Asian Games: ಏಷ್ಯನ್ ಗೇಮ್ಸ್ ಅಂಗಳಕ್ಕೆ ಚಿಕ್ಕಮಗಳೂರಿನ ಕುವರಿ ಎಂಟ್ರಿ! | ಚಿಕ್ಕಮಗಳೂರು ನ್ಯೂಸ್ (Chikkamagaluru News) | ACTPnews

ಏಷ್ಯನ್ ಗೇಮ್ಸ್


Last Updated:

ಚಿಕ್ಕಮಗಳೂರು ಜಿಲ್ಲೆಯ ಸುಪ್ರಿಯಾ ಸಿಂದಿಗೆರೆ ಬಸವರಾಜು ಹೈಜಂಪ್ ವಿಭಾಗದಲ್ಲಿ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. ಇವರು ಭಾರತವನ್ನು ಪ್ರತಿನಿಧಿಸಲಿದ್ದು, ತಮ್ಮ ಅತ್ಯುತ್ತಮ ಜಿಗಿತದ ಮೂಲಕ ದೇಶದ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಏಷ್ಯನ್ ಗೇಮ್ಸ್
ಏಷ್ಯನ್ ಗೇಮ್ಸ್

ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಮತ್ತೊಂದು ಸುವರ್ಣ ಗರಿ ಮೂಡಿದೆ. ಹೈಜಂಪ್ (ಎತ್ತರ ಜಿಗಿತ) ಕ್ರೀಡೆಯಲ್ಲಿ (Sports) ಅದ್ಭುತ ಪ್ರದರ್ಶನ ನೀಡುತ್ತಿರುವ ಕಾಫಿನಾಡಿನ ಹೆಮ್ಮೆಯ ಕುವರಿ ಸುಪ್ರಿಯಾ ಸಿಂದಿಗೆರೆ ಬಸವರಾಜು, ಪ್ರತಿಷ್ಠಿತ ಏಷ್ಯನ್ ಗೇಮ್ಸ್ (Asian Games) ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಥ್ಲೆಟಿಕ್ಸ್ ನ ಹೈಜಂಪ್ ವಿಭಾಗದಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲಿರುವ ಸುಪ್ರಿಯಾ, ತಮ್ಮ ಅದ್ಭುತ ಜಿಗಿತದ ಮೂಲಕ ಇಡೀ ದೇಶದ ಗಮನ ಸೆಳೆಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

ಸುಪ್ರಿಯಾ ಅವರ ಸ್ಪೂರ್ತಿದಾಯಕ ಕ್ರೀಡಾ ಪಯಣ

ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಪ್ರಿಯಾ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರು.7ನೇ ತರಗತಿಯಲ್ಲಿ ಸಿಂದಿಗೆರೆಯ ಶ್ರೀಗುರು ಬಸವೇಶ್ವರ ಶಾಲೆಯಲ್ಲಿ ಓದುವಾಗ ಶಾಲಾ ಕ್ರೀಡಾಕೂಟದಲ್ಲಿ ಹೈಜಂಪ್ ಆರಂಭಿಸಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿದರು.8ನೇ ತರಗತಿಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ನಂತರ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ಪೋಟ್ರ್ಸ್ ಕೋಟಾದಡಿ ಉಚಿತ ಪ್ರವೇಶ ಪಡೆದು ಕಠಿಣ ಪರಿಶ್ರಮ ಮುಂದುವರಿಸಿದರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಇವರದ್ದಾಗಿದೆ.
ಸವಾಲುಗಳು ಮತ್ತು ಬೆಂಬಲ

ಕ್ರೀಡಾ ಪಯಣದಲ್ಲಿ ಆರೋಗ್ಯದ ಗಂಭೀರ ಸಮಸ್ಯೆಗಳು ಕಾಡಿದರೂ, ಧೃತಿಗೆಡದೆ ಫಿನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು ನಿಂತು ಕಠಿಣ ಅಭ್ಯಾಸ ನಡೆಸಿದರು. ಬೆಂಗಳೂರಿನಲ್ಲಿ ಅಭ್ಯಾಸ ಮಾಡಲು ಆರ್ಥಿಕ ಅಡಚಣೆ ಎದುರಾದಾಗ ಚಿಕ್ಕಮಗಳೂರಿನ ‘ಲೈನ್ ಫೀಡ್ಸ್’ ಮಾಲೀಕರಾದ ಕಿಶೋರ್ ಕುಮಾರ್ ಅವರು ಬೆನ್ನೆಲುಬಾಗಿ ನಿಂತು ಆರ್ಥಿಕ ನೆರವು ನೀಡಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports