Asian Games 2026: ಶ್ರೀಚರಣಿ ಮ್ಯಾಜಿಕ್ ಬೌಲಿಂಗ್, ಶಫಾಲಿ ಬ್ಯಾಟಿಂಗ್ ಫೈರ್! ಜಪಾನ್ ವಿರುದ್ಧ 5 ಓವರ್‌ನಲ್ಲೇ ಭಾರತಕ್ಕೆ ಗೆಲುವು | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಬ್ಬರ ಶುರುಮಾಡಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು ಸೋಲಿಸಿದೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ (Asian Games) 2026 ರ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ಭಾರತ (India) ಮತ್ತು ಜಪಾನ್ (Japan) ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆಯಿತು. ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು 8 ವಿಕೆಟ್‌ಗಳಿಂದ ಭಾರತ ಸೋಲಿಸಿದೆ. ಈ ಮೂಲಕ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಪಡೆ ಏಷ್ಯನ್ ಗೇಮ್ಸ್ ಸೆಮಿಫೈನಲ್‌ಗೆ ತಲುಪಿತು. ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ಭಾರತದ ಗೆಲುವಿನಲ್ಲಿ ಶ್ರೀಚರಣಿ (Sricharani) ಮತ್ತು ಶಫಾಲಿ ವರ್ಮಾ (Shree Charani) ಮಿಂಚಿದರು.

ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದರು. ಜಪಾನ್ ಮೊದಲು ಬ್ಯಾಟ್ ಮಾಡಿ 19.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 57 ರನ್ ಗಳಿಸಿತು. ಭಾರತ ತಂಡ ಕೇವಲ 5 ಓವರ್‌ಗಳಲ್ಲಿ 8 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿತು.

ಶಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್‌ ಮಾಡಿ ಭಾರತ ಕೇವಲ 30 ಎಸೆತಗಳಲ್ಲಿ ಪಂದ್ಯವನ್ನು ಮುಗಿಸಲು ನೆರವಾದರು. ಈ ಗೆಲುವಿನಿಂದ ಭಾರತ ಸೆಮಿಫೈನಲ್‌ಗೆ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಎದುರಿಸಲಿದೆ.

ಜಪಾನ್ ಬ್ಯಾಟರ್​​​ಗಳಿಗೆ ನಿರಾಸೆ!

ಟಾಸ್ ಸೋತ ಜಪಾನ್ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಪವರ್‌ಪ್ಲೇಯಲ್ಲಿ ಒಂದು ವಿಕೆಟ್ ಕೂಡ ಬೀಳಲಿಲ್ಲ. ಆರಂಭಿಕ ಆಟಗಾರ್ತಿ ಅಯಕಾ ಕ್ಯಾಟೊ-ಸ್ಟಾಫರ್ಡ್ 25 ರನ್ ಗಳಿಸಿ ತಂಡಕ್ಕೆ ಒಳ್ಳೆಯ ಇನ್ನಿಂಗ್ಸ್ ನೀಡಿದರು. ಹರುನಾ ಇವಾಸಕಿ ಕೂಡ 10 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟು ಬೇರೆ ಯಾರೂ ಎರಡಂಕಿ ರನ್ ತಲುಪಲಿಲ್ಲ. ಕೊನೆಗೆ ಜಪಾನ್ 19.5 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು ಕೇವಲ 57 ರನ್ ಮಾತ್ರ ಗಳಿಸಿತು.

ಶ್ರೀಚರಣಿ ಮ್ಯಾಜಿಕ್ ಬೌಲಿಂಗ್!

ಭಾರತದ ಪರ ಶ್ರೀ ಚರಣಿ ಚೆನ್ನಾಗಿ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಕಬಳಿಸಿದರು. ಶೆಫಾಲಿ ವರ್ಮಾ ಕೂಡ ಚೆನ್ನಾಗಿ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರು. ಶ್ರೇಯಾಂಕ ಪಾಟೀಲ್ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು. ತಂಡ ಚೆನ್ನಾಗಿ ಫೀಲ್ಡಿಂಗ್ ಮಾಡಿದ್ದರಿಂದ ಎರಡು ರನೌಟ್ ಆದವು. ಮೊದಲ ಇನ್ನಿಂಗ್ಸ್ ಮುಗಿದ ನಂತರ ಜಪಾನ್ ತಂಡ ಆಲೌಟಾಯಿತು.

ಟೀಮ್ ಇಂಡಿಯಾಗೆ ಅದ್ಭುತ ಗೆಲುವು

ಭಾರತ ತಂಡ 58 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿತ್ತು. ಆದರೆ ಉತ್ತಮ ಆರಂಭ ಸಿಗಲಿಲ್ಲ. 24 ರನ್‌ಗಳಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಕಮಲಿನಿ ಒಂದೇ ಒಂದು ರನ್ ಗಳಿಸಲಿಲ್ಲ. ಭಾರತಿ ಫೂಲ್ಮಾಲಿ ಕೇವಲ 6 ರನ್ ಗಳಿಸಿದರು. ಆದರೆ ಶಫಾಲಿ ವರ್ಮಾ 15 ಬಾಲ್‌ಗಳಲ್ಲಿ 40 ರನ್ ಗಳಿಸಿ ಅಜೇಯವಾಗುಳಿದರು. 6 ಬೌಂಡರಿ ಮತ್ತು 2 ಸಿಕ್ಸರ್ ಹೊಡೆದು 266.67 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು.

ರಿಚಾ ಘೋಷ್ ಕೂಡ ಶಫಾಲಿ ವರ್ಮಾ ಜೊತೆಗೆ ಆಡಿ, 12 ರನ್ ಮಾಡಿ ಔಟಾಗದೆ ಉಳಿದರು. ಇದರಿಂದ ಭಾರತ ತಂಡ ಕೇವಲ 5 ಓವರ್‌ನಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು ಪಂದ್ಯ ಗೆದ್ದಿತು. ಈ ಗೆಲುವಿನಿಂದ ಭಾರತ ತಂಡ 2026 ಏಷ್ಯನ್ ಗೇಮ್ಸ್‌ನ ಸೆಮಿಫೈನಲ್‌ಗೆ ಎಂಟ್ರಿಉ ಕೊಟ್ಟಿದೆ. ಸೆಮಿಫೈನಲ್ ಪಂದ್ಯ ಸೆಪ್ಟೆಂಬರ್ 20 ರಂದು ನಡೆಯಲಿದೆ. ಭಾರತ ತಂಡ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed