚಿನ್ನಯ್ಯ, ವಿನಾಯಕ, ಚೇತನ್ ಎಂಬುವವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Bangalore [Bangalore],Bangalore,Karnataka













