Last Updated:
ಭಾರತೀಯ ರೈಲ್ವೆ ಹೈದರಾಬಾದ್-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ, ಬೆಂಗಳೂರು-ಚೆನ್ನೈ 306 ಕಿಮೀ ಮಾರ್ಗ, 15.94 ಕಿಮೀ ಸುರಂಗ, ಶಂಶಾಬಾದ್ ವಿಮಾನ ನಿಲ್ದಾಣ ಸಂಪರ್ಕ ಯೋಜನೆ.
ಬೆಂಗಳೂರು: ಟ್ರಾಫಿಕ್‍ನಲ್ಲಿ (Traffic) ಸಿಲುಕಿ ಬೇಸತ್ತಿರುವ ಬೆಂಗಳೂರಿಗರಿಗೆ (Bengaluru) ಭಾರತೀಯ ರೈಲ್ವೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಬಜೆಟ್‍ನಲ್ಲಿ ಘೋಷಣೆಯಾದಂತೆ, ಹೈದರಾಬಾದ್ (Hyderabad) ಮತ್ತು ಚೆನ್ನೈ (Chennai) ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು (Train) ಯೋಜನೆಗೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಈ ರೈಲು ಹಳಿಗಳ ಜೋಡಣೆ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ರೈಲ್ವೆ ಇಲಾಖೆಯು ಪ್ಲಾನ್ ರಿಲೀಸ್ ಮಾಡಿದೆ.
ಇದು ಅಂತಿಂತಾ ಯೋಜನೆಯಲ್ಲ, ಬೆಂಗಳೂರಿನೊಳಗೆ ಬರೋಬ್ಬರಿ 15.94 ಕಿಲೋಮೀಟರ್ ಉದ್ದದ ಸುರಂಗ ನಿರ್ಮಾಣವಾಗಲಿದೆ. ಈ 607 ಕಿಮೀ ಉದ್ದದ ಮಾರ್ಗವು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೀರಾ ಹತ್ತಿರವಾಗಿ ಸಾಗಲಿದ್ದು, ಚಿಕ್ಕಬಳ್ಳಾಪುರದ ಅಲಿಪುರ, ಅನಂತಪುರ, ಕರ್ನೂಲ್ ಮೂಲಕ ಹೈದರಾಬಾದ್‍ನ ಶಂಶಾಬಾದ್ ವಿಮಾನ ನಿಲ್ದಾಣವನ್ನು ತಲುಪಲಿದೆ.
ಭಾರತದ ಮೊದಲ ಬುಲೆಟ್ ರೈಲು ಶೀಘ್ರದಲ್ಲೇ ಪ್ರಾರಂಭವಾಗಲಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಈ ಬುಲೆಟ್ ರೈಲು ಓಡಲಿದೆ. ಇದರ ಕಾರ್ಯಾಚರಣೆ “ಶೀಘ್ರದಲ್ಲೇ” ಪ್ರಾರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 2 ಗಂಟೆ 7 ನಿಮಿಷಗಳಿಗೆ ಇಳಿಸುತ್ತದೆ ಎಂದು ಅವರು ಹೇಳಿದ್ದರು.
Bangalore [Bangalore],Bangalore,Karnataka













