Narendra Modi: ದೇಶ ಸೇವೆಯೇ ನಮ್ಮ ಪ್ರಮುಖ ಮಾರ್ಗವಾಗಿರಲಿ: ‘ಸೇವಾ ಸಂಕಲ್ಪ ಅಭಿಯಾನ’ದ ಯಾತ್ರಿಕರಿಗೆ ಪ್ರಧಾನಿ ಮೋದಿ ಕಿವಿಮಾತು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನರೇಂದ್ರ ಮೋದಿ


Last Updated:

ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಈ ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಲಾಗಿತ್ತು. ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿರುವುದನ್ನು ಸ್ಮರಿಸಲು ಹಾಗೂ ಯುವಕರಲ್ಲಿ ದೇಶಸೇವೆಯ ಮನೋಭಾವನೆಯನ್ನು ಮೂಡಿಸಲು ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

 ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬಿಜೆಪಿಯ ‘ಸೇವಾ ಸಂಕಲ್ಪ ಅಭಿಯಾನ’ದ (Seva Sankalp Abhiyan) ಅಂಗವಾಗಿ ತಮ್ಮ ಜನ್ಮಸ್ಥಳವಾದ ಗುಜರಾತ್‌ನ ವಡ್‌ನಗರದಿಂದ ವಾರಣಾಸಿಗೆ ಬೈಕ್ ಮೂಲಕ ಪ್ರಯಾಣಿಸುತ್ತಿರುವ ‘ಸೇವಾ ಯಾತ್ರಿಗಳ’ (Seva Yatris) ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಈ ವೇಳೆ ಯಾತ್ರಿಕರು ಹಾದಿಯುದ್ದಕ್ಕೂ ಪಡೆದ ಅನುಭವಗಳು, ಜನರೊಂದಿಗಿನ ಸಂವಹನ ಮತ್ತು ಹೊಸ ಕಲಿಕೆಗಳ ಬಗ್ಗೆ ಪ್ರಧಾನಿ ಮುಕ್ತವಾಗಿ ಕೇಳಿ ತಿಳಿದುಕೊಂಡರು.

25 ವರ್ಷಗಳ ಸಾರ್ವಜನಿಕ ಸೇವೆಯ ಸ್ಮರಣೆ

ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಈ ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಲಾಗಿತ್ತು. ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿರುವುದನ್ನು ಸ್ಮರಿಸಲು ಹಾಗೂ ಯುವಕರಲ್ಲಿ ದೇಶಸೇವೆಯ ಮನೋಭಾವನೆಯನ್ನು ಮೂಡಿಸಲು ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

35,500 ಕಿಲೋಮೀಟರ್ ಪ್ರಯಾಣ

ಈ ಅಭಿಯಾನದ ಭಾಗವಾಗಿ ಒಟ್ಟು 20 ತಂಡಗಳು ಬೈಕ್‌ಗಳ ಮೂಲಕ ಸುಮಾರು 35,500 ಕಿಲೋಮೀಟರ್ ದೂರದ ಸುದೀರ್ಘ ಯಾತ್ರೆಯನ್ನು ಕೈಗೊಂಡಿವೆ. 10 ತಂಡಗಳು ವಡ್‌ನಗರದಿಂದ ವಾರಣಾಸಿಗೆ ಪ್ರಯಾಣಿಸಿದರೆ, ಉಳಿದ 10 ತಂಡಗಳು ವಾರಣಾಸಿಯಿಂದ ವಡ್‌ನಗರದ ಕಡೆಗೆ ಸಾಗುತ್ತಿವೆ.

ಈ 20 ದಿನಗಳ ಯಾತ್ರೆಯು ದೇಶದ 10 ರಾಜ್ಯಗಳ ಮೂಲಕ ಹಾದುಹೋಗಲಿದ್ದು, ದಾರಿಯುದ್ದಕ್ಕೂ ಹಳ್ಳಿಗಳ ಜನರು, ರೈತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಂದ ನೇರ ಪ್ರತಿಕ್ರಿಯೆ (Feedback) ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಸಾಗುತ್ತಿರುವ ಈ ಯಾತ್ರೆಯಲ್ಲಿ ಯುವಕರು ಜಲ ಸಂರಕ್ಷಣೆ, ಗಿಡ ನೆಡುವುದು, ಸ್ವಚ್ಛತಾ ಅಭಿಯಾನ, ವೃದ್ಧಾಶ್ರಮಗಳ ಸೇವೆ, ಗೋಸೇವೆ ಹಾಗೂ ಅಂಗಾಂಗ ದಾನದ ಜಾಗೃತಿಯಂತಹ ಮಹತ್ವದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಧಿಕಾರಕ್ಕಿಂತ ಸೇವೆಯೇ ಮುಖ್ಯ ಎಂದ ಪ್ರಧಾನಿ

ಸಂವಾದದ ವೇಳೆ ತಮ್ಮ ಹಳೆಯ ಸಾಂಸ್ಥಿಕ ದಿನಗಳ ಯಾತ್ರೆಯ ನೆನಪುಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, “ನಾವು ಎಷ್ಟೇ ಅಧಿಕಾರ ಅಥವಾ ಶಕ್ತಿಯನ್ನು ಪಡೆದರೂ, ಜನಸೇವೆಯೇ ನಮ್ಮ ಪ್ರಮುಖ ಮಾರ್ಗವಾಗಿರಬೇಕು” ಎಂದು ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು. ಸೇವೆ ಎನ್ನುವುದು ಕೇವಲ ಮಾತಿನಲ್ಲಿರಬಾರದು, ಅದು ನಮ್ಮ ನಡವಳಿಕೆ ಹಾಗೂ ಕೆಲಸಗಳ ಮೂಲಕ ಜನರಿಗೆ ತಲುಪಬೇಕು ಎಂದ ಅವರು, 2047ರ ವೇಳೆಗೆ ‘ವಿಕಸಿತ ಭಾರತ’ (Viksit Bharat-2047) ನಿರ್ಮಿಸುವಲ್ಲಿ ಇಂದಿನ ಯುವ ಪೀಳಿಗೆಯ ಪಾತ್ರ ಅತ್ಯಂತ ದೊಡ್ಡದಾಗಿದೆ ಎಂದು ಬಣ್ಣಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed