Ranbir Kapoor: ಮೋದಿ ಹುಟ್ಟುಹಬ್ಬಕ್ಕೆ ಆಲಿಯಾ-ರಣ್‌ಬೀರ್ ವಿಶೇಷ ಗಿಫ್ಟ್; 20 ಶಾಲೆಗಳಿಗೆ ಹೊಸ ರೂಪ! | | ACTPnews

News18


Last Updated:

ಪ್ರಧಾನಿ ಮೋದಿ ಜನ್ಮದಿನ: ಆಲಿಯಾ ಭಟ್, ರಣ್‌ಬೀರ್ ಕಪೂರ್ ಸೇವಾ ಸಂಕಲ್ಪ ಅಭಿಯಾನಕ್ಕೆ ಬೆಂಬಲ, ಮುಂಬೈನ 20 ಶಾಲೆಗಳ ನವೀಕರಣಕ್ಕೆ ಸಂಕಲ್ಪ.

News18
News18

ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ 76ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್ (Alia Bhatt) ಮತ್ತು ರಣ್‌ಬೀರ್ ಕಪೂರ್ (Ranbir Kapoor) ವಿಶೇಷ ಸಾಮಾಜಿಕ ಕಾರ್ಯವೊಂದಕ್ಕೆ ಕೈಜೋಡಿಸಿದ್ದಾರೆ. ಪ್ರಧಾನಿ ಮೋದಿ ಅವರ ಸಾರ್ವಜನಿಕ ಸೇವೆಯ 25 ವರ್ಷಗಳನ್ನು ಗುರುತಿಸಿ ಆರಂಭವಾಗಿರುವ ಸೇವಾ ಸಂಕಲ್ಪ ಅಭಿಯಾನಕ್ಕೆ (Seva Sankalp Abhiyan) ಬೆಂಬಲ ಸೂಚಿಸಿರುವ ಈ ಜೋಡಿ, ಮುಂಬೈನ 20 ಶಾಲೆಗಳ ನವೀಕರಣಕ್ಕೆ ಸಂಕಲ್ಪ ಮಾಡಿದೆ.

ಆಲಿಯಾ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ, ತಾವು ಮತ್ತು ರಣ್‌ಬೀರ್ ಕೈಗೊಂಡಿರುವ ಸಾಮಾಜಿಕ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ ಶಿಫಾರಸುಗಳ ಆಧಾರದ ಮೇಲೆ 20 ಶಾಲೆಗಳನ್ನು ನವೀಕರಿಸಲು ತಾವು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಸೇವಾ ಸಂಕಲ್ಪ ಅಭಿಯಾನವು ಪ್ರಧಾನಿ ಮೋದಿಯವರ ಸಾರ್ವಜನಿಕ ಸೇವೆಯ 25 ವರ್ಷಗಳನ್ನು ಗುರುತಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಸೆಪ್ಟೆಂಬರ್ 17ರಿಂದ ಆರಂಭವಾಗಿರುವ ಈ ಅಭಿಯಾನದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಬಾಲಿವುಡ್ ತಾರೆಯರಿಂದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉಪಕ್ರಮಗಳು ಘೋಷಣೆಯಾಗಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed