IPL 2026: ನಿಮಗೆಲ್ಲಾ ಚಪ್ಪಲಿಯಲ್ಲಿ ಹೊಡೆಯುವ ಟೈಮ್ ಬಂದಿದೆ! ಆ ಆಟಗಾರರ ಮೇಲೆ ಯುವಿ ಆಕ್ರೋಶ | ಕ್ರೀಡಾ ಸುದ್ದಿ | ACTPnews

ಪಂಜಾಬ್ ಆಟಗಾರರ ಮೇಲೆ ಯುವಿ ಆಕ್ರೋಶ


Last Updated:

ಐಪಿಎಲ್ 2026 ಸೀಸನ್ ಪ್ರಾರಂಭವಾಗುವ ಮೊದಲು, ಯುವರಾಜ್ ಸಿಂಗ್ ಈ ಮೂವರು ಆಟಗಾರರಿಗೆ ವಿಶೇಷ ವೈಯಕ್ತಿಕ ತರಬೇತಿಯನ್ನು ನೀಡಿದ್ದರು. ಯುವರಾಜ್ ಸಿಂಗ್ ಪ್ರಸ್ತುತ ಭಾರತದ ಅನೇಕ ಯುವ ಆಟಗಾರರಿಗೆ ತರಬೇತುದಾರ ಮತ್ತು ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ವೃತ್ತಿಜೀವನವನ್ನು ರೂಪಿಸುತ್ತಿದ್ದಾರೆ.

ಪಂಜಾಬ್ ಆಟಗಾರರ ಮೇಲೆ ಯುವಿ ಆಕ್ರೋಶ
ಪಂಜಾಬ್ ಆಟಗಾರರ ಮೇಲೆ ಯುವಿ ಆಕ್ರೋಶ

ಐಪಿಎಲ್ 2026 (IPL 2026) ಋತುವಿನ ಲೀಗ್ ಹಂತದ ಪಂದ್ಯಗಳು ರೋಮಾಂಚಕ ಹೋರಾಟ ಕೊನೆಗೊಂಡಿದೆ. ಮೇ 26ರಿಂದ ಪ್ಲೇಆಫ್ (IPL Playoff) ಪಂದ್ಯಗಳು ನಡೆಯಲಿದ್ದು, ಮುಂದಿನ ಭಾನುವಾರ ಐಪಿಎಲ್​ಗೆ ಹೊಸ ಚಾಂಪಿಯನ್ ಸಿಗಲಿದೆ. ಈ ಪಂದ್ಯಾವಳಿಯಲ್ಲಿ ಕೆಲವು ತಂಡಗಳ ಪಯಣ ರೋಲರ್ ಕೋಸ್ಟರ್ ರೀತಿಯಲ್ಲಿ ಅಂತ್ಯವಾಗಿದೆ. ಅದರಲ್ಲೂ ಪಂಜಾಬ್ ಕಿಂಗ್ಸ್ ತಂಡದ ಪ್ರಯಾಣವು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿತು. ಏಕೆಂದರೆ ಐಪಿಎಲ್ ಪಂದ್ಯಾವಳಿಯ ಆರಂಭದಲ್ಲಿ ಯಾವ ತಂಡವೂ ಅವರನ್ನ ಹಿಡಿಯಲು ಸಾಧ್ಯವಿಲ್ಲ ಎಂಬಂತೆ ಕಾಣುತ್ತಿದ್ದ ಪಂಜಾಬ್ ಕಿಂಗ್ಸ್ ದ್ವಿತೀಯಾರ್ಧದಲ್ಲಿ ಹೀನಾಯವಾಗಿ ವಿಫಲವಾಯಿತು.

ಪಂಜಾಬ್ ಆಟಗಾರರ ವೈಫಲ್ಯಕ್ಕೆ ಅಭಿಮಾನಿಗಳಿಂದ ಟೀಕೆ

ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಆಡಿದ ಮೊದಲ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿತ್ತು. 1 ಪಂದ್ಯವನ್ನು ಮಳೆಗೆ ಆಹುತಿಯಾಗಿ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಅಂತಹ ಅದ್ಭುತ ಆರಂಭದ ಹೊರತಾಗಿಯೂ, ಅದರ ನಂತರ, ಪಂಜಾಬ್ ತಂಡವು ಸರಣಿ ಸೋಲುಗಳನ್ನು ಅನುಭವಿಸಿತು. ಕೊನೆಯಲ್ಲಿ, ಅವರು ಪ್ಲೇಆಫ್ ರೇಸ್‌ನಿಂದ ಕೆಟ್ಟ ರೀತಿಯಲ್ಲಿ ಹೊರಹಾಕಲ್ಪಟ್ಟಿತು. ಈ ಭೀಕರ ಸೋಲಿನ ನಂತರ, ತಂಡದ ಆಟಗಾರರ ಪ್ರದರ್ಶನ ಮತ್ತು ಅವರ ಬೇಜವಾಬ್ದಾರಿತನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.

ಪೋಸ್ಟ್​ ನೋಡಿ ಯುವಿ ಕೋಪ

ಭಾರತದ ಮಾಜಿ ನಾಯಕ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮೂವರು ಸ್ಟಾರ್ ಆಟಗಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡವು ಹೀನಾಯವಾಗಿ ವಿಫಲವಾಯಿತು ಮತ್ತು ಪ್ಲೇ ಆಫ್‌ನಿಂದ ಹೊರಬಿದ್ದಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಆಟಗಾರರ ಮೋಜು ಮಸ್ತಿ, ರೀಲ್ಸ್ ಮಾಡಿಕೊಂಡು ಸಮಯ ಕಳೆಯುತ್ತಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. “ನಿಮ್ಮೆಲ್ಲರನ್ನೂ ಚಪ್ಪಲಿಯಿಂದ ಹೊಡೆಯುವ ಸಮಯ ಬಂದಿದೆ” ಎಂದು ಯುವಿ ನೇರವಾಗಿ ಟೀಕಿಸಿದ್ದಾರೆ. ಯುವಿ ಟೀಕೆ ಕ್ರಿಕೆಟ್ ವಲಯಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು ಯುವರಾಜ್ ಈ ಕಾಮೆಂಟ್​ಅನ್ನ ತಮಾಷೆಯಾಗಿ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಯುವಿ ಕಮೆಂಟ್ ಹಿಂದಿನ ರಹಸ್ಯ

ಈ ವಿವಾದದ ಮೂಲ ಕಾರಣಗಳನ್ನ ಹುಡುಕುತ್ತಾ ಹೋದರೆ, ಐಪಿಎಲ್ 2026 ರ ಅಂತಿಮ ಲೀಗ್ ಪಂದ್ಯ ಮುಗಿದ ನಂತರ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋವನ್ನ ಹಂಚಿಕೊಂಡರು. ಈ ಫೋಟೋದಲ್ಲಿ ಅವರು ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಮತ್ತು ಯುವ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹರ್ಪ್ರೀತ್ ಬ್ರಾರ್ ಈ ಫೋಟೋಗೆ, ಒಬ್ಬ ಸ್ಲಾಗರ್​ ಮತ್ತೊಬ್ಬ ವ್ಲಾಗರ್ ಎಂದು ಕ್ಯಾಪ್ಷನ್​ ನೀಡಿದ್ದರು.

ಅರ್ಷದೀಪ್ ಸಿಂಗ್ ಸದಾ ರೀಲ್ಸ್, ಲೈವ್ ವ್ಲಾಗ್ ಮಾಡುವುದರಿಂದ ಅವರನ್ನ ಒಬ್ಬ ಬ್ಲಾಗರ್ ಅಂತಲೂ. ಪ್ರಿಯಾಂಶ್ ಆರ್ಯನನ್ನು ತಮಾಷೆಯಾಗಿ ಸ್ಲಾಗರ್, ಅಂದರೆ ಎಲ್ಲಾ ಎಸೆತಗಳನ್ನ ಬೀಸುವವರು ಎಂದು ಉಲ್ಲೇಖಿಸಿದರು. ಪ್ಲೇಆಫ್‌ಗಳಿಂದ ತಂಡದ ನಿರ್ಗಮನದ ಬಗ್ಗೆ ಅಭಿಮಾನಿಗಳು ಬೇಸರದಲ್ಲಿದ್ದರೆ, ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಈ ಆಟಗಾರರು ಇಂತಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವುದನ್ನು ನೋಡಿ ಯುವರಾಜ್ ಸಿಂಗ್ ತುಂಬಾ ಕೋಪಗೊಂಡು. “ನಿಮ್ಮ ಮೂವರಿಗೂ ಚಪ್ಪಲಿಯಿಂದ ಹೊಡೆಯುವ ಸಮಯ ಬಂದಿದೆ” ಎಂದು ಯುವರಾಜ್ ಕಾಮೆಂಟ್ ಮಾಡಿದ್ದರು.

ಹರ್​ಪ್ರೀತ್ ಬ್ರಾರ್​ ಪೋಸ್ಟ್​ಗೆ ಯುವಿ ಕಮೆಂಟ್
ಸ್ವತಃ ತರಬೇತಿ ನೀಡಿದ್ದ ಆರ್ಯ

ವಾಸ್ತವವಾಗಿ, ಐಪಿಎಲ್ 2026 ಸೀಸನ್ ಪ್ರಾರಂಭವಾಗುವ ಮೊದಲು, ಯುವರಾಜ್ ಸಿಂಗ್ ಈ ಮೂವರು ಆಟಗಾರರಿಗೆ ವಿಶೇಷ ವೈಯಕ್ತಿಕ ತರಬೇತಿಯನ್ನು ನೀಡಿದ್ದರು. ಯುವರಾಜ್ ಸಿಂಗ್ ಪ್ರಸ್ತುತ ಭಾರತದ ಅನೇಕ ಯುವ ಆಟಗಾರರಿಗೆ ತರಬೇತುದಾರ ಮತ್ತು ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ವೃತ್ತಿಜೀವನವನ್ನು ರೂಪಿಸುತ್ತಿದ್ದಾರೆ. ದೆಹಲಿಯ ಯುವ ಕ್ರಿಕೆಟಿಗ ಪ್ರಿಯಾಂಶ್ ಆರ್ಯ ಅವರ ಪ್ರದರ್ಶನವನ್ನು ಸುಧಾರಿಸಲು ಯುವರಾಜ್ ಸಿಂಗ್ ಕಾರಣ ಎಂದು ಸ್ವತಃ ಆರ್ಯ ಹೇಳಿಕೊಂಡಿದ್ದರು. ಅದಕ್ಕಾಗಿಯೇ ಮಾರ್ಗದರ್ಶಕರ ಸ್ಥಾನದಲ್ಲಿದ್ದ ಯುವ್ವಿ, ಟೂರ್ನಿಯಲ್ಲಿ ವಿಫಲರಾದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯಾಗಿ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಮೂವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed