Ranbir Kapoor: ‘ಅನಿಮಲ್’ ಬಳಿಕ ರಣವೀರ್‌ಗೆ ಮತ್ತೊಂದು ರಗಡ್ ಲುಕ್; ‘ಲವ್ & ವಾರ್’ ಫಸ್ಟ್ ಲುಕ್ ರಿಲೀಸ್! | | ACTPnews

Ranbir Kapoor Love and War Movie First Look Viral


ಚಿತ್ರದಲ್ಲಿ ವಾರ್…

ಈ ಚಿತ್ರದಲ್ಲಿ ವಾರ್ ಇದೆ. ಟೈಟಲ್‌ ಅಲ್ಲಿ ಹೇಳಿದಂತೆ ಪ್ರೀತಿನೂ ಇದೆ. ಹಾಗಾಗಿಯೇ ಚಿತ್ರಕ್ಕೆ ಲವ್ ಆ್ಯಂಡ್ ವಾರ್ ಅಂತ ಶೀರ್ಷಿಕೆ ಇದೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

ಚಿತ್ರದ ಎರಡು ಪೋಸ್ಟರ್ ರಿಲೀಸ್

(ಚಿತ್ರ ಕೃಪೆ: ರಣಬೀರ್ ಕಪೂರ್ ಇನ್​ಸ್ಟಾಗ್ರಾಮ್)

ಈ ಚಿತ್ರದಲ್ಲಿ ತ್ರಿಕೋನ ಪ್ರೇಮ ಕತೆ ಇಟ್ಟಿದ್ದಾರೆ. ವಿಕ್ಕಿ ಕೌಶಲ್ ಈ ಚಿತ್ರದ ಮತ್ತೊಬ್ಬ ನಾಯಕರಾಗಿದ್ದಾರೆ. ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ನಡುವೆ ಆಲಿಯಾ ಭಟ್ ಇದ್ದಾರೆ.
ಪ್ರಮುಖ ಭಾಗದ ಶೂಟಿಂಗ್ ಪೂರ್ಣ

ಲವ್ ಆ್ಯಂಡ್ ವಾರ್ ಚಿತ್ರದ ಪ್ರಮುಖ ಭಾಗದ ಶೂಟಿಂಗ್ ಪೂರ್ಣ ಆಗಿದೆ. ಚಿತ್ರೀಕರಣದ ನಂತರದ ಕೆಲಸವು ಭರದಿಂದಲೆ ಸಾಗಿದೆ. ಹಾಗೆ ಈ ಚಿತ್ರದಲ್ಲಿ ಯುದ್ಧದವೂ ಇದೆ.

ಚಿತ್ರ ಮುಂದಿನ ವರ್ಷ ರಿಲೀಸ್

ಲವ್ ಆ್ಯಂಡ್ ವಾರ್ ಚಿತ್ರ ಮುಂದಿನ ವರ್ಷ ತೆರೆ ಕಾಣುತ್ತಿದೆ. ಈ ಚಿತ್ರ ಜನವರಿ-21,2027 ರಂದು ರಿಲೀಸ್ ಆಗುತ್ತಿದೆ. ಈ ವಿಷಯ ಅಧಿಕೃತವಾಗಿಯೇ ಹೊರ ಬಂದಿದೆ.

ರಣಬೀರ್ ಕಪೂರ್ ಇರೋ ಪೋಸ್ಟರ್ ಕೆಳಗೆ ಈ ರಿಲೀಸ್ ಡೇಟ್ ಇದೆ. ಇನ್ನು ಈಗ ಬಿಟ್ಟಿರೋ ಪೋಸ್ಟರ್ ಅಲ್ಲಿ ರಣಬೀರ್ ಲುಕ್ ಸಖತ್ ಆಗಿದೆ.

Ranbir Kapoor Love and War Movie First Look Viral

ಚಿತ್ರ ಮುಂದಿನ ವರ್ಷ ರಿಲೀಸ್

(ಚಿತ್ರ ಕೃಪೆ: ರಣಬೀರ್ ಕಪೂರ್ ಇನ್​ಸ್ಟಾಗ್ರಾಮ್)

ರಣಬೀರ್ ಲುಕ್ ವಿವರಣೆ

ಲವ್ ಆ್ಯಂಡ್ ವಾರ್ ಚಿತ್ರದ ರಣಬೀರ್ ಲುಕ್ ಸಖತ್ ಆಗಿದೆ. ಆ ದಿನಗಳ ಸ್ಟೈಲಿಶ್ ವ್ಯಕ್ತಿ ಅನಿಸುತ್ತಾರೆ. ನೀಲಿ ಬಣ್ಣದ ವಿಂಟೇಜ್ ಕಾರ್ ಚಲಾಯಿಸುತ್ತಿದ್ದಾರೆ.

ಮುಖದಲ್ಲಿ ಯಾವುದೇ ಬದಲಾವಣೆ ಇಲ್ಲ. ಆತಂಕವೂ ಇಲ್ಲ. ಧರಿಸಿದ ಬಿಳಿ ಬಣ್ಣದ ಟೀ ಶರ್ಟ್ ಕೂಡ ಗಲೀಜ್ ಆಗಿಲ್ಲ. ಆದರೆ, ಎಡಗೈ ಮೇಲೆ ರಕ್ತ ಇದೆ.

ಚಿತ್ರದ ಎರಡು ಪೋಸ್ಟರ್ ರಿಲೀಸ್

ರಣಬೀರ್ ಕಪೂರ್ ಪಾತ್ರದ ಎರಡು ಪೋಸ್ಟರ್ ಹೊರ ಬಂದಿವೆ. ಎರಡರಲ್ಲೂ ಒಂದೇ ಲುಕ್ ಇದೆ. ಆದರೆ, ಕಾರ್ ಅಲ್ಲಿರೋ ಪೋಸ್‌ಗಳು ಬೇರೆ ಬೇರೆ ಇವೆ.

ಈ ಪೋಸ್ಟರ್‌ಗಳನ್ನ ಸ್ವತಃ ರಣಬೀರ್ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಲವ್ ಆ್ಯಂಡ್ ವಾರ್ ಚಿತ್ರದಲ್ಲಿ ತಮ್ಮ ಪಾತ್ರ ಹೇಗೆ ಇರುತ್ತದೆ ಅಂತಲೂ ತಿಳಿಸಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed