Mango Pachcha Movie: ಒಟಿಟಿಗೆ ಬಂತು ಸುದೀಪ್ ಅಳಿಯನ ಮೊದಲ ಸಿನಿಮಾ | | ACTPnews

kichcha sudeep nephew sanchith sanjeev mango pachcha streaming updates


ಒಟಿಟಿಗೆ ಮ್ಯಾಂಗೋ ಪಚ್ಚ

ಮ್ಯಾಂಗೊ ಪಚ್ಚ ಚಿತ್ರ ಒಟಿಟಿಗೆ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿಯೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಎಲ್ಲಿ ಯಾವಾಗ ಅನ್ನೋದನ್ನ ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ ಹೇಳಿಕೊಂಡಿದೆ.
ಒಟಿಟಿಗೆ ಬಂದೇ ಬಿಡ್ತು ಮ್ಯಾಂಗೋ ಪಚ್ಚ

(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್​ಸ್ಟಾಗ್ರಾಮ್)

ಜೀಯೋ ಹಾಟ್‌ಸ್ಟಾರ್ ಅಲ್ಲಿ ಮ್ಯಾಂಗೋ ಪಚ್ಚ ಸ್ಟ್ರೀಮಿಂಗ್ ಆಗುತ್ತಿದೆ. ಈ ವಿಷಯವನ್ನ ಚಿತ್ರದ ನಾಯಕ ನಟ ಸಂಚಿತ್ ಸಂಜೀವ್ ಕೂಡ ಈ ಪ್ರೋಮೋದಲ್ಲಿ ಹೇಳಿಕೊಂಡಿದ್ದಾರೆ.

ಸೆಪ್ಟೆಂಬರ್-25 ರಿಂದ ಸ್ಟ್ರೀಮಿಂಗ್

ಸೆಪ್ಟೆಂಬರ್-25 ರಂದು ಈ ಚಿತ್ರ ಜೀಯೋ ಹಾಟ್‌ಸ್ಟಾರ್‌ ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್ ಅಲ್ಲಿ ಈ ಚಿತ್ರ ನೋಡದೇ ಇರೋರು ಜೀಯೋ ಹಾಟ್‌ಸ್ಟಾರ್ ಅಲ್ಲಿ ಈ ಚಿತ್ರ ನೋಡಬಹುದಾಗಿದೆ.

ವಿವೇಕ್ ಸಿನಿಮಾ ಡೈರೆಕ್ಟರ್

ಈ ಚಿತ್ರವನ್ನ ನವ ನಿರ್ದೇಶಕ ವಿವೇಕ್ ಪ್ರಕಾಶ್ ಡೈರೆಕ್ಷನ್ ಮಾಡಿದ್ದಾರೆ. ಸಂಚಿತ್ ಸಂಜೀವ್ ಅವರಿಗೆ ಇದು ಮೊದಲ ಚಿತ್ರವೇ ಆಗಿತ್ತು. ಇದನ್ನ ಅಷ್ಟೆ ಶ್ರದ್ಧೆಯಿಂದಲೇ ಸಂಚಿತ್ ಸಂಜೀವ್ ಮಾಡಿದ್ದರು.

ಕಾಜಲ್ ಕುಂದರ್ ಈ ಚಿತ್ರದಲ್ಲಿ ಸಂಚಿತ್‌ಗೆ ಜೋಡಿ ಆಗಿದ್ದರು. ಕನ್ನಡದ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಚರಣ್ ರಾಜ್‌ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದರು.

kichcha sudeep nephew sanchith sanjeev mango pachcha streaming updates

ಸೆಪ್ಟೆಂಬರ್-25 ರಿಂದ ಸ್ಟ್ರೀಮಿಂಗ್

(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್​ಸ್ಟಾಗ್ರಾಮ್)

ಚಿತ್ರಕ್ಕೆ ಬಂದ ವಿಮರ್ಶೆ

ಚಿತ್ರದ ನಾಯಕ ನಟ ಸಂಚಿತ್ ಸಂಜೀವ್ ಅಭಿನಯದ ಬಗ್ಗೆ ಒಳ್ಳೆ ಅಭಿಪ್ರಾಯ ಬಂದಿವೆ. ಮೊದಲ ಚಿತ್ರದಲ್ಲಿಯೇ ಅದ್ಭುತ ಅನಿಸುವ ರೀತಿನೇ ಅಭಿನಯಿಸಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿವೆ.

ಈ ಚಿತ್ರದ ಸಂಗೀತದ ಬಗ್ಗೆನೂ ಒಳ್ಳೆ ಓಪಿನಿಯರ್ ಬಂದಿವೆ. ಚರಣ್ ರಾಜ್ ಅವರ ಸಂಗೀತ ಉತ್ತಮ ಅಂತಲೂ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾವನಾತ್ಮಕ ಸ್ಟೋರಿ

ಈ ಚಿತ್ರ ಭೂಗತ ಲೋಕದ ಕತೆ ಹೊಂದಿದೆ. ಡ್ರಗ್ಸ್ ದಂಧೆ ಕುರಿತು ಹೇಳುತ್ತದೆ. ಆದರೆ, ಇಲ್ಲಿ ಭಾವನಾತ್ಮಕ ಸ್ಟೋರಿನೂ ಇದೆ. ಅಣ್ಣ ಮತ್ತು ತಮ್ಮನ ಕತೆಯನ್ನ ಇಲ್ಲಿ ನೋಡಬಹುದು.

ಈ ಚಿತ್ರದಲ್ಲಿ ಇನ್ನೂ ಒಂದು ಸೆಳೆತ ಇದೆ. ಅದೇನು ಅಂದ್ರೆ ಆ ದಿನಗಳ ಚಿತ್ರಣ ನೋಡಿ. ಹೌದು, 2001 ರಿಂದ 2010 ರವರೆಗಿನ ಸಮಯದಲ್ಲಿ ಮೈಸೂರು ಹೇಗಿತ್ತು ಅನ್ನೋದನ್ನು ಈ ಚಿತ್ರದಲ್ಲಿ ನೋಡಬಹುದು.

ಆಗಿನ ಸಿಡಿ ಅಂಗಡಿಗಳು, ಬಿಪಿಎಲ್‌ ಟಿವಿ, ಮಾರುತಿ ಝನ್ ಕಾರ್‌ ಅನ್ನ ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು. ಇನ್ನುಳಿದಂತೆ ಈ ಚಿತ್ರ ಒಟಿಟಿಗೆ ಬರ್ತಿದೆ. ಥಿಯೇಟರ್ ಅಲ್ಲಿ ಮಿಸ್ ಮಾಡಿಕೊಂಡವರು ಇದನ್ನ ಜೀಯೋ ಹಾಟ್‌ಸ್ಟಾರ್ ಅಲ್ಲಿ ನೋಡಬಹುದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed