Shivaraj Kumar: ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್! ವೇದಿಕೆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews

ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್; ಇನ್ನು ಏನೆಲ್ಲ ಆಯಿತು ಗೊತ್ತಾ?


Last Updated:

ಪೆದ್ದಿ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ನಾಯಕ ನಟ ಪೆದ್ದಿಯನ್ನ ಕೊಂಡಾಡಿದ್ದಾರೆ. ಮೆಗಾ ಫ್ಯಾಮಿಲಿಯ ಬಾಂಡಿಂಗ್ ಅನ್ನು ನೆನೆಪಿಸಿಕೊಂಡಿದ್ದಾರೆ. ಇದೇ ವೇಳೆ ಅಪ್ಪು ಬಗ್ಗೆನೂ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್; ಇನ್ನು ಏನೆಲ್ಲ ಆಯಿತು ಗೊತ್ತಾ?
ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್; ಇನ್ನು ಏನೆಲ್ಲ ಆಯಿತು ಗೊತ್ತಾ?

ರಾಮ್ ಚರಣ್ (Ram Charan) ಮತ್ತು ಶಿವರಾಜ್ ಕುಮಾರ್ (Shivaraj Kumar) ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಪೆದ್ದಿ ಚಿತ್ರದ ಪ್ರಮೋಷನ್ ಇವೆಂಟ್ ಅಲ್ಲಿಯೇ ಇವರು ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ವೇದಿಕೆ ಮೇಲೂ ಹತ್ತಿದ್ದಾರೆ. ಪೆದ್ದಿ ರಾಮ್ ಚರಣ್ ಬಗ್ಗೆ ಶಿವರಾಜ್ ಕುಮಾರ್ ಮನಸಾರೆ ಮಾತನಾಡಿದ್ದಾರೆ. ರಾಮ್ ಚರಣ್ (Ram Charan) ಬೆಳೆದು ಬಂದ ರೀತಿಯನ್ನು ಹೊಗಳಿದ್ದಾರೆ. ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ರಾಮ್ ಚರಣ್ ಬಾಂಡಿಂಗ್ ಹೇಗಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇದೇ ಸಮಯದಲ್ಲೂ ಅಪ್ಪು (Appu) ಹೆಸರನ್ನು ಶಿವರಾಜ್ ಕುಮಾರ್ ತೆಗೆದುಕೊಂಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೆಗಾ ಫ್ಯಾಮಿಲಿ ಬಾಂಡಿಂಗ್ ಗ್ರೇಟ್

ರಾಮ್ ಚರಣ್ ಫ್ಯಾಮಿಲಿ ಹೇಗಿದೆ ಅನ್ನೋದು ಗೊತ್ತೇ ಇದೆ. ಪವನ್ ಕಲ್ಯಾಣ್, ರಾಮ್ ಚರಣ್, ಚಿರಂಜೀವಿ ಇವರ ಬಾಂಡಿಂಗ್ ಗ್ರೇಟ್ ಬಿಡಿ. ಇದನ್ನ ನೋಡೋದೆ ಚೆಂದ.

Telugu Peddi Movie Janhvi Kapoor Shiva Rajkumar Ram Charan Bengaluru Promotional Event Latest Updates

ಮೆಗಾ ಫ್ಯಾಮಿಲಿ ಬಾಂಡಿಂಗ್ ಗ್ರೇಟ್

ಆ ರೀತಿನೇ ಇರೋ ಇವರು ಪರಸ್ಪರ ತುಂಬಾನೆ ಗೌರವ ಕೊಡ್ತಾರೆ. ಹಾಗೆ ರಾಮ್ ಚರಣ್ ಬೆಳವಣಿಗೆಯನ್ನ ಕಂಡಿದ್ದೇನೆ. ನಿಜಕ್ಕೂ ಅದು ಗ್ರೇಟ್ ಆಗಿಯೇ ಇದೆ.

ನನಗೆ ಅಪ್ಪು ತರ ರಾಮ್ ಚರಣ್

ರಾಮ ಚರಣ್ ನನಗೆ ಅಪ್ಪು ತರವೇ ನೋಡಿ. ಆ ಒಂದು ಭಾವನೆ ಮೂಡಿಸಿದ್ದಾರೆ. ಅದೇ ಗೌರವ ಕೊಡ್ತಾರೆ. ನಮ್ಮ ಚಿತ್ರದಲ್ಲಿ ನಟಿಸಿ ಅಂದಾಗ ಓಕೆ ಅಂತ ಹೇಳಿದೆ. ಕಾರಣ ರಾಮ್ ಚರಣ್ ಅನ್ನು ಅರ್ಥದಲ್ಲೂ ಶಿವಣ್ಣ ಇಲ್ಲಿ ಹೇಳಿದ್ದಾರೆ.

ಶಿವಣ್ಣನ ಬಗ್ಗೆ ರಾಮ್ ಚರಣ್ ಕೂಡ ಮಾತನಾಡಿದ್ದಾರೆ. ಶಿವಣ್ಣ ನನಗೆ ಎಲ್ಲವೂ ಆಗಿದ್ದಾರೆ. ಗುರು, ಬ್ರದರ್, ಅಂಕಲ್ ಹೀಗೆ ಎಲ್ಲವೂ ಆಗಿದ್ದಾರೆ. ಇವರ ಜೊತೆಗೆ ಕೆಲಸ ಮಾಡೋದೇ ಒಂದು ದೊಡ್ಡ ಖುಷಿ ಅಂತಲೂ ಹೇಳಿದ್ದಾರೆ.

ಒಂದೇ ಸೀನ್ ಅಲ್ಲಿ ನಟಿಸಿದ್ದೇನೆ

ಶಿವರಾಜ್ ಕುಮಾರ್ ಅವರ ಬಗ್ಗೆ ಜಾನ್ವಿ ಕಪೂರ್ ಅಷ್ಟೆ ಖುಷಿಯಲ್ಲಿಯೇ ಮಾತನಾಡಿದ್ದಾರೆ. ಶಿವಣ್ಣನ ಜೊತೆಗೆ ನನ್ನ ಸೀನ್‌ಗಳು ಜಾಸ್ತಿ ಏನೂ ಇಲ್ಲ.
Telugu Peddi Movie Janhvi Kapoor Shiva Rajkumar Ram Charan Bengaluru Promotional Event Latest Updates

ಜೂನ್-4 ಪೆದ್ದಿ ರಿಲೀಸ್

ಒಂದೇ ಒಂದು ಸೀನ್ ಅಲ್ಲಿ ನಟಿಸಿದ್ದೇನೆ. ಆದರೆ, ಇವರು ಅದೆಂತಹ ಮಹಾನ್ ಕಲಾವಿದರು ಅನ್ನೋದು ಅಷ್ಟರಲ್ಲಿಯೇ ನನಗೆ ಗೊತ್ತಾಗಿದೆ. ಇವರ ಕಣ್ಣುಗಳೇ ಸಾಕಷ್ಟು ಹೇಳುತ್ತವೆ. ಅವರ ಕಣ್ಣುಗಳು ಅದೆಷ್ಟು ಪವರ್ ಫುಲ್ ಅನ್ನೋದು ನನಗೆ ಗೊತ್ತಿದೆ ಅಂತಲೇ ಜಾನ್ವಿ ಕಪೂರ್ ಹೇಳಿಕೊಂಡಿದ್ದಾರೆ.

ಶಿವಣ್ಣನ ಕಣ್ಣು AK47 ಗನ್ನು

ಜಾನ್ವಿ ಕಪೂರ್ ಹೇಳಿದ ಮಾತುಗಳನ್ನ ಕೇಳಿದ ಅಭಿಮಾನಿಗಳಲ್ಲಿ ಯಾರೋ ಒಬ್ಬರು ಒಂದು ಮಾತು ಹೇಳಿದರು. ಶಿವಣ್ಣನ ಕಣ್ಣು AK47 ಗನ್ನು ಅಂತಲೇ ಬಣ್ಣಿಸಿದರು.

ಜೂನ್-4 ಪೆದ್ದಿ ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ಬಹು ಭಾಷೆಯಲ್ಲಿ ಇದು ತೆರೆಗೆ ಬರುತ್ತಿದೆ. ಕನ್ನಡ, ಹಿಂದಿ, ತಮಿಳು ಹೀಗೆ ಈ ತೆಲುಗು ಸಿನಿಮಾ ಇತರ ಭಾಷೆಗೂ ಡಬ್ ಆಗಿದೆ.

ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಬುಚಿ ಬಾಬು ಸನಾ ಈ ಸಿನಿಮಾವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರ ಒಂದು ಕ್ರೀಡಾಧರಿಸಿದ ಸಿನಿಮಾ ಆಗಿದೆ. ಇದು ನಿರೀಕ್ಷೆಯನ್ನು ಹುಟ್ಟುಹಾಕಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed